ಅಮೆರಿಕಾದಲ್ಲಿ ಮತ್ತೆ ಶೂಟೌಟ್; ಇಬ್ಬರು ಶಂಕಿತರು ಸೇರಿದಂತೆ ೧೬ ಜನರ ಹತ್ಯೆ
ಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೋ ನಗರದಲ್ಲಿ, ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬಂದೂಕುಧಾರಿಗಳು ಬುಧವಾರ ಬೆಳಗ್ಗೆ

ವಾಶಿಂಗ್ಟನ್: ಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೋ ನಗರದಲ್ಲಿ, ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬಂದೂಕುಧಾರಿಗಳು ಬುಧವಾರ ಬೆಳಗ್ಗೆ ಸಾಮಾಜಿಕ ಕಾರ್ಯಗಳ ಕೇಂದ್ರದ ಮೇಲೆ ದಾಳಿ ಮಾಡಿದ್ದರಿಂದ ೧೪ ಜನ ಮೃತಪಟ್ಟಿದ್ದಾರೆ. ನಂತರ ಪೊಲೀಸರು ಇಬ್ಬರು ಶಂಕಿತ ಬಂಧೂಕುಧಾರಿಗಳನ್ನು ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ.
ಈ ಶೂಟೌಟ್ ನಡೆಸಿದ ನಂತರ ದಾಳಿಕೋರರು ಕಪ್ಪು ಎಸ್ ಯು ವಿ ಯಲ್ಲಿ ತಪ್ಪಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೇಂದ್ರದಲ್ಲಿ ಸಂಶಯಾಸ್ಪದ ವಸ್ತುಗಳು ಇರುವ ಸನ್ನಿವೇಶ ಒದಗಿ ಬಂದಿದ್ದು ಬಾಂಬ್ ನಿಷ್ಕ್ರಿಯದಳ ಶೋಧನೆ ನಡೆಸುತ್ತಿದೆ ಎಂದು ಸ್ಯಾನ್ ಬರ್ನಾರ್ಡಿನೋ ಪೊಲೀಸ್ ನಿರ್ದೇಶಕ ಜ್ಯಾರ್ರಡ್ ಬರ್ಗುನ್ ತಿಳಿಸಿದ್ದಾರೆ.
ಸ್ಯಾನ್ ಬರ್ನಾರ್ಡಿನೋ ಕೇಂದ್ರದಲ್ಲಿ ಕ್ರಿಸ್ಮಸ್ ಔತಣಕೂಟ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


