ಲೈಂಗಿಕ ದೌರ್ಜನ್ಯ; ಭಾರತೀಯ ಮೂಲದ ಪುರುಷನಿಗೆ ನ್ಯೂಜಿಲ್ಯಾಂಡಿನಲ್ಲಿ ಪರಿಹಾರ
ತನ್ನ ಹಿರಿಯ ಸಹೋದ್ಯೋಗಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಕ್ಕೆ ಕೋರ್ಟ್ ಮೊರೆ ಹೋಗಿದ್ದ ಭಾರತೀಯ ಮೂಲದ ಪುರುಷನೊಬ್ಬನಿಗೆ ನ್ಯೂಜೀಲ್ಯಾಂಡ್

ವೆಲ್ಲಿಂಗ್ಟನ್: ತನ್ನ ಹಿರಿಯ ಸಹೋದ್ಯೋಗಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಕ್ಕೆ ಕೋರ್ಟ್ ಮೊರೆ ಹೋಗಿದ್ದ ಭಾರತೀಯ ಮೂಲದ ಪುರುಷನೊಬ್ಬನಿಗೆ ನ್ಯೂಜೀಲ್ಯಾಂಡ್ ನ್ಯಾಯಾಲಯ ೩೫,೬೦೦ ಡಾಲರ್ ಪರಿಹಾರ ಘೋಷಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ವೆಲ್ಲಿಂಗ್ಟನ್ ಮೂಲದ ವೆಲ್ಲಿವುಡ್ ಬ್ಯಾಕ್ ಪ್ಯಾಕರ್ಸ್ ಸಂಸ್ಥೆಯ ರವಿಚಂದ್ರನ್ ನಾರಾಯಣಸ್ವಾಮಿಯವರಿಗೆ, ತಮ್ಮ ಮಾಜಿ ಸಹದ್ಯೋಗಿ ವರಿಂದರ್ ಸಿಂಗ್ ಅವರಿಗೆ ವ್ಯಯಕ್ತಿಕ ದುಖಃದ ಪರಿಹಾರಕ್ಕೆ ೧೦,೯೪೮ ಡಾಲರ್, ಇಲ್ಲಿಯವರೆಗೆ ಕಳೆದುಕೊಂಡ ವೇತನವಾಗಿ ೧೪,೦೬೭ ಡಾಲರ್, ಮತ್ತು ತಮ್ಮ ವೇತನದ ಉಳಿದ ಬಾಕಿ ೧೦,೯೪೮ ಡಾಲರ್ ಪರಿಹಾರ ನೀಡಲು ನೌಕರಿ ಸಂಬಂಧಿ ಆಡಳಿತ ಮಂಡಲಿ ಆದೇಶ ನೀಡಿದೆ.
ಸಿಂಗ್ ಆರೋಪ ಮಾಡಿದ್ದ ಪ್ರಕಾರ ನಾರಾಯಣ ಸ್ವಾಮಿ ಅವರು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಲ್ಲದೆ "ನಾನು ನಿನ್ನ ಜೊತೆ ಸಂಭೋಗ ನಡೆಸಬೇಕು" ಎಂದು ಕೂಡ ಸಂದೇಶ ಕಳುಹಿಸಿದ್ದರು ಎಂದು ದೂರಿದ್ದರು.
ದೂರು ನೀಡಿದರೆ ಕೆಲಸದಿಂದ ತೆಗೆಯುವುದಾಗಿ ಕೂಡ ನಾರಾಯಣಸ್ವಾಮಿ ಬೆದರಿಕೆ ಹಾಕಿದ್ದರು ಎಂದು ಜುಲೈ ೨೨ ೨೦೧೪ ರಲ್ಲಿ ನೀಡಿದ್ದ ದೂರಿನಲ್ಲಿ ಸಿಂಗ್ ತಿಳಿಸಿದ್ದಾರೆ.
ಸಿಂಗ್ ಅವರನ್ನು ಆಗಸ್ಟ್ ೧ ೨೦೧೪ ರಂದು ಕೆಲಸದಿಂದ ವಜಾ ಮಾಡಲಾಗಿತ್ತು. ನ್ಯಾಯಾಲಯಕ್ಕೆ ನೀಡಿದ್ದ ದೂರಿನಲ್ಲಿ ನಾರಾಯಣ ಸ್ವಾಮಿ ತಮ್ಮ ವಸ್ತುಗಳನ್ನು ಉಳಿದುಕೊಂಡಿದ್ದ ವಸತಿ ನಿಲಯದಿಂದ ಹೊರಗೆಸೆದು ದೈಹಿಕವಾಗಿ ಹಲ್ಲೆ ಮಾಡಿದ್ದರು ಎಂದು ಕೂಡ ತಿಳಿಸಿದ್ದರು.
ಆದರೆ ಇದನ್ನು ಅಲ್ಲಗೆಳೆದಿದ್ದ ನಾರಾಯಣಸ್ವಾಮಿ, ಸಿಂಗ್ ತನ್ನ ಸೋಮಾರಿತನದಿಂದ ಕೆಲಸ ಕಳೆದುಕೊಂಡಿದ್ದ ಹಾಗೂ ದುಡ್ಡಿಗಾಗಿ ಬೆದರಿಕೆ ಹಾಗುತ್ತಿದ್ದ ಎಂದು ಆಪಾದಿಸಿದ್ದರು.
ಆ ಸಂದೇಶಗಳನ್ನು ಸಿಂಗ್ ಅವರಿಗೆ ಆಕಸ್ಮಿಕವಾಗಿ ಕಳುಹಿಸಿದ್ದೆ ಎಂದಿದ್ದ ನಾರಾಯಣಸ್ವಾಮಿ ಅದನ್ನು ಸಾಬೀತುಪಡಿಸಲು ವಿಫಲರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


