ವಿದೇಶ

ಪ್ಯಾರೀಸ್ ದಾಳಿ: ಯುವಕನನ್ನು ರಕ್ಷಿಸಿದ ಸ್ಯಾಮ್ ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್

126 ಮಂದಿಯ ಸಾವಿಗೆ ಕಾರಣವಾದ ಈ ದಾಳಿಯಲ್ಲಿ ಸಿಲ್ವೆಸ್ಟರ್ ನ್ನು ರಕ್ಷಿಸಿದ್ದು ಆತನ ಗ್ಯಾಲಕ್ಸಿ ಸ್ಮಾರ್ಟ್‌ಫೋನ್! ಬಾಂಬ್ ದಾಳಿ ನಡೆಯುತ್ತಿದ್ದ ವೇಳೆ...

ಪ್ಯಾರೀಸ್ ದಾಳಿ: ಯುವಕನನ್ನು ರಕ್ಷಿಸಿದ ಸ್ಯಾಮ್ ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್
ಸಿಲ್ವೆಸ್ಟರ್ (ಕೃಪೆ : ರಾಯಿಟರ್ಸ್ )
Published On :
ಪ್ಯಾರೀಸ್:  ಪ್ಯಾರೀಸ್‌ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ನಡೆಸಿದ ದಾಳಿಯಲ್ಲಿ ಸಿಲ್ವೆಸ್ಟರ್ ಎಂಬ ಯುವಕ ಅದೃಷ್ಟದಿಂದ ಪಾರಾಗಿದ್ದಾನೆ. 126 ಮಂದಿಯ ಸಾವಿಗೆ ಕಾರಣವಾದ ಈ ದಾಳಿಯಲ್ಲಿ ಸಿಲ್ವೆಸ್ಟರ್ ನ್ನು ರಕ್ಷಿಸಿದ್ದು ಆತನ ಗ್ಯಾಲಕ್ಸಿ ಸ್ಮಾರ್ಟ್‌ಫೋನ್! 
ಬಾಂಬ್ ದಾಳಿ ನಡೆಯುತ್ತಿದ್ದ ವೇಳೆ ಸ್ಫೋಟಕದ ಒಂದು ತುಂಡು ಸಿಲ್ವೆಸ್ಟರ್ ದೇಹವನ್ನು ಸ್ಪರ್ಶಿಸಿ ಗಾಯವನ್ನುಂಟು ಮಾಡಿದೆ. ಸ್ಫೋಟಕದ ತುಂಡು ತೀವ್ರ ವೇಗದಲ್ಲಿದ್ದರೂ, ಅದು ದೇಹಕ್ಕೆ ತಾಗಿ ದೊಡ್ಡ ಗಾಯವನ್ನುಂಟು ಮಾಡುವಂತೆ ತಡೆದದ್ದು ಆತನ ಕೈಯಲ್ಲಿದ್ದ  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 6 ಎಡ್ಜ್ ಸ್ಮಾರ್ಟ್ ಫೋನ್. 
Story image
ಫ್ರಾನ್ಸ್ -ಜರ್ಮನಿ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ಸ್ಟೇಡಿಯಂ ಹೊರಗ ಸಿಲ್ವಸ್ಟರ್ ನಿಂತಿದ್ದಾಗ ಸ್ಫೋಟ ಸಂಭವಿಸಿದೆ. ಆ ವೇಳೆ ಸ್ಫೋಟಕದ ತುಂಡು ತನ್ನ ದೇಹವನ್ನು ತಾಕುವ ಮುನ್ನ ಸ್ಮಾರ್ಟ್‌ಫೋನ್‌ಗೆ ಬಂದು ಬಡಿದಿದೆ. ಸ್ಮಾರ್ಟ್‌ಫೋನ್ ಇಲ್ಲಿ ಆಪ್ತ ರಕ್ಷಕನಾಗಿದ್ದು, ಸಿಲ್ವೆಸ್ಟರ್ ದೇಹಕ್ಕೆ ಚಿಕ್ಕ ಪುಟ್ಟ ಗಾಯವಾಗಿದೆ .

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.