ಫ್ರಾನ್ಸ್'ನಲ್ಲಿ ಉಗ್ರರು ಪ್ರತ್ಯಕ್ಷ: ಕಾರ್ಯಾಚರಣೆಗಿಳಿದ ಭದ್ರತಾಧಿಕಾರಿಗಳು
ಫ್ರಾನ್ಸ್'ನ ಗ್ರಾಮವೊಂದರಲ್ಲಿ ಉಗ್ರರು ಕಾಣಿಸಿಕೊಂಡಿದ್ದು, ಭದ್ರತಾಧಿಕಾರಿಗಳು ದೊಡ್ಡಮಟ್ಟದ ಕಾರ್ಯಾಚರಣೆಯನ್ನು ನಡೆಸುತ್ತಿರುವುದಾಗಿ ಮಂಗಳವಾರ ತಿಳಿದುಬಂದಿದೆ...

ಪ್ಯಾರೀಸ್: ಫ್ರಾನ್ಸ್'ನ ಗ್ರಾಮವೊಂದರಲ್ಲಿ ಉಗ್ರರು ಕಾಣಿಸಿಕೊಂಡಿದ್ದು, ಭದ್ರತಾಧಿಕಾರಿಗಳು ದೊಡ್ಡಮಟ್ಟದ ಕಾರ್ಯಾಚರಣೆಯನ್ನು ನಡೆಸುತ್ತಿರುವುದಾಗಿ ಮಂಗಳವಾರ ತಿಳಿದುಬಂದಿದೆ.
ನೈಋತ್ಯ ಫ್ರಾನ್ಸ್'ನ ಗ್ರಾಮವೊಂದರಲ್ಲಿ ಉಗ್ರರು ಅಡಗಿಕುಳಿತಿರುವ ಕುರಿತಂತೆ ಭದ್ರತಾಧಿಕಾರಿಗಳಿಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗ್ರಾಮವೊಂದರಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆಗಳಿದಿದ್ದು, ಈಗಾಗಲೇ ಸ್ಥಳದಲ್ಲಿ ಎಲ್ಲಾ ರೀತಿಯ ಸಂಪರ್ಕಗಳನ್ನು ಸ್ಥಗಿತಗೊಳಿಸಿದ್ದಾರೆಂದು ತಿಳಿದುಬಂದಿದೆ.
ಈಗಾಗಲೇ ಗ್ರಾಮದ ಸುತ್ತಲೂ ಭದ್ರತಾಧಿಕಾರಿಗಳು ಸುತ್ತುವರೆದಿದ್ದು, ಶಸ್ತ್ರ ಸಜ್ಜಿತ 40 ಪೊಲೀಸ್ ವಾಹನಗಳು ಹಾಗೂ ಸಾಕಷ್ಟು ಭದ್ರತಾ ಸಿಬ್ಬಂದಿಗಳು ಕಾರ್ಯಾಚರಣೆಗಿಳಿದಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬ ಮಾಹಿತಿ ನೀಡಿದ್ದಾನೆ.
ಇದೀಗ ಅಡಗಿಕುಳಿತಿರುವ ಉಗ್ರರು ನವೆಂಬರ್ 13 ರಂದು ನಡೆದ ಪೈಶಾಚಿಕ ಕೃತ್ಯದಲ್ಲಿ ನಂಟು ಹೊಂದಿದ್ದರು ಎಂದು ಹೇಳಲಾಗುತ್ತಿದ್ದು, ಉಗ್ರರ ಧ್ವನಿಯನ್ನು ತನಿಖಾಧಿಕಾರಿಗಳು ಈಗಾಗಲೇ ಗುರ್ತಿಸಿದ್ದಾರೆಂದು ಹೇಳಲಾಗುತ್ತಿದೆ.
ಇಸಿಸ್ ಉಗ್ರರ ಹುಟ್ಟಡಗಿಸಲು ಮುಂದಾಗಿದ್ದ ಪ್ಯಾರೀಸ್ ಇಸಿಸ್ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿ ಹಲವು ಉಗ್ರರನ್ನು ಹತ್ಯೆ ಮಾಡಿತ್ತು. ಇದನ್ನೇ ದ್ವೇಷವಾಗಿಟ್ಟುಕೊಂಡಿದ್ದ ಉಗ್ರರು ನವೆಂಬರ್ 13 ರಂದು ಏಕ ಸಮಯದಲ್ಲಿ ಪ್ಯಾರೀಸ್'ನ 6 ಪ್ರದೇಶಗಳಲ್ಲಿ ದಾಳಿ ನಡೆಸಿತ್ತು. ದಾಳಿಯಲ್ಲಿ 127ಕ್ಕೂ ಹೆಚ್ಚು ಅಮಾಯಕರನ್ನು ಬಲಿ ಪಡೆದುಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


