ರೀಯೂನಿಯನ್ ದ್ವೀಪದಲ್ಲಿ ಪತ್ತೆಯಾದ ಅವಶೇಷ ಮಲೇಷ್ಯಾ ವಿಮಾನದ್ದು: ಮಲೇಷ್ಯಾ ಪ್ರಧಾನಿ
ಕಳೆದ ವಾರ ಹಿಂದೂ ಮಹಾಸಾಗರದ ರೀಯೂನಿಯನ್ ದ್ವೀಪದಲ್ಲಿ ಪತ್ತೆಯಾದ ಅವಶೇಷ ಎಂಎಚ್ -370 ಮಲೇಷ್ಯಾ ವಿಮಾನದ್ದು ಎಂದು ದೃಢಪಟ್ಟಿದೆ.

ಕೌಲಲಂಪುರ: ಕಳೆದ ವಾರ ಹಿಂದೂ ಮಹಾಸಾಗರದ ರೀಯೂನಿಯನ್ ದ್ವೀಪದಲ್ಲಿ ಪತ್ತೆಯಾದ ಅವಶೇಷ ಎಂಎಚ್ -370 ಮಲೇಷ್ಯಾ ವಿಮಾನದ್ದು ಎಂದು ದೃಢಪಟ್ಟಿದೆ.
ಮಲೇಷ್ಯಾ ಪ್ರಧಾನಿ ನಜೀಬ್ ರಜಾಕ್ ಅವರು, ಈಗ ಪತ್ತೆಯಾಗಿರುವ ಅವಶೇಷ ನಾಪತ್ತೆಯಾಗಿದ್ದ ಎಂ.ಎಚ್ 370 ವಿಮಾನದ ರೆಕ್ಕೆಯ ಭಾಗವೇ ಎಂದು ಹೇಳಿದ್ದಾರೆ.
ಫ್ರಾನ್ಸ್‌ನಲ್ಲಿರುವ ಅಂತಾರಾಷ್ಟ್ರೀಯ ತಜ್ಞರಿಂದ ಈ ಅವಶೇಷ ಪರೀಕ್ಷಿಸಲ್ಪಟ್ಟಿದ್ದು, ಅವರು ನೀಡಿದ ವರದಿಯಿಂದಾಗಿ ಇದು ದೃಢಪಟ್ಟಿರುವುದಾಗಿ ಮಲೇಷ್ಯಾ ಪ್ರಧಾನಿ ತಿಳಿಸಿದ್ದಾರೆ.
2014 ಮಾರ್ಚ್ ತಿಂಗಳಲ್ಲಿ 239 ಪ್ರಯಾಣಿಕರನ್ನು ಹೊತ್ತು ಕೌಲಲಂಪುರದಿಂದ ಬೀಜಿಂಗ್‌ಗೆ ಹೊರಟಿದ್ದ ಮಲೇಷ್ಯಾದ ಈ ವಿಮಾನ ನಿಗೂಢವಾಗಿ ನಾಪತ್ತೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


