ಅಪರೂಪದ ಬಿಳಿ ಖಡ್ಗಮೃಗದ ಸಾವು
ಅವುಗಳ ಸಂತತಿಯಲ್ಲಿ ಈ ಭೂಗ್ರಹದಮೇಲೆ ಉಳಿದುಕೊಂಡದ್ದೇ ಒಟ್ಟು 4 ಮಂದಿ. ಇದೀಗ ಆ ನಾಲ್ಕರಲ್ಲೂ ಒಂದು ಮರಣಹೊಂದಿದೆ....

Published On :
ಕ್ಯಾಲಿಫೋರ್ನಿಯ: ಅವುಗಳ ಸಂತತಿಯಲ್ಲಿ ಈ ಭೂಗ್ರಹದಮೇಲೆ ಉಳಿದುಕೊಂಡದ್ದೇ ಒಟ್ಟು 4 ಮಂದಿ. ಇದೀಗ ಆ ನಾಲ್ಕರಲ್ಲೂ ಒಂದು ಮರಣಹೊಂದಿದೆ. ಇದು ಅಳಿವಿನಂಚಿಗೆ ಬಂದಿರುವ ಬಿಳಿ ಖಡ್ಗಮೃಗದ ವಂಶ ನಿರ್ವಂಶವಾಗುತ್ತಿ ರುವ ದುಃಖದ ಸುದ್ದಿ. ಇನ್ನುಳಿದ ಮೂರು ಕೀನ್ಯಾದ ಒಲ್ ಪೆಜೆಟಾದಲ್ಲಿವೆ. ಸ್ಯಾನ್ ಡೀಗೋ ಪ್ರಾಣಿಸಂಗ್ರಹಾಲಯದ ಸಫಾರಿ ಪಾರ್ಕ್‍ನಲ್ಲಿ ಬ್ಯಾಕ್ಟೀರಿಯಾ ಸೋಂಕಿನಿಂದ ನರಳುತ್ತಿದ್ದ, ವೃದ್ಧ ಬಿಳಿ ಖಡ್ಗಮೃಗ ಕೊನೆಯುಸಿರೆಳೆದಿರುವುದಾಗಿ ಅಧಿಕಾರಿವರ್ಗ ದೃಢಪಡಿಸಿದೆ. 41 ವರ್ಷ ವಯಸ್ಸಿನ ಈ ಪ್ರಾಣಿ 1989ರಿಂದ ಕ್ಯಾಲಿಫೋರ್ನಿಯ ಪಾರ್ಕ್‍ನಲ್ಲಿತ್ತು. ಕರುಳು ಸಂಬಂಧಿ ಕಾಯಿಲೆ ಉಲ್ಬಣಿಸಿ, ನ.13ರಂದು ನಡೆದ ಶಸ್ತ್ರಉಚಿಕಿತ್ಸೆಯೂ ಫಲಕಾರಿಯಾಗದೇ ಖಡ್ಗಮೃಗ ಸಾವನ್ನಪ್ಪಿದೆ. ಸುಮಾರು 1, 800ಕೆಜಿ ತೂಕದ ಈ ಮೃಗ ಕೇವಲ ಕ್ಯಾಲಿಫೋರ್ನಿಯ ಮÁತ್ರವಲ್ಲ ವಿಶ್ವಾದ್ಯಂತ ಅಪರೂಪದ ಪ್ರಾಣಿಯೆಂದೇ ಖ್ಯಾತವಾಗಿತ್ತು. ಈ ಪ್ರಾಣಿಯ ಕೋಡುಗಳಿಗೆ ಕಾಳಸಂತೆ ಯಲ್ಲಿ ಭಾರಿ ಬೆಲೆಯಿದ್ದು, ಔಷಧೀಯ ಗುಣಗಳೂ ಇರುವುದೆಂದು ತಿಳಿದುಬಂದಿದೆ. ಉಳಿದಿರುವ ಮೂರು ಬಿಳಿಖಡ್ಗಮೃಗಗಳ ಮೂಲಕ ಸಂತತಿ ಹೆಚ್ಚಿಸಲಾಗದಿದ್ದರೆ, ಇನ್ನು ಕೆಲವೇ ವರ್ಷಗಳಲ್ಲಿ ಈ ಪ್ರಾಣಿವಂಶ ಸಂಪೂರ್ಣ ಮಯವಾಗಲಿದೆ ಎಂದುತಜ್ಞರು ಅಭಿಪ್ರಾಯಪಟ್ಟದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


