ವಿದೇಶ

ಶ್ರೀಲಂಕಾದಿಂದ 19 ತಮಿಳು ಮೀನುಗಾರರ ಬಂಧನ

ಶ್ರೀಲಂಕಾ ವ್ಯಾಪ್ತಿಗೊಳಪಡುವ ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ 19 ಜನ ತಮಿಳುನಾಡು ಮೀನುಗಾರರನ್ನು...

ಶ್ರೀಲಂಕಾದಿಂದ 19 ತಮಿಳು ಮೀನುಗಾರರ ಬಂಧನ
ಸಾಂದರ್ಭಿಕ ಚಿತ್ರ
Published On :
ರಾಮೇಶ್ವರ: ಶ್ರೀಲಂಕಾ ವ್ಯಾಪ್ತಿಗೊಳಪಡುವ ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ 19 ಜನ ತಮಿಳುನಾಡು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. 
ಪಾಲ್ಕ್ ಸ್ಟ್ರೈಟ್ಸ್ ರಾಷ್ಟ್ರದ ಜಲಪ್ರದೇಶದಲ್ಲಿ ಮೀನು ಹಿಡಿಯುತ್ತಿದ್ದ ವೇಳೆ 19 ಮೀನುಗಾರರನ್ನು ಲಂಕಾ ನೌಕಾಪಡೆ ವಶಕ್ಕೆ ತೆಗೆದುಕೊಂಡಿದ್ದು, ಎರಡು ಹಡಗನ್ನು ವಶಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ. 
ಬಂಧನಕ್ಕೊಳಗಾಗಿರುವವರಲ್ಲಿ 10 ಮಂದಿ ಮೀನುಗಾರರು ತಮಿಳುನಾಡಿನ ಅಕ್ಕಾರಪೆಟ್ಟೈ ಪ್ರದೇಶದವರಾಗಿದ್ದು, ಇನ್ನುಳಿದ 9 ಮಂದಿ ಕೀಚನ್ ಕುಪ್ಪಂನವರಾಗಿದ್ದಾರೆ. ಕಳೆದ ತಿಂಗಳು 22ರಂದು ಲಂಕಾ ನೌಕಾಪಡೆ 15 ಮೀನುಗಾರರನ್ನು ಬಂಧಿಸಿತ್ತು. ಇದರ ಬೆನ್ನಲ್ಲೇ ಈಗ 19 ಮೀನುಗಾರರನ್ನು ಬಂಧಿಸಿದೆ. 
ಇಷ್ಟೇ ಅಲ್ಲದೇ, ಭಾರತ ಜಲ ಪ್ರದೇಶದ ಗಡಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ತಮಿಳು ಮೀನುಗಾರರ ಮೇಲೆ ಲಂಕಾ ನೌಕಾಪಡೆ ದಾಳಿ ನಡೆಸಿದೆ. ಸ್ವಲ್ಪದರಲ್ಲೇ ಭಾರತೀಯ ಮೀನುಗಾರರ ತಂಡ ಪಾರಾಗಿದೆ. ಘಟನೆಯಲ್ಲಿ 60ಕ್ಕೂ ಹೆಚ್ಚು ದೋಣಿಗಳಿಗೆ ಹಾನಿಯಾಗಿದೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.