ವಿದೇಶ

ಸ್ವಿಸ್ ಖಾತೆ ಬಹಿರಂಗ: ಪಟ್ಟಿಯಲ್ಲಿ 4 ಭಾರತೀಯರ ಹೆಸರು

ಸ್ವಿಜರ್‍ಲೆಂಡ್ ಡ್ರಾ ಮಾಡದೆ ಇರುವ 60 ವರ್ಷಗಳಿಗಿಂತ ಹಳೆಯ 2,600 ಖಾತೆಗಳ ವಿವರಗಳನ್ನು ಬುಧವಾರ ಬಹಿರಂಗ...

ಸ್ವಿಸ್ ಖಾತೆ ಬಹಿರಂಗ: ಪಟ್ಟಿಯಲ್ಲಿ 4 ಭಾರತೀಯರ ಹೆಸರು
ಸಾಂದರ್ಭಿಕ ಚಿತ್ರ
Published On :
ಜ್ಯೂರಿಚ್: ಸ್ವಿಜರ್‍ಲೆಂಡ್ ಡ್ರಾ ಮಾಡದೆ ಇರುವ 60 ವರ್ಷಗಳಿಗಿಂತ ಹಳೆಯ 2,600 ಖಾತೆಗಳ ವಿವರಗಳನ್ನು ಬುಧವಾರ ಬಹಿರಂಗ ಪಡಿಸಿದೆ. ಇದರಲ್ಲಿ ಭಾರತೀಯರ ನಾಲ್ಕು ಖಾತೆಗಳಿವೆ. 
ಈ 2,600 ಖಾತೆಗಳಲ್ಲಿ ರು.300 ಕೋಟಿ ಠೇವಣಿಗಳಿವೆ. ಆದರೆ ನಿರ್ದಿಷ್ಟವಾಗಿ ಇಂತಹ ಖಾತೆಯಲ್ಲಿ ಇಷ್ಟು ಹಣವಿದೆ ಎಂಬ ವಿವರಗಳನ್ನು ತಿಳಿಸಿಲ್ಲ. ಪಿಯರಿ ವಾಚೆಕ್ ಎಂಬ ಹೆಸರಿನ ಖಾತೆಯ ವಿಳಾಸ ಬಾಂಬೆ ಎಂದಿದೆ. 
ಉಳಿದಂತೆ ಡೆಹ್ರಾಡನ್‍ನ ಬಹಾದೂರ್ ಚಂದ್ರ ಸಿಂಗ್, ಪ್ಯಾರಿಸ್‍ನಲ್ಲಿನ ವಿಳಾಸದಲ್ಲಿ ಡಾ.ಮೋಹನ್ ಲಾಲ್ ಎಂಬುವರು ಹಾಗೂ ಕಿಶೋರ್ ಲಾಲ್ ಎಂಬುವರು ಖಾತೆಗಳನ್ನು ಹೊಂದಿದ್ದಾರೆ. 
ಈ ಖಾತೆಗಳಲ್ಲಿರುವ ಹಣವನ್ನು ಪಡೆಯಲು ಬಯಸುವ ಮಕ್ಕಳು ಅಥವಾ ಸಂಬಂಧಿಕರು ಐದು ವರ್ಷಗಳೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪಡೆಯಬಹುದು ಎಂದು ಸ್ವಿಸ್ ಬ್ಯಾಂಕರ್ಸ್ ಒಕ್ಕೂಟ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.