ವಿದೇಶ

ಮುಸ್ಲಿಮರ ವಿರುದ್ಧದ ದ್ವೇಷದ ಹಿಂಸೆ ಲಂಡನ್ನಿನಲ್ಲಿ ೭೦% ಹೆಚ್ಚಳ

ಮುಸ್ಲಿಮರ ವಿರುದ್ಧದ ದ್ವೇಷದ ಹಿಂಸೆ ಲಂಡನ್ನಿನಲ್ಲಿ ೭೦% ಹೆಚ್ಚಳ ಕಂಡಿದೆ ಎಂದು ಸೋಮವಾರ ಮಾಧ್ಯಮವೊಂದು ವರದಿ ಮಾಡಿದೆ.

ಮುಸ್ಲಿಮರ ವಿರುದ್ಧದ ದ್ವೇಷದ ಹಿಂಸೆ ಲಂಡನ್ನಿನಲ್ಲಿ ೭೦% ಹೆಚ್ಚಳ
ಸಾಂದರ್ಭಿಕ ಚಿತ್ರ
Published On :

ಲಂಡನ್: ಮುಸ್ಲಿಮರ ವಿರುದ್ಧದ ದ್ವೇಷದ ಹಿಂಸೆ ಲಂಡನ್ನಿನಲ್ಲಿ ೭೦% ಹೆಚ್ಚಳ ಕಂಡಿದೆ ಎಂದು ಸೋಮವಾರ ಮಾಧ್ಯಮವೊಂದು ವರದಿ ಮಾಡಿದೆ.

ಮೊಟ್ರೊಪಾಲಿಟನ್ ಪೊಲೀಸ್ ಸೇವೆ ಬಿಡುಗಡೆ ಮಾಡಿರುವ ಅಂಕೆಗಳ ಪ್ರಕಾರ ಕಳೆದ ೧೨ ತಿಂಗಳುಗಳಲ್ಲಿ ಇಸ್ಲಾಂ ವಿರುದ್ಧದ ಭಯ-ದ್ವೇಷದಿಂದ ಹುಟ್ಟಿರುವ ಅಪರಾಧ ಪ್ರಕರಣಗಳ ಸಂಖ್ಯೆ ೮೧೬. ಅದರ ಹಿಂದಿನ ೧೨ ತಿಂಗಳುಗಳಲ್ಲಿ ಈ ಸಂಖ್ಯೆ ೪೭೮ ಇತ್ತೆಂದು ಬಿಬಿಸಿ ವರದಿ ಮಾಡಿದೆ.

ಇವುಗಳಲ್ಲಿ ಮಹಿಳೆಯರ ಮೇಲೆ ನಡೆಸಿದ ದಾಳಿಗಳೇ ಹೆಚ್ಚೆಂದು ಇಸ್ಲಾಂ ದ್ವೇಷಿ ದಾಳಿಗಳನ್ನು ವರದಿ ಮಾಡುವ 'ಟೆಲ್ ಎಂಎಎಂಎ' ಸಂಸ್ಥೆ ತಿಳಿಸಿದೆ.

"ಬೀದಿಗಳಲ್ಲಿ ಸುತ್ತಾಡುವ ಮುಸ್ಲಿಂ ಮಹಿಳೆಯರು, ಹಿಜಾಬ್ ಮತ್ತು ತಲೆ ಮೇಲೆ ಬಟ್ಟೆ ಕಟ್ಟುವ ಮಹಿಳೆಯರು ಈ ದಾಳಿಗೆ ಹೆಚ್ಚು ತುತ್ತಾಗಿರುವುದು ನಮ್ಮ ಗಮನಕ್ಕೆ ಬಂದಿದೆ" ಎಂದು ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.