ಕ್ಯಾಲಿಫೋರ್ನಿಯಾ ದಾಳಿಗೆ ಇಸಿಸ್-ಖೈದಾ ನಂಟು
ಡಿಸೆಂಬರ್ 2ರಂದು ಕ್ಯಾಲಿಫೋರ್ನಿಯಾದಲ್ಲಿ ನಡೆದ ಗುಂಡಿನ ದಾಳಿಯ ಹಿಂದೆ ಐಎಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ)...

Published On :
ವಾಷಿಂಗ್ಟನ್: ಡಿಸೆಂಬರ್ 2ರಂದು ಕ್ಯಾಲಿಫೋರ್ನಿಯಾದಲ್ಲಿ ನಡೆದ ಗುಂಡಿನ ದಾಳಿಯ ಹಿಂದೆ ಇಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ) ಹಾಗೂ ಅಲ್ ಕೈದಾ ನಂಟಿದೆ ಎಂದು ಅಮೆರಿಕದ ಉಗ್ರ ವಿಷಯ ತಜ್ಞರು ಶಂಕಿಸಿದ್ದಾರೆ.
ಭಯೋತ್ಪಾದನಾ ಸಂಘಟನೆಗಳ ಕುರಿತ ತಜ್ಞರಾಗಿರುವ ಇನ್‍ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ವಾರ್ ಸಂಸ್ಥೆ ಈ ಕುರಿತ ವಿವರಗಳನ್ನು ನೀಡಿದ್ದು, ಕ್ಯಾಲಿಫೋರ್ನಿಯಾ ದಾಳಿಯಲ್ಲಿ ದಾಳಿಕೋರರು ಬಂದೂಕುಗಳು ಹಾಗೂ ಸ್ಫೋಟಕಗಳನ್ನು ಬಳಸಿದ್ದಾರೆ.
2008ರಲ್ಲಿ ಮುಂಬೈನಲ್ಲಿ ನಡೆದ ದಾಳಿ, 2013ರಲ್ಲಿ ಕೀನ್ಯದ ವೆಸ್ಟ್‍ಗೇಟ್ ಮಾಲ್ ದಾಳಿ, ಈ ವರ್ಷದ ಜನವರಿಯಲ್ಲಿ ಪ್ಯಾರಿಸ್‍ನ ಚಾರ್ಲಿ ಹೆಬ್ದೊ ಪತ್ರಿಕಾ ಕಚೇರಿ ಮೇಲೆ ನಡೆದ ದಾಳಿ ಹಾಗೂ ಕಳೆದ ತಿಂಗಳು ಪ್ಯಾರಿಸ್‍ನ ವಿವಿಧೆಡೆ ನಡೆದ ದಾಳಿಗಳನ್ನು ಹೋಲಿಸಿದಾಗ, ಕ್ಯಾಲಿಫೋರ್ನಿಯಾ ದಾಳಿಯಲ್ಲಿ ಸಾಮ್ಯತೆ ಕಾಣಬಹುದು ಎಂದಿದೆ.
ಗುಂಪಾಗಿ ದಾಳಿ ನಡೆಸುವುದಕ್ಕಿಂತ ಸೀಮಿತ ಸಂಖ್ಯೆಯ ಜನರು ಸಾಮೂಹಿಕ ಹತ್ಯೆಗಳನ್ನು ನಡೆಸುವ ವಿಧಾನವನ್ನು ಇಸಿಸ್ ಹಾಗೂ ಅಲ್ ಕೈದಾ ಅನುಸರಿಸುತ್ತಿದ್ದು, ಕ್ಯಾಲಿಫೋರ್ನಿಯಾ ಸಹಿತ ಹಿಂದೆ ವಿವಿಧೆಡೆ ನಡೆದ ದಾಳಿಗಳಲ್ಲಿ ಈ ತಂತ್ರ ಬಳಕೆಯಾಗಿದೆ. ಇಂಥ ದಾಳಿಗಳು ಅಮೆರಿಕಕ್ಕೆ ದೊಡ್ಡ ಕಂಟಕವಾಗಲಿವೆ ಎಂದು ತಜ್ಞರ ಸಂಸ್ಥೆ ಎಚ್ಚರಿಸಿದೆ.
ಕ್ಯಾಲಿಫೋರ್ನಿಯಾ ದಾಳಿಯನ್ನು ಭಯೋತ್ಪಾದನಾ ಕೃತ್ಯ ಎಂದು ಪರಿಗಣಿಸುವುದಾಗಿ ಎಫ್ ಬಿಐ ನಿರ್ದೇಶಕ ಜೇಮ್ಸ್ ಕೊಮೆ ಶುಕ್ರವಾರ ಹೇಳಿದ ಬೆನ್ನ ಹಿಂದೆಯೇ ಉಗ್ರ ವಿಷಯ ತಜ್ಞ ಸಂಸ್ಥೆಯ ಈ ಹೇಳಿಕೆ ಬಂದಿದೆ. ಕ್ಯಾಲಿಫೋರ್ನಿಯಾ ದಾಳಿ ನಡೆಸಿದ ಉಗ್ರ ದಂಪತಿಗಳನ್ನು ಚಿಕ್ಯಾಗೊ ಮೂಲದ ಸೈಯದ್ ರಿಜ್ವಾನ್ ಫಾರೂಕ್ ಹಾಗೂ ಪಾಕಿಸ್ತಾನ ಮೂಲದ ತಷ್ಫೀನ್ ಮಲಿಕ್ ದಂಪತಿ ಎಂದು ಎಫ್ ಬಿಐ ಹೆಸರಿಸಿದೆ.
ಖೈದಾ ಮತ್ತು ಇಸಿಸ್‍ಗಳೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಗಳು ಮತ್ತು ಉಗ್ರ ಸಂಸ್ಥೆಗಳಿಂದ ಅಥವಾ ನೇರವಾಗಿ ಈ ಸಂಘಟನೆಗಳಿಗೇ ಸೇರಿದವರು ಈ ಕೃತ್ಯ ಎಸಗಿರುವ ಲಕ್ಷಣಗಳು ದಟ್ಟವಾಗಿವೆ. ಮೃತರ ಅಪಾರ್ಟ್‍ಮೆಂಟ್‍ನಿಂದ ದೊಡ್ಡ ಪ್ರಮಾಣದ ಮದ್ದುಗುಂಡುಗಳನ್ನು ಹಾಗೂ ಸಾಯುವ ಮುನ್ನ ದಂಪತಿ ನಾಶಪಡಿಸಲು ಯತ್ನಿಸಿದ ಎಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಎಫ್ ಬಿಐ ವಶಪಡಿಸಿಕೊಂಡಿದೆ.
ಮೃತ ಯುವತಿ ತಷ್ಫೀನ್‍ಳ ಫೇಸ್‍ಬುಕ್ ಪುಟದಲ್ಲಿ ಇಸಿಸ್ ನಾಯಕ ಅಲ್ ಬಾಗ್ದಾದಿಗೆ ನಿಷ್ಠೆ ಪ್ರಕಟಿಸಿದ್ದನ್ನು ಎಫ್ ಬಿಐ ಬಹಿರಂಗಪಡಿಸಿದೆ. ಇವರಿಬ್ಬರೂ ಗುಂಡಿನ ದಾಳಿ ನಡೆಸುತ್ತಿದ್ದುದನ್ನು ಸಂಭ್ರಮದಿಂದ ಆಚರಿಸಿದ್ದ ಇಸಿಸ್ ಬೆಂಬಲಿಗರು, ಅವರನ್ನು ಕಲೀಫಶಾಹಿಯ ಸಿಂಹಗಳು ಎಂದು ಬಣ್ಣಿಸಿದ್ದರು.
ಅಷ್ಟೇ ಅಲ್ಲ, ಪಾಶ್ಚಾತ್ಯ ದೇಶಗಳ ವಿರುದ್ಧ ಇಂಥ ದಾಳಿಗಳು ಹೆಚ್ಚೆಚ್ಚು ನಡೆಯಬೇಕು ಎಂದು ಅಲ್‍ಖೈದಾ ನಾಯಕ ಅಯ್ಮನ್ ಅಲ್ ಜವಾಹಿರಿ ಅಭಿಪ್ರಾಯಪಟ್ಟಿದ್ದನ್ನು ಅಮೆರಿಕದ ಉಗ್ರ ತಜ್ಞ ಸಂಘಟನೆ ಉದಾಹರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


