ಈತನಿಗೆ ಪಾರ್ಟ್ಟೈಮ್ ಸಂಗಾತಿ ಬೇಕಂತೆ
``ಸಂಬಂಧಗಳಿಗೆ ಬೆಲೆ ಕಟ್ಟಲಾಗದು'' ಎಂದು ಹೇಳಲಾಗುತ್ತದೆ. ಆದರೆ ಇಲ್ಲೊಬ್ಬ ಭೂಪ ಸಂಬಂಧಕ್ಕೇ ಬೆಲೆ ಕಟ್ಟಿ ಬಿಟ್ಟಿದ್ದಾನೆ. ರಿಲೇಷನ್ಷಿಪ್ ಎನ್ನುವುದು ಕೆಲವರಿಗೆ ಎಷ್ಟು ಚೀಪ್(ಅಗ್ಗ) ಆಗಿದೆ ಎನ್ನುವುದು ತಿಳಿಯ ಬೇಕೆಂದರೆ ಈ ಸುದ್ದಿ ಓದಲೇಬೇಕು...

ನವದೆಹಲಿ: ``ಸಂಬಂಧಗಳಿಗೆ ಬೆಲೆ ಕಟ್ಟಲಾಗದು'' ಎಂದು ಹೇಳಲಾಗುತ್ತದೆ. ಆದರೆ ಇಲ್ಲೊಬ್ಬ ಭೂಪ ಸಂಬಂಧಕ್ಕೇ ಬೆಲೆ ಕಟ್ಟಿ ಬಿಟ್ಟಿದ್ದಾನೆ. ರಿಲೇಷನ್ಷಿಪ್ ಎನ್ನುವುದು ಕೆಲವರಿಗೆ ಎಷ್ಟು ಚೀಪ್(ಅಗ್ಗ) ಆಗಿದೆ ಎನ್ನುವುದು ತಿಳಿಯ ಬೇಕೆಂದರೆ ಈ ಸುದ್ದಿ ಓದಲೇಬೇಕು.
ಬರ್ಮಿಂಗ್ಹ್ಯಾಂನ ಈ ವ್ಯಕ್ತಿಗೆ ಕನಿಷ್ಠ 6 ತಿಂಗಳು ಉಳಿಯುವಂತಹ ಸಂಬಂಧ ಬೇಕಂತೆ. 6 ತಿಂಗಳು ಅವನ ಜತೆ ಇರುವಂತಹ ಹುಡುಗಿಯನ್ನು ಹುಡುಕಿಕೊಟ್ಟರೆ ನಿಮಗೆ ಬರೋಬ್ಬರಿ 10 ಸಾವಿರ ಡಾಲರ್ (ರು.6,33,714) ಕೊಡ್ತಾನಂತೆ. ಹೀಗೆಂದು ಅಲಬಾಮಾದ 29 ವರ್ಷದ ರೆನ್ ಲೂ ಯೂ ಘೋಷಿಸಿದ್ದಾನೆ.
ಹಾರ್ವರ್ಡ್ ಪದವೀಧರನಾದ ಈತ ಕಳೆದ 10 ತಿಂಗಳಲ್ಲಿ 30 ಮಂದಿ ಯುವತಿಯರೊಂದಿಗೆ ಡೇಟಿಂಗ್ ಮಾಡಿದ್ದಾನಂತೆ. ಆದರೆ ಆತನ ದುರದೃಷ್ಟಕ್ಕೆ ಯಾವೊಬ್ಬಳೂ ಆತನ ಜತೆ ಹೆಚ್ಚಿನ
ಸಮಯ ಕಳೆಯಲು ಇಚ್ಛಿಸಲಿಲ್ಲವಂತೆ. ಹೀಗಾಗಿ ರೆನ್ ಲೂ ಈಗ ಸುಖೀ ಸಂಬಂಧದ ಮೊರೆಹೋಗಲು ನಿರ್ಧರಿಸಿದ್ದಾನೆ. ಇದಕ್ಕಾಗಿ ಡೇಟ್ರೆನ್.ಕಾಂ ಎಂಬ ವೆಬ್ಸೈಟ್ ಸೃಷ್ಟಿಸಿದ್ದಾನೆ. ``ಸುಖೀ ಸಂಬಂಧ ಹೊಂದಲು ಬಯಸುವ ನನಗೆ ಡೇಟಿಂಗ್ ಮಾಡಲು ಹುಡುಗಿಯರು ಬೇಕು. ಆದರೆ ಒಂದೇ ಒಂದು ಷರತ್ತು. ಕನಿಷ್ಠ 6 ತಿಂಗಳಾದರೂ ನನ್ನ ಜೊತೆಯೇ ಇರುವಂತಹ ಯುವತಿಯನ್ನು ಹುಡುಕಿಕೊಟ್ಟರೆ ನಿಮಗೆ 10 ಸಾವಿರ ಡಾಲರ್ ಬಹುಮಾನ ನೀಡುತ್ತೇನೆ'' ಎಂದು ತನ್ನ ವೆಬ್ ಸೈಟ್ನಲ್ಲಿ ಪ್ರಕಟಿಸಿದ್ದಾನೆ. ಅಷ್ಟೇ ಅಲ್ಲ, ಇದು ನಿಮ್ಮ ಗೆಳೆಯನಿಗೆ ಹಾಗೇ ಸುಮ್ಮನೆ ಮಾಡುವ ಸಹಾಯ ಎಂದು ಭಾವಿಸಿಕೊಳ್ಳಿ ಎಂದೂ ಹೇಳಿದ್ದಾನೆ.
``ನನ್ನ ಈ ಘೋಷಣೆ ವಿಚಿತ್ರ ಎಂದೆನಿಸಬಹುದು. ನೀವೇ ಯೋಚಿಸಿ, ನೀವು ದಿನಕ್ಕೆ 12 ಗಂಟೆ ಕೆಲಸ ಮಾಡಿದರೆ, ಉಳಿದ ಸಮಯವನ್ನು ಹೇಗೆ ಕಳೆಯುತ್ತೀರಿ? ಯಾವತ್ತೂ ಬಾರ್ ಮುಂದೆ
ನಿಂತುಕೊಂಡು ಕಾಲ ಕಳೆಯಲು ಸಾಧ್ಯವೇ? ಅದಕ್ಕಾಗಿ ಈ ಆಫರ್ ನೀಡುತ್ತಿದ್ದೇನೆ. ಇದುವೇ ನನಗೆ ಹೆಚ್ಚಿನ ಮಜಾ ಕೊಡುತ್ತದೆ'' ಎಂದೂ ಹೇಳಿದ್ದಾನೆ ಈ ಮಹಾನುಭಾವ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


