ವಿದೇಶ

ಅಮೆರಿಕಾದ ಕ್ಲಿನಿಕ್ ನಲ್ಲಿ ಗುಂಡಿನ ದಾಳಿ; ಮೂವರ ಸಾವು; ದಾಳಿಕೋರ ಪೊಲೀಸರಿಗೆ ಶರಣು

ಅಮೆರಿಕಾದ ಕೊಲರ್ಯಾಡೊ ಜಿಲ್ಲೆಯ ಕ್ಲಿನಿಕ್ ಒಂದರಲ್ಲಿ ಶುಕ್ರವಾರ ಬಂಧೂಕು ದಾಳಿಕೋರ ಮತ್ತು ಪೊಲೀಸರ ನಡುವೆ ನಡೆದ ದಾಳಿಯಲ್ಲಿ ಒಬ್ಬ ಪೊಲೀಸ್

ಅಮೆರಿಕಾದ ಕ್ಲಿನಿಕ್ ನಲ್ಲಿ ಗುಂಡಿನ ದಾಳಿ; ಮೂವರ ಸಾವು; ದಾಳಿಕೋರ ಪೊಲೀಸರಿಗೆ ಶರಣು
ದಾಳಿ ನಡೆದ ಪ್ರದೇಶದ ಒಂದು ದೃಶ್ಯ
Published On :

ಲಾಸೇಂಜಲಿಸ್: ಅಮೆರಿಕಾದ ಕೊಲರ್ಯಾಡೊ ಜಿಲ್ಲೆಯ ಕ್ಲಿನಿಕ್ ಒಂದರಲ್ಲಿ ಶುಕ್ರವಾರ ಬಂಧೂಕು ದಾಳಿಕೋರ ಮತ್ತು ಪೊಲೀಸರ ನಡುವೆ ನಡೆದ ದಾಳಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಯೂ ಸೇರಿದಂತೆ ಮೂವರು ಮೃತಪಟ್ತಿದ್ದು ೧೧ ಜನ ಗಾಯಗೊಂಡಿದ್ದಾರೆ.

ಈ ಸಾವುಗಳ ದುರಂತ ಎಂದಿರ್ವ ಕೊಲರ್ಯಾಡೊ ಅಟಾರ್ನಿ ಜನರಲ್ ಈ ದಾಳಿಯಲ್ಲಿ ಐವರು ಪೊಲೀಸರು ಗಾಯಗೊಂಡಿರುವುದನ್ನು ತಿಳಿಸಿದ್ದಾರೆ.

ಜನನ ನಿಯಂತ್ರಣ ವೈದ್ಯಕೀಯ ಕೇಂದ್ರದಲ್ಲಿ ನಡೆದ ಈ ದಾಳಿಯಿಂದ ಅಮೇರಿಕಾದಲ್ಲಿ ಹೆಚ್ಚುತ್ತಿರುವ ಗ್ಯಾನ್ ಸಂಸ್ಕೃತಿ ಬಗ್ಗೆ ಮತ್ತೆ ಟೀಕೆಗಳು ಕೇಳಿ ಬಂದಿವೆ.

ದಾಳಿ ನಡೆಸಿದ ಬಂಧೂಕುಧಾರಿ ಪೊಲೀಸರಿಗೆ ಶರಣಾಗಿದ್ದು ಅವನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಗುಂಡಿನ ದಾಳಿಗೆ ನಿಖರ ಕಾರಣಗಳು ಇನ್ನೂ ತಿಳಿದುಬಂದಿಲ್ಲ, ಆದರೆ 'ಗರ್ಭಪಾತ' ವಿರೋಧಿ ಧಾರ್ಮಿಕ ವ್ಯಕ್ತಿಯೊಬ್ಬ ಕ್ಲಿನಿಕ್ ಮೇಲೆ ದಾಳಿ ನಡೆಸಿರುವ ಸಾಧ್ಯತೆ ಇದಾಗಿದೆ ಎಂದು ಊಹಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.