ವಿದೇಶ

ಭಾರತದ ಸಂಭವನೀಯ ದಾಳಿ ಹತ್ತಿಕ್ಕಲು ಯುದ್ಧತಂತ್ರದ ಪರಮಾಣು ಶಸ್ತಾಸ್ತ್ರ: ಪಾಕಿಸ್ತಾನ

ಕಾಶ್ಮೀರ ಗಡಿ ಭಾಗದಲ್ಲಿ ಯುದ್ಧ ಸಂಭವಿಸಿದರೆ ತ್ವರಿತ ಪ್ರತಿಕ್ರಿಯೆ ಆರಂಭಿಸಲು ಭಾರತದಿಂದ ಎದುರಾಗುವ...

ಭಾರತದ ಸಂಭವನೀಯ ದಾಳಿ ಹತ್ತಿಕ್ಕಲು ಯುದ್ಧತಂತ್ರದ ಪರಮಾಣು ಶಸ್ತಾಸ್ತ್ರ: ಪಾಕಿಸ್ತಾನ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ನಾಳೆ ಭೇಟಿ ಮಾಡಿ ಮಾತುಕತೆ ನಡೆಸಲಿರುವ ಪಾಕ್ ಪ್ರಧಾನಿ ನವಾಜ್ ಷರೀಫ್
Published On :

ವಾಷಿಂಗ್ಟನ್: ಕಾಶ್ಮೀರ ಗಡಿ ಭಾಗದಲ್ಲಿ ಯುದ್ಧ ಸಂಭವಿಸಿದರೆ ತ್ವರಿತ ಪ್ರತಿಕ್ರಿಯೆ ಆರಂಭಿಸಲು ಭಾರತದಿಂದ ಎದುರಾಗುವ ಸಂಭವನೀಯ ದಾಳಿಯನ್ನು ಹತ್ತಿಕ್ಕಲು ಪರಮಾಣು ಶಸ್ತಾಸ್ತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಪಾಕಿಸ್ತಾನ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

ಭಾರತದ ಆಕ್ರಮಣವನ್ನು ಹತ್ತಿಕ್ಕಲು ನಮ್ಮ ಪರಮಾಣು ಕಾರ್ಯಕ್ರಮ ಒಂದು ಆಯಾಮದ್ದಾಗಿದೆ.ಪರಮಾಣು ಕಾರ್ಯಕ್ರಮ ಯುದ್ಧ ಆರಂಭಿಸಲು ಅಲ್ಲ, ಬದಲಾಗಿ ಯುದ್ಧ ಎದುರಾದರೆ ಅದನ್ನು ಹತ್ತಿಕ್ಕಲು ಎಂದು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಐಸಸ್ ಚೌಧರಿ ತಿಳಿಸಿದ್ದಾರೆ. ಕಳೆದ ರಾತ್ರಿ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದು, ಅವರು ನಾಳೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜೊತೆ ಮಾತುಕತೆ ನಡೆಸಲಿದ್ದಾರೆ.

ಪಾಕಿಸ್ತಾನದ ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳಿಂದ ಭಾರತಕ್ಕೆ ಅಷ್ಟು ಬೇಗನೆ ಪಾಕಿಸ್ತಾನ ಜೊತೆ ಯುದ್ಧ ಮಾಡಲು ಸಾಧ್ಯವಾಗುವುದಿಲ್ಲ ಎಂದು ಚೌಧರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಪಾಕಿಸ್ತಾನ, ಭಾರತವು ಜಮ್ಮು-ಕಾಶ್ಮೀರದ ಗಡಿಯಲ್ಲಿ ಗೋಡೆಯನ್ನು ನಿರ್ಮಿಸಿದೆ ಎಂದು ಆರೋಪಿಸಿತ್ತು. ಇದಕ್ಕೆ ಉತ್ತರಿಸಿರುವ ಗಡಿ ಭದ್ರತಾ ಪಡೆಯ ಇನ್ಸ್ ಪೆಕ್ಟರ್ ಜನರಲ್ ರಾಕೇಶ್ ಶರ್ಮ, ಇದು ಪಾಕಿಸ್ತಾನ ಸೃಷ್ಟಿಸಿರುವ ಕಟ್ಟು ಕಥೆ. ಜಮ್ಮು-ಕಾಶ್ಮೀರ ಗಡಿಯಲ್ಲಿ ಗೋಡೆಯನ್ನು ಭಾರತ ನಿರ್ಮಿಸಿಲ್ಲ. ಪಾಕಿಸ್ತಾನ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.

ಗಡಿ ಪ್ರದೇಶದಲ್ಲಿ ಗೋಡೆಯನ್ನು ನಿರ್ಮಿಸಲು ಸಾಧ್ಯವಿಲ್ಲ. ಈಗಾಗಲೇ ಇರುವ ಬೇಲಿಗೆ ಕೋಟೆಯನ್ನು ನಿರ್ಮಿಸಲಾಗುತ್ತಿದೆಯಷ್ಟೆ ಎಂದು ಶರ್ಮ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.