ವಿದೇಶ

ಹಿಂದೂ ಮಹಾಸಾಗರದಲ್ಲಿ ಸಿಕ್ಕಿದ ಅವಶೇಷಗಳು ಮಲೇಷ್ಯಾ ವಿಮಾನದ್ದು?

ಹಿಂದೂ ಮಹಾಸಾಗರದ ರಿಯೂನಿಯನ್ ಐಲ್ಯಾಂಡ್‌ನಲ್ಲಿ ಪತ್ತೆಯಾಗಿರುವ ವಿಮಾನದ ಅವಶೇಷಗಳು ನಾಪತ್ತೆಯಾಗಿದ್ದ ಮಲೇಷ್ಯಾ...

ಹಿಂದೂ ಮಹಾಸಾಗರದಲ್ಲಿ ಸಿಕ್ಕಿದ ಅವಶೇಷಗಳು ಮಲೇಷ್ಯಾ ವಿಮಾನದ್ದು?
ಪತ್ತೆಯಾದ ಅವಶೇಷಗಳು (ಕೃಪೆ: ಟ್ವಿಟರ್/ @AircraftRetweet ಖಾತೆಯಿಂದ)
Published On :

ಕೌಲಲಾಂಪುರ್:  ಹಿಂದೂ ಮಹಾಸಾಗರದ ರಿಯೂನಿಯನ್ ಐಲ್ಯಾಂಡ್‌ನಲ್ಲಿ ಪತ್ತೆಯಾಗಿರುವ ವಿಮಾನದ ಅವಶೇಷಗಳು ನಾಪತ್ತೆಯಾಗಿದ್ದ ಮಲೇಷ್ಯಾ ವಿಮಾನದ್ದಾಗಿರಬಹುದೆಂದು ಶಂಕೆಯಿದೆ. ಎಂಎಚ್ 370 ಎಂಬ ಬೋಯಿಂಗ್ 777 ವಿಮಾನದ ಸಾಮ್ಯತೆಗಳಿರುವ ಅವಶೇಷಗಳು ಇಲ್ಲಿ ಪತ್ತೆಯಾಗಿದೆ.

ಬೋಯಿಂಗ್ 777ರಲ್ಲಿ ಕಂಡುಬರುವ ಫ್ಲಾಪರೋನ್ ಎಂಬ ಉಪಕರಣ ಈ ಅವಶೇಷಗಳಲ್ಲಿ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದಲೇ ಈ ಅವಶೇಷಗಳು  ಎಂಎಚ್ 370ರದ್ದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.

ಪಶ್ಚಿಮ ಹಿಂದೂಮಹಾಸಾಗರದ ಮೆಡಗಾಸ್ಕರ್ ಬಳಿ ಫ್ರೆಂಚ್ ಅಧಿಕಾರದ ದ್ವೀಪಗಳಾದ ರೀಯೂನಿಯನ್ ದ್ವೀಪದಲ್ಲಿ  ನಿನ್ನೆ ವಿಮಾನದ ಅವಶೇಷಗಳು ಪತ್ತೆಯಾಗಿತ್ತು. ಇಲ್ಲೀಗ ಫ್ರೆಂಚ್ ವಾಯುಸೇನೆಯ ಅಧಿಕಾರಿಗಳು ಪರಿಶೋಧನೆ ನಡೆಸುತ್ತಿದ್ದಾರೆ. ಒಂದು ವೇಳೆ ಇದು ಎಂಎಚ್  370ರ ಅವಶೇಷವೆಂದು ಸಾಬೀತಾದರೆ  ನಾಪತ್ತೆಯಾಗಿರುವ ವಿಮಾನದ ಬಗ್ಗೆ ಸಿಕ್ಕಿದ ಮೊದಲ ಸಾಕ್ಷಿ ಇದಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.