ಪತ್ರಕರ್ತರಿಗೆ ಭಾರತ ಅಪಾಯಕಾರಿ
ಮಾಧ್ಯಮ ಪ್ರತಿನಿಧಿಗಳಿಗೆ ಭಾರತವು ಏಷ್ಯಾದಲ್ಲೇ ಅತಿ ಅಪಾಯಕಾರಿ ದೇಶವಾಗಿದ್ದು, ಪ್ರಸಕ್ತ ವರ್ಷ ಇಲ್ಲಿ 9 ಮಂದಿ ಪತ್ರಕರ್ತರನ್ನು...

ಪ್ಯಾರಿಸ್: ಮಾಧ್ಯಮ ಪ್ರತಿನಿಧಿಗಳಿಗೆ ಭಾರತವು ಏಷ್ಯಾದಲ್ಲೇ ಅತಿ ಅಪಾಯಕಾರಿ ದೇಶವಾಗಿದ್ದು, ಪ್ರಸಕ್ತ ವರ್ಷ ಇಲ್ಲಿ 9 ಮಂದಿ ಪತ್ರಕರ್ತರನ್ನು ಹತ್ಯೆಗೈಯ್ಯಲಾಗಿದೆ. ಹೀಗೆಂದು ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್(ಆರ್‍ಎಸ್‍ಎಸ್ )ನ ವಾರ್ಷಿಕ ವರದಿ ಹೇಳಿದೆ.
2015ರಲ್ಲಿ ವಿಶ್ವಾದ್ಯಂತ 110 ಪತ್ರಕರ್ತರು ಕೊಲೆಯಾಗಿದೆ. ಯುದ್ಧಪೀಡಿತ ದೇಶಗಳಾದ ಇರಾಕ್ ಮತ್ತು ಸಿರಿಯಾಗಳಲ್ಲಿ ಕ್ರಮವಾಗಿ 11 ಮತ್ತು 10 ಪತ್ರಕರ್ತರ ಕೊಲೆಯಾಗಿದೆ. ಆದರೆ, ಅಚ್ಚರಿಯೆಂದರೆ, ಶಾಂತಿಯುತ ದೇಶವೆಂದೇ ಪರಿಗಣಿಸಲಾಗಿರುವ ಭಾರತದಲ್ಲಿ 9 ಮಂದಿ ಪತ್ರಕರ್ತರನ್ನು ಹತ್ಯೆಗೈಯ್ಯಲಾಗಿದೆ ಎಂದೂ ವರದಿ ಹೇಳಿದೆ. ಪತ್ರಕರ್ತರ ರಕ್ಷಣೆಗೆ ವಿಶ್ವಸಂಸ್ಥೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ವರದಿಯಲ್ಲಿ ಒತ್ತಾಯಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


