ಬಾಂಗ್ಲಾ ಬ್ಲಾಗರ್ ಕೊಲೆಗಡುಕರಿಗೆ ಗಲ್ಲು ಶಿಕ್ಷೆ
ಬ್ಲಾಗರ್ ಮತ್ತು ಸಾಮಾಜಿಕ ಕಾರ್ಯಕರ್ತ ಅಹ್ಮದ್ ರಜೀಬ್ ಹೈದರ್ ಅವರನ್ನು ಫೆಬ್ರವರಿ ೨೦೧೩ ರಲ್ಲಿ ಕೊಂದ ಕೊಲೆಗಡುಕರಿಕೆ ಬಾಂಗ್ಲಾ ದೇಶ ನ್ಯಾಯಾಲಯ ಮಂಗಳವಾರ

ಢಾಕಾ: ಬ್ಲಾಗರ್ ಮತ್ತು ಸಾಮಾಜಿಕ ಕಾರ್ಯಕರ್ತ ಅಹ್ಮದ್ ರಜೀಬ್ ಹೈದರ್ ಅವರನ್ನು ಫೆಬ್ರವರಿ ೨೦೧೩ ರಲ್ಲಿ ಕೊಂದ ಕೊಲೆಗಡುಕರಿಕೆ ಬಾಂಗ್ಲಾ ದೇಶ ನ್ಯಾಯಾಲಯ ಮಂಗಳವಾರ ಗಲ್ಲು ಶಿಕ್ಷೆ ನೀಡಿದೆ.
ಈ ದಾಳಿ ನಡೆಸಿದ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಅನ್ಸಾರುಲ್ಲ ಬಾಂಗ್ಲಾ ಸಂಸ್ಥೆಯ ಅಧ್ಯಕ್ಷ ಮುಫ್ತಿ ಜಾಸಿಮ್ ಉದ್ದೀನ್ ರಹ್ಮಾನಿ ಅವರನ್ನು ಒಳಗೊಂಡಂತೆ ಇನ್ನಿತರ ಆರು ಜನರಿಗೆ ವಿವಿಧ ಜೈಲು ವಾಸ ಶಿಕ್ಷೆ ನೀಡಿದೆ.
ರಹ್ಮಾನಿ ಈ ಪ್ರಕರಣಕ್ಕೆ ಚಿತಾವಣೆ ನೀಡಿದವರು ಎಂದು ಹೆಸರಿಸಲಾಗಿದೆ.
ವೃತ್ತಿಪರ ವಿನ್ಯಾಸಕಾರನಾಗಿದ್ದ ಹೈದರ್ ಅವರ ಮೇಲೆ ಢಾಕಾದ ಮೀರ್ಪುರ್ ಪ್ರದೇಶದಲ್ಲಿ ಫೆಬ್ರವರಿ ೧೫ ೨೦೧೩ರಂದು ದಾಳಿ ನಡೆಸಲಾಗಿತ್ತು.
ಧಾರ್ಮಿಕ ಮೂಲಭೂತವದಿಗಳು ಈ ಕೊಲೆ ಎಸಗಿದ್ದಾರೆ ಎಂದು ಪೊಲೀಸ್ ತನಿಖೆ ತಿಳಿಸಿತ್ತು. ೨೦೧೫ ರಲ್ಲಿ ಇನ್ನಿತರ ಐದು ಜಾತ್ಯಾತೀತ ಬ್ಲಾಗರ್ ಗಳು ಮತ್ತು ಲೇಖಕರನ್ನು ಬಾಂಗ್ಲಾದಲ್ಲಿ ಕೊಲೆಗೈಯ್ಯಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


