ಒಂದು ಕುಟುಂಬ, ಎರಡು ಮಕ್ಕಳು
ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಇದೀಗ ತನ್ನ ಕಠಿಣ, ವಿವಾದಿತ ನಿಯಮವನ್ನು ಸುಧಾರಿಸುವತ್ತ ಮೊದಲ ಹೆಜ್ಜೆ ಇಟ್ಟಿದೆ. 'ಒಂದು ದಂಪತಿ, ಎರಡು...

ಬೀಜಿಂಗ್: ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಇದೀಗ ತನ್ನ ಕಠಿಣ, ವಿವಾದಿತ ನಿಯಮವನ್ನು ಸುಧಾರಿಸುವತ್ತ ಮೊದಲ ಹೆಜ್ಜೆ ಇಟ್ಟಿದೆ. 'ಒಂದು ದಂಪತಿ, ಎರಡು ಮಗು' ನೀತಿ ಜಾರಿಗೆ ತರಲು ನಿರ್ಧರಿಸಿದ್ದು, ಈ ಕುರಿತಂತೆ ಸದ್ಯದಲ್ಲೇ ಹೊಸ ಕರಡು ನೀತಿ ಪ್ರಕಟಿಸಲಿದೆ. 2.12 ನೂರು ಕೋಟಿ ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಹೆಚ್ಚಿನ ಸಂಖ್ಯೆಯ ಮಂದಿ ವೃದ್ಧಾಪ್ಯದತ್ತ ಜಾರುತ್ತಿದ್ದಾರೆ. ಇದಕ್ಕೆ ಕಾರಣ, ಚೀನಾದ ಕಠಿಣ ಜನಸಂಖ್ಯಾ ನೀತಿ. ಇದುವರೆಗೆ ಒಂದು ಮಗು ಪಡೆಯಲು ಮಾತ್ರ ಅವಕಾಶವಿತ್ತು. ಇದನ್ನು ಮನಗಂಡಿರುವ ಚೀನಾ ಸರ್ಕಾರ, ಇನ್ನೊಂದು ಮಗು ಪಡೆಯಲು ಅವಕಾಶ ಮಾಡಿಕೊಡಲಿದ್ದು ಬರುವ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ. ಇನ್ನೊಂದು ಮೂಲಗಳ ಪ್ರಕಾರ, ಚೀನಾದ ಬಹುತೇಕ ಜನ ಈ ನೀತಿಯತ್ತ
ಅಷ್ಟೇನೂ ಆಸಕ್ತಿ ತೋರಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


