ಅಪಘಾತ: 38 ಯುವತಿಯರ ಸಾವು
ದಕ್ಷಿಣ ಆಫ್ರಿಕಾದ ಮೊಜಾಂಬಿಕ್ ಗಡಿಗೆ ಹೊಂದಿಕೊಂಡ ಸ್ವಾಜಿಲ್ಯಾಂಡ್‍ನ ಸಾಂಪ್ರದಾಯಿಕ ಉತ್ಸವಕ್ಕೆ ಹೊರಟಿದ್ದ ನಾಗರಿಕರು ತುಂಬಿದ್ದ ಟ್ರಕ್ ಅಪಘಾತಕ್ಕೀಡಾಗಿ 38 ಮಂದಿ ಯುವತಿ ಯರು ಹಾಗೂ ಒಬ್ಬ ವಿವಾಹಿತ ಮಹಿಳೆ ಸಾವನ್ನಪ್ಪಿದ್ದಾರೆ.

ಜೊಹಾನ್ಸ್‍ಬರ್ಗ್: ದಕ್ಷಿಣ ಆಫ್ರಿಕಾದ ಮೊಜಾಂಬಿಕ್ ಗಡಿಗೆ ಹೊಂದಿಕೊಂಡ ಸ್ವಾಜಿಲ್ಯಾಂಡ್‍ನ ಸಾಂಪ್ರದಾಯಿಕ ಉತ್ಸವಕ್ಕೆ ಹೊರಟಿದ್ದ ನಾಗರಿಕರು ತುಂಬಿದ್ದ ಟ್ರಕ್ ಅಪಘಾತಕ್ಕೀಡಾಗಿ 38 ಮಂದಿ ಯುವತಿ ಯರು ಹಾಗೂ ಒಬ್ಬ ವಿವಾಹಿತ ಮಹಿಳೆ ಸಾವನ್ನಪ್ಪಿದ್ದಾರೆ.
ಸುಮಾರು 50ಕ್ಕೂ ಹೆಚ್ಚು ಮಂದಿ ತೆರೆದ ಟ್ರಕ್‍ನ ಹಿಂಭಾಗದಲ್ಲಿ ಕೂತು ಪ್ರಯಾಣಿಸುತ್ತಿದ್ದು, ಅವರೆಲ್ಲರೂ ಅಲ್ಲಿನ ರಾಜಮನೆತನದಲ್ಲಿ ನಡೆವ ಉತ್ಸವದಲ್ಲಿ ಭಾಗಿಯಾಗಲು ಹೊರಟ್ಟಿದ್ದರು ಎಂದು ಅಲ್ಲಿನ ಬಲಪಂಥೀಯ ಸಂಘಟನೆ ಹೇಳಿದೆ. ಆದರೆ, ಪೊಲೀಸರು ಘಟನೆ ಬಗ್ಗೆ ವಿವರ ನೀಡಿಲ್ಲ. ಸ್ವಾಜಿಲ್ಯಾಂಡ್ನಲ್ಲಿ ನಡೆಯುವ ವಾರ್ಷಿಕ ಉತ್ಸವದಲ್ಲಿ ನೂರಾರು ಮಹಿಳೆಯರು ಅರೆಬೆತ್ತಲ ನೃತ್ಯ ಮಾಡುವುದು ರಾಜಮನೆತನದ ಸಾಂಪ್ರದಾಯಿಕ ಆಚರಣೆಯಾಗಿ ರೂಢಿಯಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


