ಬಸ್ಸು, ಟ್ರೇನ್ ನಲ್ಲಿ ನಿದ್ದೆ ಮಾಡಿದರೆ ಕಿಕ್ಔಟ್
ನಾವು ಬಿಎಂಟಿಸಿ, ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಎಂಥೆಂಥ ಪ್ರಯಾಣಿಕರನ್ನು ಕಾಣಬಹುದು? ಟಿಕೆಟ್ ಇಲ್ಲದೆ ಪ್ರಯಾಣಿಸುವವ, ಕಂಡಕ್ಟರ್ ಬರುವ ಹೊತ್ತಿಗೆ ಸರಿಯಾಗಿ...

Published On :
ಸ್ಯಾಕ್ರಮೆಂಟೋ: ನಾವು ಬಿಎಂಟಿಸಿ, ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಎಂಥೆಂಥ ಪ್ರಯಾಣಿಕರನ್ನು ಕಾಣಬಹುದು? ಟಿಕೆಟ್ ಇಲ್ಲದೆ ಪ್ರಯಾಣಿಸುವವ, ಕಂಡಕ್ಟರ್ ಬರುವ ಹೊತ್ತಿಗೆ ಸರಿಯಾಗಿ ದಿಢೀರ್ ನಿದ್ದೆಗೆ ಶರಣಾಗಿಗೊರೆಯುವವ, ಅಪರಿಚಿತರಾದರೂ ಪಕ್ಕದವರೊಂದಿಗೆ ಹರಟೆ ಕೊಚ್ಚುವವ, ಫೋನ್ ನಲ್ಲೇ ಊರಿಂದಾಚೆಗೆ ಕೇಳುವಂತೆ ಮಾತಾಡುವವ, ಕಳ್ಳೇಕಾಯಿ ತಿಂದು ಅಲ್ಲೇ ಸಿಪ್ಪೆ ಎಸೆವವ, ಗುಟ್ಕಾ ಜಗಿದು ಅಲ್ಲೇ ಉಗಿಯುವವ.. ಅಬ್ಬಾ... ಇಲ್ಲಿ ಏನು ಮಾಡಿದರೂ ಕೇಳೋವ್ರಿಲ್ಲ! ಆದರೆ ಅಮೆರಿಕದ ಸ್ಯಾಕ್ರಮೆಂಟೋ ನಗರದಲ್ಲಿ ನೀವು ಬಸ್ ಹತ್ತೋಕೆ ಮೊದಲು ನಿಮ್ಮೆಲ್ಲ ಚಾಳಿಗಳನ್ನು ಬದಿಗಿಡಬೇಕು. ಇಲ್ಲವಾದರೆ ಶಿಕ್ಷೆ ಅವಮಾನ ಕಟ್ಟಿಟ್ಟ ಬುತ್ತಿ. ಹೌದು. ಅಲ್ಲಿ ಬಸ್ ಮತ್ತು ಸಿಟಿ ರೈಲು ಪ್ರಯಾಣಕ್ಕೆ ಹಲವು ಕಟ್ಟುನಿಟ್ಟು ನಿಯಮಗಳಿವೆ. ಇದೀಗ ಸರ್ಕಾರ ಇನ್ನೂ ಹೊಸ ನಿಬಂಧನೆ ವಿಧಿಸಿದೆ. ಬಸ್ನಲ್ಲಿ ನಿದ್ದೆ ಮಾಡುವಂತಿಲ್ಲ. ಜೋರಾಗಿ ಮಾತಾ ಡುವಂತಿಲ್ಲ. ಫೋನಲ್ಲಿ ಜೋರು ಮಾತಾಡೋದು, ದೊಡ್ಡದನಿಯಲ್ಲಿ ಹಾಡು ಪ್ಲೇ ಮಾಡೋದು ಇಲ್ಲವೇ ಇಲ್ಲ. ಸ್ತ್ರೀ-ಪುರುಷರಿಬ್ಬರೂ ಸೊಂಟಭಾಗದ ಮೇಲೆ ಮತ್ತು ಕೆಳಗೆ ಸಂಪೂರ್ಣ ವಸ್ತ್ರದಿಂದ ಮುಚ್ಚಿ ಕೊಂಡಿರಬೇಕು. ಪಾಲಿಸದಿದ್ದಲ್ಲಿ ವಾಹನ ದಿಂದ ಅನಾಮತ್ತಾಗಿ ಕೆಳಗಿಳಿಸಲಾಗುವುದು. ಈ ನಿಯಮ ಕಳೆದ ಸೋಮವಾರದಿಂದ ಜಾರಿಗೆ ಬಂದಿದೆ. ಮದ್ಯಪಾನದಿಂದ ನಾರುತ್ತಿರುವವರು ಹಾಗೂ ಅತಿಘಾಟಿನ ಸುಗಂಧದ್ರವ್ಯ ಪೂಸಿಕೊಂಡಿರುವವರನ್ನೂ ಸಿಟಿಬಸ್ ಮತ್ತು ರೈಲುಗಳಲ್ಲಿ ಪ್ರಯಾಣಿಸದಂತೆ ನಿಷೇಧಿಸುವ ಪ್ರಸ್ತಾವ ಇತ್ತಾದರೂ ಸದ್ಯಕ್ಕೆ ಕೈಬಿಡಲಾಗಿದೆ. ಈ ನಿಯಮಾವಳಿಗಳನ್ನು ಸರ್ಕಾರ ಸಮರ್ಥಿಸಿಕೊಂಡಿದೆ. ಆದರೆ, ಬಸ್ ಮತ್ತು ರೈಲು ಪ್ರಯಾಣವನ್ನೇ ನೆಚ್ಚಿಕೊಂಡಿರುವ ಮಧ್ಯಮ ವರ್ಗದ ವರಿಗೆ ಇಂಥ ರೂಲ್ಸ್ ಗಳಿಂದ ತಾಪತ್ರಯವಾಗಲಿದೆ ಎನ್ನುವ ವಿರೋಧ ಜನರಿಂದ ವ್ಯಕ್ತವಾಗಿದೆ.
ಯಾಕಿಷ್ಟು ಕಟ್ಟುನಿಟ್ಟು?: ಸ್ಯಾಕ್ರಮೆಂಟೋ ನಗರ ಬಾಸ್ಕೆಟ್ಬಾಲ್ ಮತ್ತು ಫುಟ್ಬಾಲ್ ಪ್ರೇಮಿಗಳ ನೆಚ್ಚಿನ ತಾಣ. ಪ್ರತಿ ವಾರಾಂತ್ಯದಲ್ಲಿ ಅಲ್ಲಿ ನಡೆಯುವ ಪಂದ್ಯ ನೋಡಲು ಸುತ್ತಮುತ್ತಲಿಂದ ಸುಮಾರು 98 ಸಾವಿರ ಜನ ಬರುತ್ತಾರೆ. ಹಾಗೆ ಬರುವವರು ಸರ್ಕಾರಿ ಬಸ್ಸು ಮತ್ತು ರೈಲುಗಳಲ್ಲಿ ಪ್ರಯಾಣಿಸುವಂತಾಗ ಬೇಕು. ಅದಕ್ಕಾಗಿ ಅದನ್ನು ಶಿಸ್ತುಬದ್ಧ ಹಾಗೂ ಆಕರ್ಷಣೀಯವಾಗಿಸಬೇಕು ಎಂಬುದು ಇಲಾಖೆ ಆಶಯ. ಆದಾಯ ಹೆಚ್ಚಳದ ಲೆಕ್ಕಾಚಾರ ಸರ್ಕಾರದ್ದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


