ಭಾರತದ ಮೇಲೆ ದಾಳಿ ನಡೆಸಲು ಐಎಸ್ಐಎಸ್ ನಿಂದ ಅಂತಿಮ ಸಿದ್ಧತೆ!
ಐ.ಎಸ್.ಐ.ಎಸ್ ಉಗ್ರ ಸಂಘಟನೆ ಭಾರತದ ಮೇಲೆ ದಾಳಿ ನಡೆಸಲು ಸಿದ್ಧಗೊಂಡಿದೆ ಎಂಬ ಆಘಾತಕಾರಿ ವರದಿ ಬಹಿರಂಗವಾಗಿದೆ.

ವಾಷಿಂಗ್ ಟನ್: ಐಎಸ್ಐಎಸ್ ಉಗ್ರ ಸಂಘಟನೆ ಭಾರತದ ಮೇಲೆ ದಾಳಿ ನಡೆಸಲು ಸಿದ್ಧಗೊಂಡಿದೆ ಎಂಬ ಆಘಾತಕಾರಿ ವರದಿ ಬಹಿರಂಗವಾಗಿದೆ.
ಅಮೆರಿಕಾದ ಮೇಲೂ ಪರೋಕ್ಷ ದಾಳಿ ನಡೆಸಲು ಸಂಚು ರೂಪಿಸಿರುವ ಐಎಸ್ಐಎಸ್ ಸಂಘಟನೆ, ಆರ್ಮಗೆಡ್ಡೋನ್ ತರಹದ ಘರ್ಷಣೆಗೆ ಪ್ರಚೋದನೆ ನೀಡುತ್ತಿದೆ ಎಂದು ಅಮೆರಿಕಾದ (ಯು.ಎಸ್.ಎ) ತನಿಖಾ ವರದಿಯಿಂದ ತಿಳಿದುಬಂದಿದೆ.
ಅಂತಿಮ ಹಂತದ ಯುದ್ಧಕ್ಕೆ ಸಜ್ಜಾಗುತ್ತಿರುವ ಇಸೀಸ್ ಸಂಘಟನೆ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಾಲಿಬಾನ್ ಸಂಘಟನೆಗಳನ್ನು ಒಗ್ಗೂಡಿಸಲು ಯತ್ನಿಸುತ್ತಿದೆ. ತಾಲಿಬಾನ್ ನೊಂದಿಗೆ ಸಂಪರ್ಕ ಹೊಂದಿರುವ ಪಾಕಿಸ್ತಾನದ ವ್ಯಕ್ತಿ ಇದಕ್ಕಾಗಿ ಉರ್ದು ಭಾಷೆಯಲ್ಲಿ 32 ಪುಟಗಳ ದಾಖಲೆಯನ್ನು ಸಿದ್ಧಪಡಿಸಿದ್ದಾನೆ.
ಈ ದಾಖಲೆಯಲ್ಲಿ ಭಾರತದ ಮೇಲೆ ದಾಳಿ ನಡೆಸಲು ಸಿದ್ಧತೆಗಳು ನಡೆಯುತ್ತಿವೆ. ಈ ದಾಳಿ ಅಮೆರಿಕಾದೊಂದಿಗೆ ಘರ್ಷಣೆ ಉಂಟು ಮಾಡುವುದಕ್ಕೆ ಪ್ರಚೋದಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಉರ್ದು ಭಾಷೆಯಲ್ಲಿರುವ ದಾಖಲೆಗಳನ್ನು ಹಾರ್ವರ್ಡ್ ನ ವಿದ್ವಾಂಸರೊಬ್ಬರು ಅನುವಾದ ಮಾಡಿದ್ದಾರೆ. ಐ.ಎಸ್.ಐ.ಎಸ್ ನ ಅಸ್ತಿತ್ವ ಹಾಗೂ ಅದರಿಂದ ಉಂಟಾಗುವ ಅಪಾಯಗಳ ಬಗ್ಗೆ ಕಳೆದ ಎರಡು ತಿಂಗಳಲ್ಲಿ ಪಾಕಿಸ್ತಾನ ಹಾಗೂ ಅಮೇರಿಕಾದ ಹಿರಿಯ ಅಧಿಕಾರಿಗಳು ಚರ್ಚೆ ನಡೆಸಿ, ಐ.ಎಸ್.ಐ.ಎಸ್ ಸಂಘಟನೆಯನ್ನು ನಿರ್ನಾಮ ಮಾಡಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದರು.
ಅಮೆರಿಕಾದ ಮೇಲೆ ನೇರವಾಗಿ ದಾಳಿ ಮಾಡಿ ತಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುವ ಬದಲು ಕಾಲೀಫಗಿರಿಯ ಸ್ಥಾಪನೆಗಾಗಿ ಅರಬ್ ರಾಷ್ಟ್ರಗಳನ್ನು ಪ್ರಚೋದಿಸಬೇಕು ಎಂಬ ಅಭಿಪ್ರಾಯ ಇಸೀಸ್ ಗಿರುವುದು ಉರ್ದು ದಾಖಲೆಯ ಮೂಲಕ ಬಹಿರಂಗಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


