ವಿದೇಶದಲ್ಲಿರುವ ಭಾರತೀಯರು ಸ್ವದೇಶಕ್ಕೆ ಮರಳಲು ಸುಷ್ಮಾ ಒತ್ತಾಯ
ಜರ್ಮನಿಯಲ್ಲಿರುವ ಭಾರತೀಯರು ತಾಯ್ನಾಡಿಗೆ ಮರಳುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್...

ಬರ್ಲಿನ್: ಜರ್ಮನಿಯಲ್ಲಿರುವ ಭಾರತೀಯರು ತಾಯ್ನಾಡಿಗೆ ಮರಳುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಒತ್ತಾಯಿಸಿದ್ದಾರೆ.
ಜರ್ಮನಿ ಪ್ರವಾಸದಲ್ಲಿರುವ ಅವರು ಇಂದು ಬರ್ಲಿನ್ ನಲ್ಲಿ ಭಾರತೀಯ ಮುದಾಯವನ್ನುದ್ದೇಶಿಸಿ ಮಾತನಾಡಿ, ''ನೀವು ಜೀವನೋಪಾಯಕ್ಕಾಗಿ ಭಾರತ ದೇಶವನ್ನು ತೊರೆದು ಇಲ್ಲಿಗೆ ಬಂದಿರಬಹುದು. ಆದರೆ ಭಾರತ ಈಗ ಬದಲಾಗುತ್ತಿದೆ. ಇವತ್ತು ಭಾರತ ದೇಶದಲ್ಲಿಯೇ ನಿಮಗೆ ಅನೇಕ ಅವಕಾಶಗಳಿವೆ, ನೀವು ಸ್ವದೇಶಕ್ಕೆ ಹಿಂತಿರುಗಲು ಸರಿಯಾದ ಸಮಯ'' ಎಂದು ಹೇಳಿದರು.
''ಇನ್ನು ಮುಂದೆಯೂ ಇಲ್ಲಿಯೇ ಇರಲು ಬಯಸುವವರಿಗೆ ನಾನು ಒಂದು ಮಾತನ್ನು ಹೇಳಲು ಇಚ್ಛಿಸುತ್ತೇನೆ. ನಿಮ್ಮ ಒಂದು ಕಾಲನ್ನು ಭಾರತ ದೇಶದಲ್ಲಿಡಿ. ತಂದೆ ಇಲ್ಲಿದ್ದರೆ, ಮಗ ಸ್ವದೇಶಕ್ಕೆ ಹೋಗಬೇಕು ಅಥವಾ ಮಗ ಇಲ್ಲಿದ್ದರೆ ತಂದೆ ತನ್ನ ದೇಶಕ್ಕೆ ಹೋಗಬೇಕು'' ಎಂದು ಸುಷ್ಮಾ ಸ್ವರಾಜ್ ಮಾರ್ಮಿಕವಾಗಿ ಹೇಳಿದರು.
ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯರ ಹಿತ ಕಾಪಾಡಲು ಭಾರತ ಸರ್ಕಾರ ಏನೇನು ಕ್ರಮ ತೆಗೆದುಕೊಳ್ಳುತ್ತಿದೆ ಎಂಬುದನ್ನು ಸಹ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಭಾರತದ ಮುಂದೆ ಮೂರು ಮುಖ್ಯ ಸವಾಲುಗಳಿವೆ. ಇರಾಕ್, ಲಿಬ್ಯಾ ಮತ್ತು ಯಮನ್ ದೇಶಗಳದ್ದು. ಯಮನ್ ನಲ್ಲಿ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಆಗ ಒಮ್ಮೆಗೇ ಬದಲಾವಣೆಯಾಯಿತು. ಆಗ ಸಹಾಯಕ್ಕೆ ಮುಂದಾದ ಭಾರತ ಯೆಮನ್ ನ 6 ಸಾವಿರದ 200 ಮಂದಿಯನ್ನು ಬಚಾವ್ ಮಾಡಿದರು. ಅವರಲ್ಲಿ 48 ಮಂದಿ ಭಾರತೀಯರೂ ಇದ್ದರು. ಭಾರತ ಹೇಗೆ ಬದಲಾಗುತ್ತಿದೆ ಎಂಬುದಕ್ಕೆ ನಾನೊಂದು ಸಣ್ಣ ಉದಾಹರಣೆ ಕೊಡುತ್ತಿದ್ದೇನೆ ಎಂದು ಸಚಿವೆ ಸುಷ್ಮಾ ಸ್ವರಾಜ್ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


