ವಿದೇಶ

ತಾಲಿಬಾನ್ ಮುಖಂಡ ಮುಲ್ಲಾ ಮೊಹಮದ್ ಓಮರ್ ಸಾವು

ಅಪ್ಘಾನ್ ನಿನ ತಾಲಿಬಾನ್ ಮುಖಂಡ ಮುಲ್ಲಾ ಮೊಹಮದ್ ಓಮರ್ ಮೃತಪಟ್ಟಿರುವ ಬಗ್ಗೆ ಬಿಬಿಸಿ ವರದಿ ಮಾಡಿದೆ.

ತಾಲಿಬಾನ್ ಮುಖಂಡ ಮುಲ್ಲಾ ಮೊಹಮದ್ ಓಮರ್ ಸಾವು
ತಾಲಿಬಾನ್ ಮುಖಂಡ ಮುಲ್ಲಾ ಮೊಹಮದ್ ಓಮರ್(ಸಂಗ್ರಹ ಚಿತ್ರ)
Published On :

ಲಂಡನ್: ಅಫ್ಘಾನ್ ನ ತಾಲಿಬಾನ್ ಮುಖಂಡ ಮುಲ್ಲಾ ಮೊಹಮದ್ ಓಮರ್ ಮೃತಪಟ್ಟಿರುವ ಬಗ್ಗೆ ಬಿಬಿಸಿ ವರದಿ ಮಾಡಿದೆ.

ತಾಲಿಬಾನ್ ಮುಖಂಡ ಮುಲ್ಲಾ ಮೊಹಮದ್ ಓಮರ್ ಮೃತಪಟ್ಟಿದ್ದಾನೆ ಎಂದು ಅಫ್ಘಾನಿಸ್ತಾನ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಆದರೆ ಈ ಹೇಳಿಕೆ ಬಗ್ಗೆ ತಾಲಿಬಾನ್  ಉಗ್ರ ಸಂಘಟನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  ಕಳೆದ ಎರಡು ಮೂರು ವರ್ಷಗಳ ಹಿಂದೆಯೇ ಈತ ಮೃತಪಟ್ಟಿದ್ದಾನೆ ಎಂದು ಅಪ್ಘಾನಿಸ್ತಾನ ಸರ್ಕಾರ ಹಾಗೂ ಅಲ್ಲಿನ ಗುಪ್ತಚರ ಮೂಲಗಳು ತಿಳಿಸಿವೆ. ಈ ಬಗ್ಗೆ ಹೆಚ್ಚಿನ ವಿಷಯಗಳು ಬಹಿರಂಗವಾಗಿಲ್ಲ.

ಮೊಹಮದ್ ಓಮರ್ ಸಾವಿನ ಬಗ್ಗೆ ಬಿಬಿಸಿ ತಾಲಿಬಾನ್ ಸಂಘಟನೆಯಿಂದ ಸ್ಪಷ್ಟನೆ ಕೇಳಿದ್ದು, ಈ ಬಗ್ಗೆ ಶೀಘ್ರವೇ ಅಧಿಕೃತ ಹೇಳಿಕೆ ನೀಡುವುದಾಗಿ ತಾಲಿಬಾನ್ ವಕ್ತಾರನೊಬ್ಬ ತಿಳಿಸಿದ್ದಾನೆ. ಈ ಹಿಂದೆಯೂ ತಾಲಿಬಾನ್ ಮುಖಂಡ ಮುಲ್ಲಾ ಮೊಹಮದ್ ಓಮರ್ ಮೃತಪಟ್ಟಿರುವ ಬಗ್ಗೆ ಅನೇಕ ವರದಿಗಳಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.