ವಿದೇಶ

ಸಿರಿಯಾ ವಲಸಿಗರಿಗಾಗಿ ದ್ವೀಪವೊಂದನ್ನು ಖರೀದಿಸಲು ಮುಂದಾದ ಶತಕೋಟ್ಯಾಧಿಪತಿ!

ಟರ್ಕಿಯಾ ಬೋಡ್ರಮ್ ಸಮುದ್ರ ಕಿನಾರೆಯಲ್ಲಿ ಮೃತಪಟ್ಟು ಬಿದ್ದಿದ್ದ ಮೂರು ವರ್ಷದ ಹುಡುಗ ಆಯ್ಲಾನ್ ಕುರ್ದಿಯ ಫೋಟೋ ನೋಡಿ ಜಗತ್ತೇ ಕಂಬನಿಗರೆದಿತ್ತು...

ಸಿರಿಯಾ ವಲಸಿಗರಿಗಾಗಿ ದ್ವೀಪವೊಂದನ್ನು ಖರೀದಿಸಲು ಮುಂದಾದ ಶತಕೋಟ್ಯಾಧಿಪತಿ!
ಮೃತಪಟ್ಟ ಮೂರು ವರ್ಷದ ಹುಡುಗ ಆಯ್ಲಾನ್ ಕುರ್ದಿ
Published On :
ಕೈರೋ: ಟರ್ಕಿಯಾ ಬೋಡ್ರಮ್ ಸಮುದ್ರ ಕಿನಾರೆಯಲ್ಲಿ ಮೃತಪಟ್ಟು ಬಿದ್ದಿದ್ದ ಮೂರು ವರ್ಷದ ಹುಡುಗ ಆಯ್ಲಾನ್ ಕುರ್ದಿಯ ಫೋಟೋ ನೋಡಿ ಜಗತ್ತೇ ಕಂಬನಿಗರೆಯುವಂತೆ ಮಾಡಿತ್ತು.
ಇದೀಗ ಇದೇ ಘಟನೆ ಈಜಿಪ್ಟ್ ನ ಶತಕೋಟ್ಯಾಧಿಪತಿಯೊಬ್ಬರ ಮೇಲೆ ಅತೀವ ಪರಿಣಾಮ ಬೀರಿದ್ದು, ಸಿರಿಯಾದಿಂದ ವಲಸೆ ಹೋಗುತ್ತಿರುವವರಿಗಾಗಿ ಒಂದು ದ್ವೀಪವನ್ನೇ ಕೊಳ್ಳಲು ಈ ಉದ್ಯಮಿ ನಗೂಯಿಬ್ ಸವಿರಿಸ್ ನಿರ್ಧರಿಸಿದ್ದಾರೆ.
ಸಿರಿಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಅಲ್ಲಿಂದ ವಲಸೆ ಹೋಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದೇ ರೀತಿ ಬೇರೆ ದೇಶಕ್ಕೆ ಸಮುದ್ರದ ಹಾದಿಯಿಂದಾಗಿ ವಲಸೆ ಹೋಗುತ್ತಿದ್ದ ಸಿರಿಯಾದ ಒಂದು ಕುಟುಂಬವು ನೀರು ಪಾಲಾಗಿ ಅದರಲ್ಲಿ ಮಡಿದ ಮಗುವಿನ ಸುದ್ದಿ ಇಡೀ ಜಗತ್ತನ್ನೇ ಕಂಬನಿ ಮಿಡಿಯುವಂತೆ ಮಾಡಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನಗೂಯಿಬ್ ಸವಿರಿಸ್ ಈ ಸಂತ್ರಸ್ತರಿಗಾಗಿ ದ್ವೀಪವೊಂದನ್ನು ಖರೀದಿಸಲು ನಿರ್ಧರಿಸಿದ್ದಾರೆ.
ಈ ವಿಚಾರವಾಗಿ ನಾಗುಯಿಬ್ ಟ್ವೀಟ್ ಮಾಡಿದ್ದು 'ಗ್ರೀಸ್ ಇಲ್ಲವೇ ಇಟಲಿ ತನ್ನ ಬಳಿಯಿರುವ ದ್ವೀಪಗಳನ್ನು ನನಗೆ ಮಾರಿದರೆ, ನಾನದನ್ನು ಕೊಂಡು ನಿರಾಶ್ರಿತರಿಗೆ ಇರಿಸುತ್ತೇನೆ. ಇದರೊಂದಿಗೆ ಅವರಿಗೆ ಉದ್ಯೋಗ ನೀಡಿ ಸ್ವತಂತ್ರವಾಗಿರಲು ಅವಕಾಶ ನೀಡುತ್ತೇನೆ' ಎಂದಿದ್ದಾರೆ.
ಸಿರಿಯಾದಿಂದ ಯುರೋಪ್ ನ ದೇಶಕ್ಕೆ ವಲಸೆ ಹೋಗುತ್ತಿದ್ದ ಸಂದರ್ಭದಲ್ಲಿ ಈವರೆಗೆ ಸುಮಾರು 2000ಕ್ಕೂ ಅಧಿಕ ಮಂದಿ ಸಮುದ್ರದಲ್ಲಿ ಮುಳುಗಿ ಜಲಸಮಾಧಿಯಾಗಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.