ರಾಣಿಗೆ ಇನ್ನಿಲ್ಲ ಶಬ್ದದ ಕಿರಿಕಿರಿ ಅರಮನೆ ಇನ್ನು ಸೌಂಡ್‍ಪ್ರೂಫ್
ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದರೆ ಹೇಗೆ'' ಎಂದು ಇಲ್ಲಿ ಕೇಳುವ ಹಾಗಿಲ್ಲ. ವಿಮಾನ ನಿಲ್ದಾಣದ ಪಕ್ಕದಲ್ಲೇ ಅರಮನೆಯಿದ್ದರೂ...

ಲಂಡನ್: ``ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದರೆ ಹೇಗೆ'' ಎಂದು ಇಲ್ಲಿ ಕೇಳುವ ಹಾಗಿಲ್ಲ. ವಿಮಾನ ನಿಲ್ದಾಣದ ಪಕ್ಕದಲ್ಲೇ ಅರಮನೆಯಿದ್ದರೂ ರಾಣಿಯ ಕಿವಿಗೆ ವಿಮಾನದ ಶಬ್ದ ಕೇಳಲೇಬಾರದು. ಅದಕ್ಕಾಗಿ ಬ್ರಿಟನ್‍ನ ಸಾರಿಗೆ ಇಲಾಖೆ ರಾಣಿ ಎಲಿಜಬೆತ್ 2 ಅವರ ಮನೆಯನ್ನೇ ನಾಯ್ಸ್ ಪ್ರೂಫ್(ಶಬ್ದ ನಿರೋಧಕ ವ್ಯವಸ್ಥೆ) ಮಾಡಲು ಹೊರಟಿದೆ. ಇಲ್ಲಿನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಮೂರನೇ ರನ್ ವೇ ನಿರ್ಮಾಣಕ್ಕೆ ಇಲಾಖೆ ಮುಂದಾಗಿದೆ. ಆದರೆ, ವಿಮಾನ ನಿಲ್ದಾಣದ ಪಕ್ಕದಲ್ಲೇ ವಿಂಡ್ಸರ್ ಅರಮನೆಯಿದೆ. 89 ವರ್ಷದ ರಾಣಿ ಹೆಚ್ಚಾಗಿ ತಮ್ಮ ವಾರಾಂತ್ಯವನ್ನು 900 ವರ್ಷಗಳಷ್ಟು ಹಳೆಯ ಈ ಅರಮನೆಯಲ್ಲೇ ಕಳೆಯುತ್ತಾರೆ. ವಿಮಾನಗಳ ಟೇಕ್‍ಆಫ್ ಹಾಗೂ ಲ್ಯಾಂಡಿಂಗ್ ವೇಳೆ ಶಬ್ದವಾಗುವುದು ಸಹಜ. ಈ ಶಬ್ದವು ರಾಣಿಯ ಕಿವಿಗೆ ಬಿದ್ದು ಕಿರಿಕಿರಿ ಉಂಟುಮಾಡಬಾರದೆಂದು, ರಾಣಿಗೆ ಬರೋಬ್ಬರಿ 700 ದಶಲಕ್ಷ ಪೌಂಡ್(ರು.6,883 ಕೋಟಿ) ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇಲ್ಲಿ ಪರಿಹಾರವೆಂದರೆ ಹಣವಲ್ಲ, 13 ಎಕರೆಯಲ್ಲಿ ವ್ಯಾಪಿಸಿರುವ ಈ ಅರಮನೆಗೆ ವಿಮಾನಗಳ ಶಬ್ದ ಕೇಳದಂತೆ ನಿರೋಧಕ ವ್ಯವಸ್ಥೆಯನ್ನು ಅಳವಡಿಸುವುದು. ಒಟ್ಟಿನಲ್ಲಿ 3ನೇ ರನ್‍ವೇ ನಿರ್ಮಾಣಕ್ಕೂ ಮೊದಲು ರು.6,888 ಕೋಟಿ ವೆಚ್ಚದಲ್ಲಿ ವಿಂಡ್ಸರ್ ಅರಮನೆಯನ್ನು ಸೌಂಡ್ ಪ್ರೂಫ್ ಮಾಡುವ ಹೊಣೆಯನ್ನು ಸಾರಿಗೆ ಇಲಾಖೆ ಹೊತ್ತುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


