ವಿದೇಶ

ಉಗ್ರರ ಜೊತೆ ಸಂಭೋಗಕ್ಕೆ ನಕಾರ; ೧೯ ಮಹಿಳೆಯರನ್ನು ಕೊಂದ ಇಸ್ಲಾಮಿಕ್ ಸ್ಟೇಟ್

ಮತ್ತೊಂದು ಬರ್ಬರ ಘಟನೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ, ಉಗ್ರರೊಂದಿಗೆ ಸಂಭೋಗ ನಡೆಸಲು ನಿರಾಕರಿಸಿದ್ದಕ್ಕೆ ೧೯ ಮಹಿಳೆಯರನ್ನು ಕೊಂದಿದೆ ಎಂದು

ಉಗ್ರರ ಜೊತೆ ಸಂಭೋಗಕ್ಕೆ ನಕಾರ; ೧೯ ಮಹಿಳೆಯರನ್ನು ಕೊಂದ ಇಸ್ಲಾಮಿಕ್ ಸ್ಟೇಟ್
ಇಸ್ಲಾಮಿಕ್ ಸ್ಟೇಟ್ ಉಗ್ರರು (ಸಂಗ್ರಹ ಚಿತ್ರ)
Published On :

ಮತ್ತೊಂದು ಬರ್ಬರ ಘಟನೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ, ಉಗ್ರರೊಂದಿಗೆ ಸಂಭೋಗ ನಡೆಸಲು ನಿರಾಕರಿಸಿದ್ದಕ್ಕೆ ೧೯ ಮಹಿಳೆಯರನ್ನು ಕೊಂದಿದೆ ಎಂದು ತಿಳಿದುಬಂದಿದೆ.

ಮಿರರ್ ವರದಿ ಮಾಡಿರುವ ಪ್ರಕಾರ ಈ ಉಗ್ರ ಸಂಘಟನೆ ಹಲವಾರು ಮಹಿಳೆಯನ್ನು ಅಪಹರಿಸಿದೆ ಮತ್ತು ಅವರನ್ನು ರೇಪ್ ಕೂಡ ಮಾಡಿದ್ದಾರೆ. "ಆದರೆ ಇವರುಗಳು ಲೈಂಗಿಕ ಜಿಹಾದ್ ನಲ್ಲಿ ಭಾಗವಹಿಸಲು ನಿರಾಕರಿಸಿದ್ದಕ್ಕೆ ಈ ನಿರ್ದಯಿ ನಿರ್ಧಾರ ತೆಗೆದುಕೊಂಡಿದ್ದಾರೆ" ಎಂದು ಕುರ್ದಿಶ್ ಡೆಮಾಕ್ರಟಿಕ್ ಪಾರ್ಟಿ ಇರಾಕಿ ನ್ಯೂಸ್ ಗೆ ಹೇಳಿದೆ.

ವರದಿಯ ಪ್ರಕಾರ ಅಪಹರಣಕ್ಕೆ ಒಳಗಾಗಿರುವವರಲ್ಲಿ ಹೆಚ್ಚಿನವರು ಯಜಿದಿಗಳು ಅಥವಾ ಕ್ರಿಶ್ಚಿಯನ್ನರು. ಈ ಲೈಂಗಿಕ ವ್ಯಾಪಾರವನ್ನು ತನಿಖೆ ನಡೆಸುತ್ತಿರುವ ವಿಶ್ವ ಸಂಸ್ಥೆಯ ಅಧಿಕಾರಿಯೊಬ್ಬರು, ಅಪಹರಣಗೊಂಡ ಮಹಿಳೆಯರನ್ನು ಅವರ ಕುಟುಂಬಕ್ಕೆ ಅತಿ ಹೆಚ್ಚಿನ ಮೊತ್ತ ತೆಗೆದುಕೊಂಡು ವಾಪಸ್ ನೀಡುತ್ತಾರೆ. ಯಜಿದಿ ಕನ್ಯೆಯರನ್ನು ರಕ್ಕ ಮತ್ತು ಸಿರಿಯದಲ್ಲಿ ಜೀತ ಹರಾಜಿಗೆ ಕಳುಹಿಸಲಾಗುತ್ತದೆ ಎಂದು ವರದಿ ಮಾಡಿದ್ದಾರೆ.

ಎಷ್ಟೋ ಬಾರಿ ಹೋರಾಟಕ್ಕೆ ಇಳಿಯಬಹುದು ಎಂಬ ಆಸೆಯಿಂದ ಮಹಿಳೆಯರನ್ನು ನೇಮಕಾತಿ ಮಾಡಿ ಅವರನ್ನು ಅಪಹರಿಸಿ, ದುಡ್ಡಿಗೋಸ್ಕರ ವೇಶ್ಯಾವೃತ್ತಿಗೆ ಕೂಡ ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.