ಮಹಮದ್; ಮೆಸೆಂಜರ್ ಆಫ್ ಗಾಡ್‍ಗೆ ನಿಷೇಧ ಹೇರಲು ಮನವಿ
ಇರಾನ್‍ನ ಖ್ಯಾತ ನಿರ್ದೇಶಕ ಮಜೀದ್ ಮಜ್ದಿ ಅವರ ನಿರ್ದೇಶನದ ಹೊಸ ಚಿತ್ರ `ಮಹ್ಮದ್: ಮೆಸೆಂಜರ್ ಆಫ್ ಗಾಡ್' ಚಿತ್ರದಲ್ಲಿ ಮುಸ್ಲಿಂ ಪ್ರವಾದಿ...

ಮುಂಬೈ: ಇರಾನ್‍ನ ಖ್ಯಾತ ನಿರ್ದೇಶಕ ಮಜೀದ್ ಮಜ್ದಿ ಅವರ ನಿರ್ದೇಶನದ ಹೊಸ ಚಿತ್ರ `ಮಹ್ಮದ್: ಮೆಸೆಂಜರ್ ಆಫ್ ಗಾಡ್' ಚಿತ್ರದಲ್ಲಿ ಮುಸ್ಲಿಂ ಪ್ರವಾದಿ ಮಹಮದ್ ಅವರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿರುವ ಮುಂಬೈ ಮೂಲದ ಸುನ್ನಿ ಮುಸ್ಲಿಂ ಸಂಘಟನೆ ರಾಝಫ್ ಅಕಾಡೆಮಿ ಚಿತ್ರಕ್ಕೆ ಭಾರತದಲ್ಲಿ ನಿಷೇಧ ಹೇರಬೇಕು ಎಂದು ಕೇಂದ್ರ ಗೃಹ ಇಲಾಖೆ ಮತ್ತು ಭಾರತದ ಇರಾನ್ ರಾಯಭಾರ ಕಚೇರಿಗೆ ಮನವಿ ಮಾಡಿದೆ.
ಅಲ್ಲದೆ, `` ಭಾರತೀಯ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಸಂಗೀತ ಸಂಯೋಜನೆ ಮಾಡಿರುವ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು'' ಎಂದೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಬರೆಯಲಾಗಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇರಾನ್ ಮೂಲದ ನಿರ್ದೇಶಕ ಮಜೀದ್ ಮಜ್ದಿ ಅವರು `ಮಹಮದ್; ಮೆಸೆಂಜರ್ ಆಫ್ ಗಾಡ್' ಚಿತ್ರ ನಿರ್ದೇಶಿಸಿದ್ದು, ಇದರಲ್ಲಿ ಪ್ರವಾದಿ ಮಹಮದ್ ಅವರ ಬಾಲ್ಯ, ಪ್ರೌಢಾವಸ್ಥೆ ಮತ್ತು ಪ್ರವಾದಿಯಾಗುವವರೆ ಗಿನ ಜೀವನ ಚರಿತ್ರೆಯನ್ನು ಬಿಂಬಿಸಿದ್ದಾರೆ.
ಚಿತ್ರ ಆಗಸ್ಟ್ 27ರಂದು ಮಾಂಟ್ರಿಯಲ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಅಲ್ಲದೆ, ಇರಾನ್‍ನ 57 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಆದರೂ ಜಗತ್ತಿನ ಬೇರೆ ಭಾಗಗಳಲ್ಲಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಹೀಗಿರುವಾಗಲೇ, ಚಿತ್ರದ ಕುರಿತು ಭಾರತದಲ್ಲಿ ವಿವಾದ ಎದ್ದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


