ಕ್ಯಾಲಿಫೋರ್ನಿಯಾ ಶೂಟೌಟ್ ರೂವಾರಿಗಳು ಪಾಕಿಸ್ತಾನ ಮೂಲದ ದಂಪತಿ!
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದ ಶೂಟೌಟ್‌ನ ರೂವಾರಿಗಳು ಪಾಕಿಸ್ತಾನ ಮೂಲದ ದಂಪತಿಗಳು ಎಂದು ಫೆಡರಲ್ ಬ್ಯೂರೋ ಆಫ್...

Published On :
ಸ್ಯಾನ್ ಬೆರ್ನಾಡ್ರಿನೋ: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದ ಶೂಟೌಟ್‌ನ ರೂವಾರಿಗಳು ಪಾಕಿಸ್ತಾನ ಮೂಲದ ದಂಪತಿಗಳು ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ( ಎಫ್‌ಬಿಐ) ಪತ್ತೆ ಹಚ್ಚಿದೆ.
ಬುಧವಾರ ಸ್ಯಾನ್ ಬೆರ್ನಾಡ್ರಿನೋದ ಇನ್‌ಲ್ಯಾಂಡ್ ರೀಜಿನಲ್ ಸೆಂಟರ್ ನಲ್ಲಿ ನಡೆದ ಈ ಶೂಟೌಟ್ ನಲ್ಲಿ 14 ಮಂದಿ ಹತ್ಯೆಗೀಡಾಗಿದ್ದರು. ಪಾಕಿಸ್ತಾನ ಮೂಲದ ಸಯೀದ್ ರಿಜ್ವಾನ್ ಫರೂಕ್ ಮತ್ತು ಆತನ ಪತ್ನಿ ತಶ್ಫೀನ್ ಮಲಿಕ್ ಈ ಹತ್ಯಾಕಾಂಡದ ರೂವಾರಿಗಳಾಗಿದ್ದು, ಶೂಟೌಟ್‌ನಲ್ಲಿ ಪೊಲೀಸರು ಇವರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು.
ಶೂಟೌಟ್ ಬಗ್ಗೆ ತನಿಖೆ ನಡೆಸಿದ ಎಫ್‌ಬಿಐ ರಿಜ್ವಾನ್ ಮನೆಯಿಂದ 12 ಪೈಪ್ ಬಾಂಬ್ ಮತ್ತು ಇನ್ನಿತರ ಮಾರಕಾಯುಧಗಳನ್ನು ಪತ್ತೆ ಹಚ್ಚಿದೆ.
ಸ್ಯಾನ್ ಬೆರ್ನಾಡ್ರಿನೋದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪೊಲೀಸ್ ಮುಖ್ಯಸ್ಥ ಜೆರೋಡ್ ಬರ್ಗಾನ್, ರೆಡ್ ಲ್ಯಾಂಡ್ ಪಕ್ಕವಿರುವ ಮನೆಯಿಂದ ಫರೂಕ್ ಮತ್ತು ಮಲಿಕ್ ಅವರು ಬಳಸುತ್ತಿದ್ದ ಫ್ಲಾಶ್ ಡ್ರೈವ್, ಕಂಪ್ಯೂಟರ್ ಮತ್ತು ಸೆಲ್‌ಫೋನ್‌ಗಳನ್ನು ಪತ್ತೆ ಹಚ್ಚಲಾಗಿದೆ ಎಂದಿದ್ದಾರೆ.
ಈ ಶೂಟೌಟ್‌ನಲ್ಲಿ ಗಾಯಗೊಂಡವರ ಸಂಖ್ಯೆ 21ಕ್ಕೇರಿದೆ ಎಂದ ಪೊಲೀಸರು ಈ ಶೂಟೌಟ್ ಗೆ ಕಾರಣ ಏನು ಎಂಬುದು ಇಲ್ಲಿವರೆಗೆ ತಿಳಿದು ಬಂದಿಲ್ಲ ಎಂದಿದ್ದಾರೆ.
ಮೂಲತಃ ಅಮೆರಿಕದ ಸಯೀದ್ ರಿಜ್ವಾನ್ ಫರೂಕ್ (28) ಆರೋಗ್ಯ ಸೇವಾ ಸಿಬ್ಬಂದಿಯಾಗಿದ್ದು, ಪಾಕಿಸ್ತಾನ ಮೂಲದ ತಶ್ಫೀನ್ ಮಲೀಕ್ (27) ಎಂಬಾಕೆಯನ್ನು ಮದುವೆಯಾಗಿದ್ದನು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


