ವಿದೇಶ

ಹಿಪ್ನೋಟೈಸ್ ಮಾಡಿ ಪ್ರಾಣಿಗಳನ್ನು ನಿದ್ದೆ ಮಾಡಿಸ್ತಾಳೆ ಈ ಪುಟಾಣಿ!

ಚೀನಾದ ಪುಟಾಣಿಯೊಬ್ಬಳು ಸಂಮೋಹನ ವಿದ್ಯೆಯ ಮೂಲಕ (ಹಿಪ್ನೋಟೈಸ್) ಪ್ರಾಣಿಗಳನ್ನು ನಿದ್ದೆ ಮಾಡಿಸುತ್ತಿರುವ ವೀಡಿಯೋ...

ಹಿಪ್ನೋಟೈಸ್ ಮಾಡಿ ಪ್ರಾಣಿಗಳನ್ನು ನಿದ್ದೆ ಮಾಡಿಸ್ತಾಳೆ ಈ ಪುಟಾಣಿ!
ರಿಯಾಲಿಟಿ ಶೋನಲ್ಲಿ ಪ್ರದರ್ಶನ ನೀಡುತ್ತಿರುವ ಪುಟಾಣಿ
Published On :

ಚೀನಾದ ಪುಟಾಣಿಯೊಬ್ಬಳು ಸಂಮೋಹನ ವಿದ್ಯೆಯ ಮೂಲಕ (ಹಿಪ್ನೋಟೈಸ್) ಪ್ರಾಣಿಗಳನ್ನು ನಿದ್ದೆ ಮಾಡಿಸುತ್ತಿರುವ ವೀಡಿಯೋ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ಚೀನಾದ ಸಿಸಿಟಿವಿ ಪ್ರಾಯೋಜಕತ್ವದ ಟ್ಯಾಲೆಂಟ್ ರಿಯಾಲಿಟಿ ಶೋನಲ್ಲಿ ಸ್ಪರ್ಧಾರ್ಥಿಯಾದ ಪುಟ್ಟ ಹುಡುಗಿ ಪ್ರಾಣಿಗಳನ್ನು ಹಿಪ್ನೋಟೈಸ್ ಮಾಡಿ ನಿದ್ದೆ ಮಾಡಿಸುತ್ತಿರುವ ವೀಡಿಯೋವನ್ನು ಸಿಸಿಟಿವಿ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಿದೆ.

ನಾಯಿ, ಕಪ್ಪೆ, ಓತಿ, ಕೋಳಿ, ಮೊಲ ಮೊದಲಾದ ಜೀವಿಗಳ ಜತೆ ಮಾತಾಡಿ, ಅವುಗಳ ಮೈಯನ್ನು ನೇವರಿಸುತ್ತಾ ನಿದ್ದೆ ಮಾಡಿಸ್ತಾಳೆ ಈ ಹುಡುಗಿ. ಹೀಗೆ ಒಂದೊಂದೇ ಪ್ರಾಣಿಗಳನ್ನು ನಿದ್ದೆ ಮಾಡುಸುತ್ತಾ ಬರುವಾಗ ಆಗಲೇ ನಿದ್ದೆಗೆ ಜಾರಿದ್ದ ನಾಯಿ ಮತ್ತು ಕಪ್ಪೆಗೆ ಎಚ್ಚರವಾಗುತ್ತದೆ. ಕೂಡಲೇ ಓಡುತ್ತಾ ಬಂದು ಮತ್ತೆ ಅವುಗಳನ್ನು ನಿದ್ದೆಗೆ ಜಾರುವಂತೆ ಮಾಡುತ್ತಾಳೆ. ಎಲ್ಲ ಪ್ರಾಣಿಗಳನ್ನು ನಿದ್ದೆ ಮಾಡಿಸಿದ ಮೇಲೆ ಎಲ್ಲರೂ ಎದ್ದೇಳಿ ಎಂದು ಹೇಳಿದ್ದೇ ತಡ, ಎಲ್ಲ ಪ್ರಾಣಿಗಳು ಮೈ ಕೊಡವಿ ಎದ್ದು ನಿಲ್ಲುತ್ತವೆ.

ಸ್ಪರ್ಧೆಯಲ್ಲಿ ಪುಟಾಣಿಯ ಕೌಶಲ್ಯವನ್ನು ನೋಡಿ ತೀರ್ಪುಗಾರರು ಮತ್ತು ಪ್ರೇಕ್ಷಕರು ದಂಗಾಗಿದ್ದಾರೆ.

ಸಿಸಿಟಿವಿ ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಲ್ಪಟ್ಟ ಈ ವೀಡಿಯೋವನ್ನು ಈಗಾಗಲೇ ಏಳು ಮಿಲಿಯನ್‌ಗಿಂತ ಹೆಚ್ಚು ಜನ ವೀಕ್ಷಿಸಿದ್ದಾರೆ. 2,70,000ಕ್ಕಿಂತಲೂ ಹೆಚ್ಚು ಜನ ವೀಡಿಯೋ ಶೇರ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.