ಹೌದು, ಉಮರ್ 2013ರಲ್ಲೇ ಸತ್ತಿದ್ದ
ಮುಲ್ಲಾ ಒಮರ್‍ನ ಸಾವಿನ ಸತ್ಯವನ್ನು ಎರಡು ವರ್ಷಗಳ ಕಾಲ ಹೊರ ಜಗತ್ತಿಂದ ಮುಚ್ಚಿಟ್ಟಿದ್ದನ್ನು ತಾಲಿಬಾನ್ ಇದೇ ಮೊದಲ ಬಾರಿಗೆ...

ಕಾಬೂಲ್: ಮುಲ್ಲಾ ಒಮರ್‍ನ ಸಾವಿನ ಸತ್ಯವನ್ನು ಎರಡು ವರ್ಷಗಳ ಕಾಲ ಹೊರ ಜಗತ್ತಿಂದ ಮುಚ್ಚಿಟ್ಟಿದ್ದನ್ನು ತಾಲಿಬಾನ್ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದೆ.
ಒಸಮಾ ಬಿನ್ ಲಾಡೆನ್ ಸಾವಿನ ನಂತರ ತಾಲಿಬಾನ್‍ನ ನೇತೃತ್ವವಹಿಸಿದ್ದ ಮುಲ್ಲಾ ಒಮರ್ 2013ರಲ್ಲೇ ಮೃತಪಟ್ಟಿದ್ದ ಎಂದು ಅಫ್ಘಾನಿಸ್ತಾನದ ಗುಪ್ತಚರದಳ ಇತ್ತೀಚೆಗೆ ಹೇಳಿತ್ತು. ಆದರೂ ತಾಲಿಬಾನ್ ಮಾತ್ರ ಮುಲ್ಲಾ ಒಮರ್ ಹೆಸರಲ್ಲಿ ಇತ್ತೀಚಿನ ವರೆಗೂ ಹೇಳಿಕೆಗಳನ್ನು ಹೊರಡಿಸುತ್ತಲೇ ಇತ್ತು.
ಇದರಿಂದ ಮುಲ್ಲಾ ಒಮರ್ ಇನ್ನೂ ಬದುಕಿದ್ದಾನಾ ಎನ್ನುವ ಅನುಮಾನ ಗುಪ್ತಚರದಳಗಳಿಗಿತ್ತು. ಆದರೆ, ಇದೇ ಮೊದಲ ಬಾರಿಗೆ ತಾಲಿಬಾನ್ ಮುಲ್ಲಾ ಒಮರ್ ಏ.23, 2013ರಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಿದೆ. ಮುಲ್ಲಾ ಸಾವಿನ ಸತ್ಯ ಸಂಘಟನೆಯ ಪ್ರಮುಖ ವ್ಯಕ್ತಿಗಳಿಗಷ್ಟೇ ಗೊತ್ತಿತ್ತು. ಯಾಕೆಂದರೆ ಆಫ್ಘನ್ ನಲ್ಲಿ ಕಾದಾಟ ನಡೆಸುತ್ತಿದ್ದ ಮುಜಾಹಿದೀನ್ ಹಾಗೂ ವಿದೇಶಿ ಯೋಧರ ಪಾಲಿಗೆ 2013 ಪ್ರಮುಖ ಕಾಲಘಟ್ಟವಾಗಿತ್ತು.
2014ರಲ್ಲಿ ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳು ಆಫ್ಘನ್ ನಿಂದ ಹೊರ ಹೋಗುವುದಾಗಿ ಹೇಳಿದ್ದವು. ಈ ಹಿನ್ನಲೆಯಲ್ಲಿ ಮುಲ್ಲಾ ಸಾವಿನ ಸುದ್ದಿಯನ್ನು ಉದ್ದೇಶಪೂರ್ವಕವಾಗಿ ಹೊರಜಗತ್ತಿಂದ ದೂರ ಇಡಲಾಯಿತು ಎಂದಿದೆ ತಾಲಿಬಾನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


