ಪಾಕಿಸ್ಥಾನದಲ್ಲಿ ರೈಲು ಅಪಘಾತ: ಕನಿಷ್ಠ 13 ಸಾವು, 100 ಮಂದಿಗೆ ಗಾಯ
ಪಾಕಿಸ್ಥಾನದ ನೈರುತ್ಯ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಪ್ರಯಾಣಿಕರ ರೈಲೊಂದು ಹಳಿ ತಪ್ಪಿ ಕನಿಷ್ಠ 9 ಮಂದಿ ಮೃತಪಟ್ಟು ಸುಮಾರು...

ಕರಾಚಿ: ಪಾಕಿಸ್ಥಾನದ ನೈರುತ್ಯ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಪ್ರಯಾಣಿಕರ ರೈಲೊಂದು ಹಳಿ ತಪ್ಪಿ ಕನಿಷ್ಠ 9 ಮಂದಿ ಮೃತಪಟ್ಟು ಸುಮಾರು 100 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಬಲೂಚಿಸ್ಥಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದಿಂದ ರಾವಲ್ಪಿಂಡಿಗೆ ಹೋಗುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್‌ನ ಬ್ರೇಕ್ ವಿಫಲವಾಗಿ ಅದರ ನಾಲ್ಕು ಬೋಗಿಗಳು ಪರ್ವತದ ಕಡೆಗೆ ಉರುಳಿ ಬಿತ್ತು.ದುರಂತದಲ್ಲಿ ಮೃತಪಟ್ಟಿರುವ 9 ಮಂದಿಯಲ್ಲಿ ರೈಲಿನ ಚಾಲಕ ಮತ್ತು ಸಹಾಯಕನೂ ಸೇರಿದ್ದಾರೆ ಎಂದು ಬಲೂಚಿಸ್ತಾನದ ಗೃಹ ಕಾರ್ಯದರ್ಶಿ ಅಕ್ಬರ್ ಹುಸೇನ್ ದುರ್ರನಿ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದ್ದು ಗಾಯಾಳುಗಳನ್ನು ಕ್ವೆಟ್ಟಾ ಸುತ್ತಮುತ್ತಲ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.
ಕಳೆದ ನ.1ರಂದು ಇದೇ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ರೈಲ್ವೇ ಹಳಿಗೆ ರಿಮೋಟ್ ಕಂಟ್ರೋಲ್ ಬಾಂಬ್ ಇಡುವ ಮೂಲಕ ಪ್ರಯಾಣಿಕರ ರೈಲನ್ನು ಸ್ಫೋಟಿಸಲಾಗಿತ್ತು. ಪರಿಣಾಮವಾಗಿ ನಾಲ್ವರು ಮೃತಪಟ್ಟು ಇತರ ಆರು ಮಂದಿ ಗಾಯಗೊಂಡಿದ್ದರು. ನಿಷೇಧಿತ ಯುನೈಟೆಡ್ ಬಲೂಚ್ ಆರ್ಮಿ ಈ ಕೃತ್ಯದ ಹೊಣೆ ವಹಿಸಿತ್ತು.ಕಳೆದ ಜುಲೈಯಲ್ಲಿ ಸೇತುವೆಯ ಭಾಗಶಹ ಕುಸಿದು ಅದರ ಮೇಲೆ ಸಂಚರಿಸಿದ ವಿಶೇಷ ಮಿಲಿಟರಿ ರೈಲು ಬಿದ್ದು ಕನಿಷ್ಟ 17 ಮಂದಿ ಸಾವಿಗೀಡಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


