ಮದರ್ ಥೆರೇಸಾಗೆ ಸಂತ ಪದವಿ
ನಿರ್ಗತಿಕರ ದೇವತೆ ಎಂದೇ ಹೆಸರಾದ ಮದರ್ ಥೆರೇಸಾರ ಎರಡನೇ ಪವಾಡವನ್ನು ಫೋಪ್ ಫ್ರಾನ್ಸಿಸ್ ಅವರು ಮಾನ್ಯ...

Published On :
ಕೋಲ್ಕತಾ: ನಿರ್ಗತಿಕರ ದೇವತೆ ಎಂದೇ ಹೆಸರಾದ ಮದರ್ ಥೆರೇಸಾರ ಎರಡನೇ ಪವಾಡವನ್ನು ಫೋಪ್ ಫ್ರಾನ್ಸಿಸ್ ಅವರು ಮಾನ್ಯ ಮಾಡಿದ್ದು, ಮುಂದಿನ ಸೆಪ್ಟೆಂಬರ್‍ನಲ್ಲಿ ನೊಬೆಲ್ ಪುರಸ್ಕೃತ ಮಹಾ ಮಾನವತಾವಾದಿಗೆ ಸಂತ ಪದವಿ ಪ್ರದಾನ ಮಾಡಲಾಗುತ್ತದೆ.
ಮೆದುಳು ಕ್ಯಾನ್ಸರ್‍ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ಗುಣಪಡಿಸಿದ ಥೆರೇಸಾ ಪವಾಡವನ್ನು ಮಾನ್ಯ ಮಾಡಲಾಗಿದೆ.
ಆ ಹಿನ್ನೆಲೆಯಲ್ಲಿ ಅವರಿಗೆ ಮುಂದಿನ ಸೆ.4ರಂದು ರೋಮ್ ನಲ್ಲಿ ಸಂತ ಪದವಿ ನೀಡುವ ನಿರೀಕ್ಷೆ ಇದೆ ಎಂದು ರೋಮ್ ನ ಕ್ಯಾಥೊಲಿಕ್ ಪತ್ರಿಕೆ ಅವೆನೈರ್ ಹೇಳಿದೆ. ಇದನ್ನು ಖಚಿತಪಡಿಸಿರುವ ಕೋಲ್ಕತಾದ ಮಿಷನರೀಸ್ ಆಫ್ ಚಾರಿಟಿಯ ವಕ್ತಾರೆ ಸುನೀತಾ ಕುಮಾರ್, `ವ್ಯಾಟಿಕನ್‍ನಿಂದ ಈ ಬಗ್ಗೆ ಮಾಹಿತಿ ಬಂದಿದೆ. ವಿಷಯ ಕೇಳಿ ಖುಷಿಯಾಗಿದೆ' ಎಂದಿದ್ದಾರೆ.
ಪವಾಡಗಳೇನು?
- ಕೋಲ್ಕತಾದ ಮೋನಿಕಾ ಬೆಸ್ರಾ ಎಂಬ ಬುಡಕಟ್ಟು ಮಹಿಳೆಯೊಬ್ಬರ ಮಾರಣಾಂತಿಕ ಕಿಬ್ಬೊಟ್ಟೆ ಕ್ಯಾನ್ಸರ್ ಗಡ್ಡೆಯನ್ನು ಗುಣಪಡಿಸಿದ್ದು
- ಬ್ರೈನ್ ಟ್ಯೂಮರ್‍ನಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬ್ರಿಜಿಲ್ ಮೂಲದ ವ್ಯಕ್ತಿಯೊಬ್ಬರನ್ನು ಗುಣಮುಖರಾಗಿಸಿದ್ದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


