ಭಯೋತ್ಪಾದಕರ ದಾಳಿಗೆ 714 ಇರಾಕ್ ನಾಗರಿಕರು ಬಲಿ
ಭಯೋತ್ಪಾದಕರ ದಾಳಿಗೆ 714 ಇರಾಕ್ ನಾಗರಿಕರು ಸಾವನ್ನಪ್ಪಿದ್ದು 1 ,269 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವಿಶ್ವ ಸಂಸ್ಥೆ ವಕ್ತಾರ ಸ್ಟೀಫನ್ ಡುಜರ್ರಿಕ್ ಹೇಳಿದ್ದಾರೆ.

ಯುನೈಟೆಡ್ ನೇಷನ್ಸ್: ಅಕ್ಟೋಬರ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ 714 ಇರಾಕ್ ನಾಗರಿಕರು ಸಾವನ್ನಪ್ಪಿದ್ದು 1 ,269 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವಿಶ್ವ ಸಂಸ್ಥೆ ವಕ್ತಾರ ಸ್ಟೀಫನ್ ಡುಜರ್ರಿಕ್ ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಇರಾಕ್ ನ್ನು ಪ್ರತಿನಿಧಿಸುವ ವಿಶೇಷ ಪ್ರತಿನಿಧಿ ಜಾನ್ ಕುಬಿಸ್ ನೀಡಿರುವ ಮಾಹಿತಿಯನ್ನು ಆಧರಿಸಿ ಹೇಳಿಕೆ ನೀಡಿರುವ ಡುಜರ್ರಿಕ್, ಈ ಅಂಕಿ ಅಂಶಗಳು, ಭಯೋತ್ಪಾದನೆ ನಡುವೆ ಬದುಕುತ್ತಿರುವ ಇರಾಕ್ ಜನರ ಸಂಕಷ್ಟವನ್ನು ತೋರುತ್ತದೆ ಎಂದು ಹೇಳಿದ್ದಾರೆ.
ಸಾವಿಗೀಡಾದ 714 ಜನರ ಪೈಕಿ 559 ಮಂದಿ ಸಾಮಾನ್ಯ ನಾಗರಿಕರಾಗಿದ್ದರೆ, 155 ಮಂದಿ ಇರಾಕ್ ಭದ್ರತಾ ಪಡೆಯವರಾಗಿದ್ದಾರೆ ಎಂದು ಇರಾಕ್ ನಲ್ಲಿರುವ ಯುಎನ್ ನೆರವಿನ ನಿಯೋಗ(ಯುಎನ್ಎಎಂಐ) ಮಾಹಿತಿ ನೀಡಿದೆ. ಇರಾಕ್ ನಲ್ಲಿ ಭಯೋತ್ಪಾದಕರು ನಡೆಸುತ್ತಿರುವ ಕೃತ್ಯದಿಂದಾಗಿ ಹಿಂಸಾಚಾರ ಭುಗಿಲೆದ್ದಿದ್ದು ಭದ್ರತಾ ಪರಿಸ್ಥಿತಿ ಆತಂಕಕಾರಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


