ವಿದೇಶ

ಪಾಕಿಸ್ತಾನ ಚರ್ಚ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಐವರ ಬಂಧನ

ಈ ವರ್ಷದ ಪ್ರಾರಂಭದಲ್ಲಿ ೧೫ ಜನರನ್ನು ಆಹುತಿಯಾಗಿಸಿಕೊಂಡ ಎರಡು ಚರ್ಚ್ ಗಳ ಮೇಲೆ ನಡೆದ ಮಾರಣಾಂತಿಕ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪದ

ಪಾಕಿಸ್ತಾನ ಚರ್ಚ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಐವರ ಬಂಧನ
ಪಾಕಿಸ್ತಾನ ಚರ್ಚ್ ಸ್ಫೋಟದ ಒಂದು ದೃಶ್ಯ
Published On :

ಇಸ್ಲಾಮಾಬಾದ್: ಈ ವರ್ಷದ ಪ್ರಾರಂಭದಲ್ಲಿ  ೧೫ ಜನರನ್ನು ಆಹುತಿಯಾಗಿಸಿಕೊಂಡ ಎರಡು ಚರ್ಚ್ ಗಳ ಮೇಲೆ ನಡೆದ ಮಾರಣಾಂತಿಕ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಐವರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಲಾಹೋರಿನ ಕ್ರಿಶ್ಚಿಯನ್ ಸಮುದಾಯ ಹೆಚ್ಚು ವಾಸವಿರುವ ಯೌಹನಾಬಾದ್ ಪ್ರದೇಶದಲ್ಲಿ ಮಾರ್ಚ್ ೧೫ ರಂದು ತಾಲಿಬಾನಿನ ಆತ್ಮಹತ್ಯಾ ದಳದವರು ಸ್ಫೋಟಿಸಿಕೊಂಡ ಪರಿಣಾಮ ೧೫ ಜನ ಮೃತಪಟ್ಟು ೭೦ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ತೆಹರಿಕ್-ಎ-ತಾಲಿಬಾನ್ ಪಾಕಿಸ್ತಾನ ಮತ್ತು ಜಮಾತ್-ಉಲ್-ಅಹ್ರಾರ್ ಬಣಗಳು ಈ ಕೃತ್ಯಕ್ಕೆ ಹೊಣೆ ಹೊತ್ತಿದ್ದವು.

ಶಸ್ತ್ರಾಸ್ತ್ರಗಳು, ಸ್ಫೋಟಕ ಸಾಮಗ್ರಿಗಳು ಮತ್ತು ಡೆಟನೋಟರ್ ಗಳನ್ನು ಭಯೋತ್ಪಾದಕರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಷೇಧಿತ ಸಂಘಟನೆಗಳೊಂದಿಗೆ ಈ ಬಂಧಿತ ಭಯೋತ್ಪಾದಕರು ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.