ವಿದೇಶ

ಕೊರಿಯಾ ಆಡಳಿತಾರೂಢ ಪಕ್ಷದ ನಾಯಕನ ಆತ್ಮೀಯ ಸಾವು

ಉತ್ತರ ಕೊರಿಯಾದ ಆಡಿಳಿತಾರೂಢ ಪಕ್ಷದ ನಾಯಕ ಕಿಮ್ ಜೋಂಗ್ ಉನ್ ಅವರ ಆತ್ಮೀಯರೆಂದೇ ಖ್ಯಾತಿ ಪಡೆದಿದ್ದ ಕಿಮ್ ಯಾಂಗ್ ಗೊನ್ ಅವರು ಬುಧವಾರ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ...

ಕೊರಿಯಾ ಆಡಳಿತಾರೂಢ ಪಕ್ಷದ ನಾಯಕನ ಆತ್ಮೀಯ ಸಾವು
ಅಪಘಾತದಲ್ಲಿ ನಾಯಕ ಕಿಮ್ ಜೋಂಗ್ ಉನ್ ಅವರ ಆತ್ಮೀಯ ಕಿಮ್ ಯಾಂಗ್ ಗೊನ್ (ಸಂಗ್ರಹ ಚಿತ್ರ)
Published On :

ಸಿಯೋಲ್: ಉತ್ತರ ಕೊರಿಯಾದ ಆಡಿಳಿತಾರೂಢ ಪಕ್ಷದ ನಾಯಕ ಕಿಮ್ ಜೋಂಗ್ ಉನ್ ಅವರ ಆತ್ಮೀಯರೆಂದೇ ಖ್ಯಾತಿ ಪಡೆದಿದ್ದ ಕಿಮ್ ಯಾಂಗ್ ಗೊನ್ ಅವರು ಬುಧವಾರ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.

ವರ್ಕರ್ಸ್ ಪಾರ್ಟಿ (ಕಾರ್ಮಿಕರ ಪಕ್ಷ)ಯಲ್ಲಿ ಕಾರ್ಯದರ್ಶಿ ಮತ್ತು ಯುನೈನೆಟ್ ಫ್ರಂಟ್ ಡಿಪಾರ್ಟ್ ಮೆಂಟ್ ನಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಕಿಮ್ ಯಾಂಗ್ ಗೊನ್ ಅವರು ಕಾರು ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಕಿಮ್ ಯಾಂಗ್ ಗೋನ್ ಅವರ ಸಾವು ಕುರಿತಂತೆ ಪ್ರತಿಕ್ರಿಯೆ ನೀಡಿರು ಉತ್ತರ ಕೊರಿಯಾದ ನಾಯಕತ್ವ ತಜ್ಞ ಮೈಕೆಲ್ ಮ್ಯಾಡೆನ್, ಕಿಮ್ ಯಾಂಗ್ ಅವರು ಅನುಭವಿ ಸಲಹೆಗಾರರಾಗಿದ್ದರು ಹಾಗೂ ವಿದೇಶ ವ್ಯವಹಾರಗಳ ಸಾಕಷ್ಟು ತಿಳಿದುಕೊಂಡಿದ್ದಂತಹ ವ್ಯಕ್ತಿಯಾಗಿದ್ದರು. ಅಲ್ಲದೆ, ಅವರು ಸಮಾಜದಲ್ಲಿ ಸಾಕಷ್ಟು ಸಂಪರ್ಕಗಳನ್ನು ಹೊಂದಿದ್ದರು. ಅವರ ಸಾವು ಸಾಕಷ್ಟು ನೋವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.