ಸಂವಿಧಾನ ತಿದ್ದುಪಡಿಗೆ ನೇಪಾಳ ಸರ್ಕಾರ ಒಪ್ಪಿಗೆ
ಪ್ರತಿಭಟನಾನಿರತ ಮಾಧೇಸಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಹಾಗೂ ಕ್ಷೇತ್ರ ಪುನರ್‍ವಿಂಗಡಣೆ ಬೇಡಿಕೆಗಳಿಗೆ ಪೂರಕವಾಗಿ ನೂತನ...

ಕಠ್ಮಂಡು: ಪ್ರತಿಭಟನಾನಿರತ ಮಾಧೇಸಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಹಾಗೂ ಕ್ಷೇತ್ರ ಪುನರ್‍ವಿಂಗಡಣೆ ಬೇಡಿಕೆಗಳಿಗೆ ಪೂರಕವಾಗಿ ನೂತನ ಸಂವಿಧಾನಕ್ಕೆ ತಿದ್ದುಪಡಿ ತರಲು ನಿರ್ಧರಿಸಿರುವ ನೇಪಾಳ ಸರ್ಕಾರದ ಮಹತ್ವದ ನಡೆಯನ್ನು ಭಾರತ ಸರ್ಕಾರ ಸ್ವಾಗತಿಸಿದೆ.
ನೇಪಾಳ ಸಚಿವ ಸಂಪುಟ ಸೋಮವಾರ ಈ ಮಹತ್ವದ ನಿರ್ಧಾರ ಕೈಗೊಂಡಿರುವುದಾಗಿ ನೇಪಾಳ ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವರು ಖುದ್ದು ಭಾರತ ವಿದೇಶಾಂಗ ಸಚಿವಾಲಯಕ್ಕೆ ತಿಳಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸದ್ಯದ ಬಿಕ್ಕಟ್ಟು ನಿವಾರಣೆ ನಿಟ್ಟಿನಲ್ಲಿ ಇದೊಂದು ನೇಪಾಳ ಸರ್ಕಾರದ ಮಹತ್ವದ ಹೆಜ್ಜೆಯಾಗಿದ್ದು, ಭಾರತ ಈ ನಡೆಯನ್ನು ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.
ಹೊಸ ಸಂವಿಧಾನದ ಪ್ರಕಾರ ಏಳು ಪ್ರಾಂತ್ಯ ರಚನೆಗೆ ಮುಂದಾಗಿರು ಸರ್ಕಾರದ ನಡೆಯಿಂದ ತಮ್ಮ ಪಾರಂಪರಿಕ ನೆಲವನ್ನು ಇಬ್ಭಾಗವಾಗಲಿದೆ. ಅಲ್ಲದೆ ಅದು ತಮ್ಮನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಯತ್ನ ಎಂದು ಮಾಧೇಸಿ ಮೂಲದ ಪಕ್ಷಗಳು ಕಳೆದ ನಾಲ್ಕು ತಿಂಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


