ಸೇನಾಧ್ಯಕ್ಷರೊಂದಿಗೆ ಚರ್ಚಿಸಿಯೇ ತುರ್ತು ಪರಿಸ್ಥಿತಿ ಹೇರಿದ್ದೆ: ಮುಷರಫ್
2007ರಲ್ಲಿ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಹೇರುವುದಕ್ಕೂ ಮೊದಲು ಸೇನಾಧ್ಯಕ್ಷರೊಂದಿಗೆ ಚರ್ಚಿಸಿದ್ದೆ ಎಂದು ಮಾಜಿ ಅಧ್ಯಕ್ಷ ಜನರಲ್ ಫರ್ವೇಜ್ ಮುಷರಫ್ ಹೇಳಿದ್ದಾರೆ...

ಇಸ್ಲಾಮಾಬಾದ್: 2007ರಲ್ಲಿ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಹೇರುವುದಕ್ಕೂ ಮೊದಲು ಸೇನಾಧ್ಯಕ್ಷರೊಂದಿಗೆ ಚರ್ಚಿಸಿದ್ದೆ ಎಂದು ಮಾಜಿ ಅಧ್ಯಕ್ಷ ಜನರಲ್ ಫರ್ವೇಜ್ ಮುಷರಫ್ ಹೇಳಿದ್ದಾರೆ.
ಈ ಬಗ್ಗೆ ಡಾನ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಮುಷರಫ್, ಪಾಕಿಸ್ತಾನದ ಆಂತರಿಕ ಪರಿಸ್ಥಿತಿ ಗಂಭೀರವಾದ್ದರಿಂದ ಅನಿವಾರ್ಯವಾಗಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಆದರೆ ಇದಕ್ಕೂ ಮೊದಲು ಅಂದಿನ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಅಶ್ಫಾಕ್ ಫರ್ವೇಜ್ ಖಯಾನಿ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ್ದೆ. ಅಂತೆಯೇ ಅಂದಿನ ಪ್ರಧಾನಿ ಶೌಕತ್ ಎಜೀಜ್ ಅವರನ್ನು ಸಂಪರ್ಕಿಸಿ ಚರ್ಚಿಸಿದ್ದೆ. ಆ ಬಳಿಕವೇ ತುರ್ತು ಪರಿಸ್ಥಿತಿ ಹೇರಲಾಗಿತ್ತು ಎಂದು ಮುಷರಫ್ ಹೇಳಿದ್ದಾರೆ.
ಅಲ್ಲದೆ ಸೇನಾ ಮುಖ್ಯಸ್ಥ ಖಯಾನಿ ಅವರನ್ನು ಈ ಪ್ರಕರಣದಲ್ಲಿ ಪ್ರಧಾನ ಅರೋಪಿ ಅಪರಾಧಿ ಎಂದು ಹೇಳಿರುವ ಮುಷರಫ್, ಖಯಾನಿ ಅವರು ನವೆಂಬರ್ 27ರಂದು ಪಾಕಿಸ್ತಾನದ ಸೇನಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಆ ಬಳಿಕವಾದರೂ ತುರ್ತು ಪರಿಸ್ಥಿತಿ ಹಿಂತೆಗೆದುಕೊಳ್ಳಬಹುದಿತ್ತು ಅದರೆ ಅವರು ಹಿಂತೆಗೆದುಕೊಳ್ಳಲಿಲ್ಲ ಎಂದು ಮುಷರಫ್ ಹೇಳಿದ್ದಾರೆ.
2007 ನವೆಂಬರ್ 3ರಿಂದ ಪಾಕಿಸ್ತಾನದಲ್ಲಿ ಸಂವಿಧಾನವನ್ನು ಅಮಾನತ್ತಿನಲ್ಲಿಟ್ಟು ಹೇರಲಾಗಿದ್ದ ಆಂತರಿಕ ತುರ್ತು ಪರಿಸ್ಥಿತಿ ಡಿಸೆಂಬರ್ 15 ರವರೆಗೂ ಮುಂದುವರೆದಿತ್ತು. ಇದೇ ಪ್ರಕರಣ ಸಂಬಂಧ ಮುಷರಫ್ ವಿರುದ್ಧ ದೇಶದ್ರೋಹ ದೂರು ಕೂಡ ದಾಖಲಾಗಿದ್ದು, ಪಾಕಿಸ್ತಾನ ಸುಪ್ರೀಂ ಕೋರ್ಟ್ ಮುಷರಫ್ ಗೆ ಛೀಮಾರಿ ಕೂಡ ಹಾಕಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


