30 ವರ್ಷ ಹಿಂದೆ ಕಳೆದು ಹೋಗಿದ್ದ ಪರ್ಸ್ ಮತ್ತೆ ಕೈಸೇರಿತು!
ಐದು ನಿಮಿಷದ ಹಿಂದೆ ಬಸ್ಸಲ್ಲೋ, ಅಂಗಡಿಯಲ್ಲೋ ಬಿಟ್ಟು ಹೋದ ಕೊಡೆ ಕೂಡ ನಮಗೆ ಮರಳಿ ಸಿಗುವುದಿಲ್ಲ. ಅಂಥದ್ದರಲ್ಲಿ...

ಲಂಡನ್: ಐದು ನಿಮಿಷದ ಹಿಂದೆ ಬಸ್ಸಲ್ಲೋ, ಅಂಗಡಿಯಲ್ಲೋ ಬಿಟ್ಟು ಹೋದ ಕೊಡೆ ಕೂಡ ನಮಗೆ ಮರಳಿ ಸಿಗುವುದಿಲ್ಲ. ಅಂಥದ್ದರಲ್ಲಿ ಮೂವತ್ತು ವರ್ಷಗಳ ಹಿಂದೆ ಕಳೆದು ಹೋದ ವಸ್ತುವೊಂದು ಮರಳಿ ಕೈ ಸೇರುತ್ತದೆ ಎಂದರೆ ನಂಬಲು ಸಾಧ್ಯವಾ? ಆದರೆ, ಬ್ರಿಟನ್‍ನ ವಾರ್ ವಿಕ್‍ಶೈರ್‍ನ ರೈತನ ಕಥೆ ಕೇಳಿದರೆ ನೀವು ಈ ರೀತಿ ಆಗಲೂ ಸಾಧ್ಯ ಎಂದು ನಂಬಲೇ ಬೇಕು.
ಮೂವತ್ತು ವರ್ಷದ ರೈಲು ಪ್ರಯಾಣದ ವೇಳೆ ಕಳೆದುಕೊಂಡಿದ್ದ ಪರ್ಸ್‍ವೊಂದು ಈಗ ಮರಳಿ ಅವರ ಕೈಸೇರಿದೆ. ನಾರ್ಥ್‍ನಾರ್ ಫೋಲ್ಕ್ ರೈಲಿನ ಸೀಟಿನ ಮೂಲೆಯಲ್ಲಿ ಈ ಪರ್ಸ್ ಸಿಕ್ಕಿಹಾಕಿಕೊಂಡಿತ್ತಂತೆ. ಯಾವುದೋ ಕೆಲಸದ ವೇಳೆ ಈಗ ನಿವೃತ್ತರಾಗಿರುವ ರೈಲ್ವೆ ಚಾಲಕ ಮೈಕಲ್ ಮೆಸ್ಸೆ(70) ಅವರ ಗಮನಕ್ಕೆ ಬಂದಿದೆ. ಕುತೂಹಲಗೊಂಡ ಮೆಸ್ಸೆ ಅವರು ಈ ಪರ್ಸ್‍ನ ಮಾಲೀಕರನ್ನು ಪತ್ತೆಹಚ್ಚುವ ಕಾರ್ಯವನ್ನು ಡಿಟೆಕ್ಟಿವ್ ವೊಬ್ಬರಿಗೆ ವಹಿಸಿದ್ದರು.
ಮನಸ್ಸು ಮಾಡಿದ್ದರೆ ಮೆಸ್ಸೆ ಅವರು ಇದನ್ನು ಕಸದಬುಟ್ಟಿಗೆ ಎಸೆದುಬಿಡಬಹುದಿತ್ತು. ಯಾಕೆಂದರೆ ಈ ಪರ್ಸ್‍ನಲ್ಲಿದ್ದದ್ದು ಕೇವಲ ಒಂದು ಪೌಂಡ್ ನ ನೋಟು, ಕೆಲವು ಚಿಲ್ಲರೆ ಹಾಗೂ ಒಂದಷ್ಟು ದಾಖಲೆಪತ್ರಗಳು ಮಾತ್ರ. ಒಂದು ದಾಖಲೆಪತ್ರದಲ್ಲಿ ಡೆರೆಕ್ ಬಿ.ಗ್ಯಾಂಬಲ್ ಹೆಸರಿತ್ತು. ಅದು ಪರ್ಸ್‍ನ ಮಾಲಕ ಗ್ಯಾಂಬಲ್ ಅವರ ಹಳೆಯ(ವಾರ್‍ವಿಕ್‍ಶೈರ್) ವಿಳಾಸವಾಗಿತ್ತು.
ಈ ವಿಳಾಸವನ್ನು ಹುಡುಕಿಕೊಂಡು ಹೊರಟ ಡಿಟೆಕ್ಟಿವ್ ಗೆ ಗ್ಯಾಂಬಲ್ ಪುತ್ರ ನಾರ್ಥ್‍ಹ್ಯಾಂಪ್ಟನ್‍ನಲ್ಲಿರುವುದು ಗೊತ್ತಾಗಿದೆ. ಈ ಮೂಲಕ ಈ ಪರ್ಸ್ ಅನ್ನು ಗ್ಯಾಂಬಲ್ ಅವರಿಗೆ ತಲುಪಿಸಲಾಯಿತು. ಈ ಪರ್ಸ್ ಕಳೆದುಕೊಂಡಿದ್ದಾಗ ಗ್ಯಾಂಬಲ್ ಅವರಿಗೆ 30ರ ಹರೆಯ. ನಮಗೆ ಐದು ವರ್ಷದ ಹಿಂದೆ ನೀವು ಕೊಡೆ ಕಳೆದುಕೊಂಡಿದ್ದೀರಾ ಎಂದು ಕೇಳಿದರೇ ನೆನಪಿಗೆ ಬರುವುದಿಲ್ಲ.
ಅಂಥದ್ದರಲ್ಲಿ ಮೂವತ್ತು ವರ್ಷಗಳ ಹಿಂದೆ ಕಳೆದುಕೊಂಡಿದ್ದ ಪರ್ಸ್ ಏಕಾಏಕಿ ಮತ್ತೆ ನಿಮ್ಮ ಕೈ ಸೇರಿದಾಗ ಒಂದರೆಕ್ಷಣ ಗೊಂದಲ ಕಾಡಿಬಿಡುತ್ತದೆ. ಗ್ಯಾಂಬಲ್ ಅವರಿಗೂ ಈ ಪರ್ಸ್ ಕಳೆದುಕೊಂಡ ನೆನಪೇ ಆಗಲಿಲ್ಲವಂತೆ. ಆದರೆ, ಈ ಪರ್ಸ್‍ನಿಂದಾಗಿ ಮೂವತ್ತು ವರ್ಷದ ಹಿಂದೆ ಅವರು ಕುಟುಂಬದ ಜತೆಗೆ ಕಳೆದ ಕ್ಷಣಗಳ ನೆನಪು ಮತ್ತೆ ತಾಜಾ ಆದವು ಎನ್ನುತ್ತಾರೆ ಗ್ಯಾಂಬಲ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


