ಗೌಪ್ಯ ದಾಳಿ ನಡೆಸಿದ್ದ ಭಾರತಕ್ಕೆ 50 ವರ್ಷಗಳ ಹಿಂದೆ ತಕ್ಕ ಉತ್ತರ: ಪಾಕ್ ಸೇನಾ ಮುಖ್ಯಸ್ಥ
ಭಾರತ 50 ವರ್ಷಗಳ ಹಿಂದೆ ಪಾಕಿಸ್ತಾನದ ಮೇಲೆ ಗೌಪ್ಯ ದಾಳಿ ನಡೆಸಿತ್ತು, ಆದರೆ ಪಾಕಿಸ್ತಾನಿ ಸೇನೆ ಭಾರತಕ್ಕೆ ತಕ್ಕ ಉತ್ತರ ನೀಡಿತ್ತು

ಲಾಹೋರ್: ಭಾರತ 50 ವರ್ಷಗಳ ಹಿಂದೆ ಪಾಕಿಸ್ತಾನದ ಮೇಲೆ ಗೌಪ್ಯ ದಾಳಿ ನಡೆಸಿತ್ತು, ಆದರೆ ಪಾಕಿಸ್ತಾನಿ ಸೇನೆ ಭಾರತಕ್ಕೆ ತಕ್ಕ ಉತ್ತರ ನೀಡಿತ್ತು ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ರಹೀಲ್ ಶರೀಫ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ರಕ್ಷಣಾ ದಿನವನ್ನು ಆಚರಿಸುವ ವೇಳೆ ರಹೀಲ್ ಶರೀಫ್ ಈ ಹೇಳಿಕೆ ನೀಡಿದ್ದಾರೆ. ಝರಬ್-ಎ- ಅಜಬ್ ಕಾರ್ಯಾಚರಣೆ ಶೀಘ್ರವೇ ತನ್ನ ಗುರಿಯನ್ನು ಸಾಧಿಸಲಿದೆ ಎಂದು ಸೇನಾ ಸಿಬ್ಬಂದಿ ಮುಖ್ಯಸ್ಥ ಇದೇ ವೇಳೆ ತಿಳಿಸಿದ್ದಾರೆ.
ಪಾಕಿಸ್ತಾನದ ಕಾರ್ಯಾಚರಣೆಯ ಪರಿಣಾಮ ಉಗ್ರರು ದುರ್ಬಲಗೊಂಡಿದ್ದಾರೆ, ಕಳೆದ 13 ವರ್ಷಗಳಿಂದ ಪಾಕಿಸ್ತಾನ ಉಗ್ರವಾದದ ವಿರುದ್ಧ ಹೋರಾಡುತ್ತಿದೆ ಎಂದು ಹೇಳಿದ್ದಾರೆ. ರಕ್ಷಣಾ ದಿನಾಚರಣೆಗೆ ತಾಲೀಮು ನಡೆಯುತ್ತಿದ್ದು ಈ ಕಾರ್ಯಕ್ರಮದಲ್ಲಿ 1965 ಯುದ್ಧದಲ್ಲಿ ಹೋರಾಡಿದ ಯೋಧರ ಕುಟುಂಬ ಸದಸ್ಯರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


