ವಿದೇಶ

ಮಹತ್ವದ ಹವಾಮಾನ ಒಪ್ಪಂದ ಅಂಗೀಕಾರ

ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿರುವ ಇಂಗಾಲ ಹೊರಸೂಸುವಿಕೆ ಮಟ್ಟ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವದ 195 ರಾಷ್ಟ್ರಗಳು ಮಹತ್ವದ ಹೆಜ್ಜೆಯಿಟ್ಟಿವೆ...

ಮಹತ್ವದ ಹವಾಮಾನ ಒಪ್ಪಂದ ಅಂಗೀಕಾರ
ಫ್ರಾನ್ಸ್ ನಲ್ಲಿ ನಡೆದ ಹವಾಮಾನ ಒಪ್ಪಂದ (ಸಂಗ್ರಹ ಚಿತ್ರ)
Published On :

ಲೀ ಬರ್ಗೆಟ್: ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿರುವ ಇಂಗಾಲ ಹೊರಸೂಸುವಿಕೆ ಮಟ್ಟ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವದ 195 ರಾಷ್ಟ್ರಗಳು ಮಹತ್ವದ ಹೆಜ್ಜೆಯಿಟ್ಟಿವೆ.

ಪ್ಯಾರಿಸ್ ನ ವಿಶ್ವತಾಪ ಶೃಂಗದಲ್ಲಿ ಶನಿವಾರ ಹವಾಮಾನ ಒಪ್ಪಂದದ ಕರಡನ್ನು ಬಿಡುಗಡೆ ಮಾಡಲಾಗಿದ್ದು, ಈ ಒಪ್ಪಂದಕ್ಕೆ ಅಂಗೀಕಾರ ದೊರೆತಿದೆ. ಭೂಮಿಯ ತಾಪಮಾನ 2 ಡಿಗ್ರಿ  ಮೀರದಂತೆ ಕಾಯ್ದುಕೊಳ್ಳುವುದು. 1.5 ಡಿಗ್ರಿಗೆ ಮಿತಿಗೊಳಿಸಲು ಶ್ರಮಿಸುವುದು, ಬಡ, ಅಭಿವೃದ್ಧಿಶೀಲ ದೇಶಗಳ ನೆರವಿಗೆಂದು ಸ್ಥಾಪಿಸಲಾಗಿರುವ ಹಸಿರು ನಿಧಿಗೆ ವಾರ್ಷಿಕ 100 ಶತಕೋಟಿ  ಡಾಲರ್ ನೀಡಲು ಶ್ರೀಮಂತ ದೇಶಗಳ ಒಪ್ಪಿಗೆ ಸೇರಿದಂತೆ ಅನೇಕ ಅಂಶಗಳು ಕರಡಿನಲ್ಲಿದೆ. ಇಡೀ ಪ್ಯಾರೀಸ್ ಒಪ್ಪಂದ ಜಾಗತಿಕ ಕಾನೂನು ಚೌಕಟ್ಟಿಗೆ ಒಳಪಟ್ಟಿರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.