ಕ್ಲ್ಯೂ ಹಿಡಿದು ಬಂದಳು ಕ್ಲೂನಿಯ ಹೆಂಡತಿ!
ಮಾಲ್ಡೀವ್ಸ್‍ನ ನಿರ್ಜನ ದ್ವೀಪ ಮಾಫುಷಿಯ ಜೈಲಿನಲ್ಲಿ ಬಂಧಿ ಆಗಿದ್ದಾನೆ ಮೊಹ್ಮದ್ ನಶೀದ್. ಈತ ಮಾಲ್ಡೀವ್ಸ್‍ನ ಮಾಜಿ ಅಧ್ಯಕ್ಷ...

ಮಾಲ್ಡೀವ್ಸ್‍ನ ನಿರ್ಜನ ದ್ವೀಪ ಮಾಫುಷಿಯ ಜೈಲಿನಲ್ಲಿ ಬಂಧಿ ಆಗಿದ್ದಾನೆ ಮೊಹ್ಮದ್ ನಶೀದ್. ಈತ ಮಾಲ್ಡೀವ್ಸ್‍ನ ಮಾಜಿ ಅಧ್ಯಕ್ಷ.
ಆ್ಯಂಟಿ ಟೆರರಿಸಂ ಆ್ಯಕ್ಟ್ ಅಡಿಯಲ್ಲಿ ಈತನಿಗೆ ಘೋಷಣೆಯಾಗಿದ್ದು 13 ವರುಷದ ಜೈಲುಶಿಕ್ಷೆ. ನಶೀದ್ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟಗಾರನೂ ಹೌದು. ಈಗ ಈತನನ್ನು ಜೈಲಿನಿಂದ ಬಿಡಿಸಲು ಬಂದವಳು ಯಾರು ಗೊತ್ತಾ? ಅಮಲ್ ಕ್ಲೂನಿ!
ಈ 'ಕ್ಲೂನಿ' ಎಂಬ ಹೆಸರಿನಲ್ಲೇ ಇವಳ ಬಗ್ಗೆ ಕ್ಲ್ಯೂ ಸಿಗುತ್ತದೆ ನೋಡಿ. ಹಾಲಿವುಡ್ ಹೆಸರಾಂತ ನಟ ಜಾರ್ಜ್ ಕ್ಲೂನಿಯ ಹೆಂಡತಿಯೇ ಅಮಲ್! ಇವಳು ಕೂಡ ಮಾನವ ಹಕ್ಕು ಹೋರಾಟಗಾತಿ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ವಕೀಲೆ. ಕೂಲಿಂಗ್‍ಗ್ಲಾಸ್ ಧರಿಸಿ, ಬ್ಲ್ಯಾಕ್ ಮಿನಿ ಡ್ರೆಸ್ ಹಾಕ್ಕೊಂಡು ಫೈಲ್ ಹಿಡಿದು ಈಗ ನಶೀದ್ ಇರುವ ದ್ವೀಪಕ್ಕೆ ಬಂದಿದ್ದಾಳೆ. ಆತನಿಂದ ಒಂದಿಷ್ಟು ಸ್ಟೇಟ್‍ಮೆಂಟನ್ನು ತೆಗೆದುಕೊಂಡು, ಸಾಕ್ಷ್ಯ ಹಿಡಿದು ವಾದಿಸುವ ಛಲಕ್ಕೆ ಬಿದ್ದಿದ್ದಾಳೆ ಅಮಲ್. ಮಾಲ್ಡೀವ್ಸ್‍ನ ರಾಜಧಾನಿ ಮಾಲೆಯಲ್ಲಿ ಇವಳ ವೈಯ್ಯಾರದ ನಡಿಗೆ ಮಾಜಿ ಅಧ್ಯಕ್ಷನ ಪ್ರಕರಣವನ್ನು ಇನ್ನೂ ರಂಗೇರಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


