ಕಾಮಕೇಳಿ ನಡೆಸಿದ್ದಕ್ಕೆ ಜೈಲು ಪಾಲಾದ
ಸಾರ್ವಜನಿಕ ಸ್ಥಳಗಳಲ್ಲಿ ಕಾಮಕೇಳಿ ನಡೆಸುವುದು ನಮ್ಮಂಥ ಮಡಿವಂತ ದೇಶದಲ್ಲಿ ಮಾತ್ರವಲ್ಲ ಪಾಶ್ಚಾತ್ಯ ದೇಶಗಳಲ್ಲೂ ನಿಷಿದ್ದವೇ ಹಾಗೂ ಶಿಕ್ಷಾರ್ಹ...

ಫ್ಲೋರಿಡಾ: ಸಾರ್ವಜನಿಕ ಸ್ಥಳಗಳಲ್ಲಿ ಕಾಮಕೇಳಿ ನಡೆಸುವುದು ನಮ್ಮಂಥ ಮಡಿವಂತ ದೇಶದಲ್ಲಿ ಮಾತ್ರವಲ್ಲ ಪಾಶ್ಚಾತ್ಯ ದೇಶಗಳಲ್ಲೂ ನಿಷಿದ್ದವೇ ಹಾಗೂ ಶಿಕ್ಷಾರ್ಹ. ಫ್ಲೋರಿಡಾದ ಸಮುದ್ರತೀರದಲ್ಲಿ ರಾಸಲೀಲೆ ನಡೆಸುವ ಸಾಹಸ ಮಾಡಿ ಜೈಲು ಪಾಲಾಗಿದ್ದಾನೆ ಈ ಭೂಪ. ಬರೀ ಅಷ್ಟೇ ಆಗಿದ್ದರೆ, ಒಂದೋ ಎರಡೋ ತಿಂಗಳು ಶಿಕ್ಷಾರ್ಹವಾಗುತ್ತಿತ್ತೇನೋ. ಆದರೆ ಈತ ಇನ್ನೂ ವಿಕೃತಿಗಿಳಿದು, 4 ವರ್ಷದ ಚಿಕ್ಕ ಹುಡುಗನ ಎದುರಲ್ಲೇ ಪೌರುಷ ಪ್ರದರ್ಶನ ಮಾಡಿ ಎರಡೂವರೆ ವರ್ಷ ಸೆರೆಮನೆಗೆ ತಳ್ಳಲ್ಪಟ್ಟಿದ್ದಾನೆ. ಕಳೆದ ಜುಲೈನಲ್ಲಿ ಜೋಸ್ ಕ್ಯಾಬಲರೋ(40) ಫ್ಲೋರಿಡಾದ ಬೀಚ್‍ನಲ್ಲಿ ಜನಸಂದಣಿಯ ನಡುವೆಯೇ ಆಲ್ವರೆಜ್ ಎಂಬ ಪರಿಚಿತ ಯುವತಿಯೊಂದಿಗೆ ಮಟಮಟ ಮಧ್ಯಾಹ್ನದಲ್ಲೇ ಬಹಿರಂಗವಾಗಿ ಮಿಲನಮಹೋತ್ಸವ ಶುರುವಿಟ್ಟುಕೊಂಡಿದ್ದಾನೆ. 4 ವರ್ಷದ ಬಾಲಕ ಅದನ್ನು ನೋಡುತ್ತಿದ್ದರೂ ಇವರ ಆಟ ಮುಂದುವರಿದಿತ್ತು. ಇದನ್ನು ಪ್ರತ್ಯಕ್ಷದರ್ಶಿಯೊಬ್ಬ ವಿಡಿಯೋ ಮಾಡಿ ಪೊಲೀಸರಿಗೆ ನೀಡಿದ್ದಾನೆ. ಮಗುವನ್ನು ಎಳೆದೊಯ್ಯಲು ಬಂದ ತಾಯಿ ಸಲ್ಲಾಪ ನಿಲ್ಲಿಸಲು ಹೇಳಿದಾಗ ಕ್ಯಾಬಲರೋ ಆಕೆಯನ್ನೇ ಬಯ್ದು ಕಳಿಸಿದ್ದಾನೆ. ದೂರಿಗೆ ಸ್ಪಂದಿಸಿದ ನ್ಯಾಯಾಂಗ ಆತನಿಗೆ ಎರಡೂವರೆ ವರ್ಷ ಜೈಲುಶಿಕ್ಷೆ ವಿಧಿಸಿ ಯುವತಿಗೆ ಎಚ್ಚರಿಸಿ ಬಿಡುಗಡೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


