11 ವರ್ಷಗಳಲ್ಲೇ ಕಚ್ಚಾ ತೈಲ ಬೆಲೆ ದಾಖಲೆ ಕುಸಿತ
ಜಾಗತಿಕ ತೈಲ ಮಾರುಕಟ್ಟೆಗೆ ಹರಿದುಬರುತ್ತಿರುವ ಸರಬರಾಜು ಪ್ರಮಾಣದ ನಿರಂತರ ಏರಿಕೆಯ ಪರಿಣಾಮ ಸೋಮವಾರ ಕಚ್ಛಾ ತೈಲ ಬೆಲೆ 11 ವರ್ಷಗಳಲ್ಲೇ ಕನಿಷ್ಠ...

ಸಿಂಗಪೂರ್: ಜಾಗತಿಕ ತೈಲ ಮಾರುಕಟ್ಟೆಗೆ ಹರಿದುಬರುತ್ತಿರುವ ಸರಬರಾಜು ಪ್ರಮಾಣದ ನಿರಂತರ ಏರಿಕೆಯ ಪರಿಣಾಮ ಸೋಮವಾರ ಕಚ್ಛಾ ತೈಲ ಬೆಲೆ 11 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇರಾನ್, ಅಮರಿಕ ಹಾಗೂ ಲಿಬಿಯಾಗಳಿಂದ ಭಾರೀ ಪ್ರಮಾಣದ ಕಚ್ಛಾ ತೈಲ ಮಾರುಕಟ್ಟೆ ಪ್ರವೇಶಕ್ಕೆ ಸಿದ್ಧವಾಗಿದ್ದು, ಅದಕ್ಕೂ ಮುನ್ನವೇ ತೈಲ ಬೆಲೆ ಜಾಗತಿಕ ಮಾರುಕಟ್ಟೆ ಯಲ್ಲಿ ಭಾರೀ ಕುಸಿತ ದಾಖಲಿಸಿದೆ. ಬ್ರೆಂಟ್ ತೈಲ ಬೆಲೆ ಶೇ.2ರಷ್ಟು ಕುಸಿತ ಕಂಡಿದ್ದು, ಬ್ಯಾರಲ್‍ಗೆ 36.05 ಡಾಲರ್‍ಗೆ ಕುಸಿದಿದೆ. ಇದು 2004ರ ಜುಲೈನಿಂದ ಈವರೆಗಿನ ಅತ್ಯಂತ ಕನಿಷ್ಠ ದರ. ಅಮೆರಿಕ ವೆಸ್ಟ್ ಟೆಕ್ಸಾಸ್ ಇಂಟರ್‍ಮೀಡಿಯೇಟ್ ದರದಲ್ಲೂ ಕುಸಿತ ಉಂಟಾಗಿದ್ದು, ಬ್ಯಾರೆಲ್ ಗೆ 34.40 ಡಾಲರ್ ದಾಖಲಾಗಿದೆ.
ಕಳೆದ ಒಂದು ವರ್ಷದಿಂದ ನಿರಂತರವಾಗಿ ಕುಸಿತಿರುವ ಕಚ್ಛಾ ತೈಲ ಬೆಲೆ ಗ್ರಾಹಕರಿಗೆ ಶುಕ್ರದೆಸೆ ತಂದಿದ್ದರೂ, ತೈಲ ಕಂಪನಿಗಳು ಹಾಗೂ ಮಾರಾಟಗಾರರಿಗೆ ಬಿಕ್ಕಟ್ಟು ತಂದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ನೈಜೀರಿಯಾ, ವೆನಿಜುವೆಲಾದಂತಹ ತೈಲ ಅವಲಂಬಿತ ದೇಶಗಳು ತೈಲ ಕುಸಿತದ ಹೊಡೆತಕ್ಕೆ ಸಿಕ್ಕು ಅಲ್ಲಿನ ಆರ್ಥಿಕತೆಯೇ ಕುಸಿದುಬಿದ್ದಿದೆ. ಇನ್ನು ಮುಂಚೂಣಿ ತೈಲ ಉತ್ಪಾದಕ ರಾಷ್ಟಗಳ ಒಕ್ಕೂಟದ ಸೌದಿ ಅರೇಬಿಯಾ, ಕುವೈತ್ ಮತ್ತು ಬಹರೇನ್‍ಗಳಲ್ಲೂ ಆರ್ಥಿಕ ಸಂಕಷ್ಟ ಎದುರಾಗಿದ್ದು, ಕಳೆದ ವಾರವಷ್ಟೇ ಬಡ್ಡಿದರ ಏರಿಕೆ ಮೂಲಕ ದೇಶದ ಆರ್ಥಿಕತೆಗೆ ಚೈತನ್ಯ ತುಂಬು ಸರ್ಕಸ್ ಮಾಡಿವೆ. ಇರಾಕ್ ಸೋಮವಾರ, ತನ್ನ ದಿನಾರ್ ಅಪಮೌಲ್ಯಗೊಳಿಸುವ ಮೂಲಕ ತೈಲ ಬೆಲೆ ಕುಸಿತದ ಹೊಡೆತದ ಪರಿಣಾಮ ತಗ್ಗಿಸುವ ಯತ್ನ ಮಾಡಿದೆ ಇನ್ನು ಅಜರ್ ಬೈಜಾನ್ ನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.
ತೈಲ ಉತ್ಪಾದನೆ ಸಾಮಥ್ರ್ಯ ಹೆಚ್ಚಳ ಹಾಗೂ ರಫ್ತು ವಿಸ್ತರಣೆಯ ಹಿನ್ನೆಲೆಯಲ್ಲಿ ಮುಂದಿನ ವರ್ಷ ಅಮೆರಿಕ, ಲಿಬಿಯಾ, ಇರಾನ್ ಹಾಗೂ ರಷ್ಯಾ ದೇಶಗಳ ಭಾರೀ ಪ್ರಮಾಣದ ತೈಲ ವಿಶ್ವ ಮಾರುಕಟ್ಟೆ ಪ್ರವೇಶಿಸಲಿದ್ದು, ಭವಿಷ್ಯದಲ್ಲಿ ತೈಲ ಬೆಲೆ ಇನ್ನಷ್ಟು ಕುಸಿತ ಕಾಣಲಿದೆ ಎಂಬುದು ಮಾರುಕಟ್ಟೆ ತಜ್ಞರ ಅಂದಾಜು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


