ಮಾಲಿ ದಾಳಿ: ಮೂವರು ಒತ್ತೆಯಾಳುಗಳ ಹತ್ಯೆ, 20 ಭಾರತೀಯರು ಸೇಫ್
ಮಾಲಿಯಲ್ಲಿರುವ ರಾಡಿಸನ್ ಬ್ಲೂ ಹೋಟೆಲ್ ನಲ್ಲಿದ್ದ 140 ಅತಿಥಿಗಳು ಹಾಗೂ 30 ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 170 ಜನರನ್ನು ಒತ್ತೆಯಾಳಾಗಿರಿಸಿಕೊಂಡು...

ಬಮಾಕೊ: ಪ್ಯಾರಿಸ್ ನಲ್ಲಿ ಉಗ್ರರ ಅಟ್ಟಹಾಸ ಮರೆಯುವ ಮುನ್ನವೇ ಮಾಲಿ ರಾಜಧಾನಿ ಬಮಾಕೋದಲ್ಲಿ ಭಯೋತ್ಪಾದಕರು ತಮ್ಮ ಅಟ್ಟಹಾಸ ಮೆರೆದಿದ್ದಾರೆ.
ಉಗ್ರರು ಒತ್ತೆಯಾಳಾಗಿದ್ದ ಮೂವರನ್ನು ಕೊಂದಿದ್ದಾರೆ. ಇನ್ನೂ ಒತ್ತೆಯಾಳುಗಳ ಪೈಕಿ 20 ಮಂದಿ ಭಾರತೀರು ಇರುವುದಾಗಿ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಹೋಟೆಲ್ ರೂಮ್ ನಲ್ಲಿ ಕುರಾನ್ ಪಠಿಸಲು ಉಗ್ರರು ಹೇಳಿದ್ದಾರೆ. ಈ ವೇಳೆ ಕುರಾನ್ ಪಠಿಸಿದ 15 ಮಂದಿಯನ್ನು ಉಗ್ರರು ಬಿಡುಗಡೆ ಮಾಡಿದ್ದಾರೆ.
ಮಾಲಿಯಲ್ಲಿರುವ ರಾಡಿಸನ್ ಬ್ಲೂ ಹೋಟೆಲ್ ನಲ್ಲಿದ್ದ 140 ಅತಿಥಿಗಳು ಹಾಗೂ 30 ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 170 ಜನರನ್ನು ಶಸ್ತ್ರಧಾರಿ ಇಬ್ಬರು ಉಗ್ರರು ತಮ್ಮ ಒತ್ತೆಯಾಳಾಗಿಸಿಕೊಂಡಿದ್ದಾರೆ.
ಪೊಲೀಸರು ಹೋಟೆಲ್ ಅನ್ನು ಸುತ್ತುವರಿದಿದ್ದು, ಬಂದೂಕು ಹಿಡಿದಿದ್ದ ವ್ಯಕ್ತಿಯೊಬ್ಬ ಗಾಡ್ ಇಸ್ ಗ್ರೇಟ್ ಎಂದು ಅರೇಬಿಕ್ ಭಾಷೆಯಲ್ಲಿ ಕಿರುಚುತ್ತಾ ಹೋಟೆಲ್ ಒಳಗೆ ನುಗ್ಗಿದ ಎಂದು ಸೆಕ್ಯೂರಿಟಿ ಗಾರ್ಡ್ ತಿಳಿಸಿದ್ದಾನೆ.
ಉಗ್ರರು ತಮ್ಮ ಕೈಯ್ಯಲ್ಲಿ ಬಂದೂಕು ಹಾಗೂ ಗ್ರೆನೈಡ್ ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ಆದರೆ ಹೋಟೆಲ್ ನಲ್ಲಿದ್ದ ಜನರನ್ನು ಒತ್ತೆಯಾಳಾಗಿಸಿಕೊಂಡಿರುವುದರ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಈ ಮೊದಲು ಅಂದರೆ 2012 ಹಾಗೂ 2013 ರಲ್ಲಿ ದಾಳಿ ನಡೆಸಿದ್ದ ಉಗ್ರರು ಮಾಲಿಯನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಮಾರ್ಚ್ ನಲ್ಲಿ ಮುಸುಕುಧಾರಿ ಗನ್ ಮ್ಯಾನ್ ಗಳು ಬಮಾಕೊ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ ಐವರನ್ನು ಕೊಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


