ಬ್ರಿಟನ್‍ನಲ್ಲಿ ನೌಕರಿ ಸಿಗಲು ಸರಾಗ ಇಂಗ್ಲಿಷ್ ಕಡ್ಡಾಯ
ಕರ್ನಾಟಕದಲ್ಲಿ ಕನ್ನಡ ಕಡ್ಡಾಯ. ಕಚೇರಿಗಳಲ್ಲಿ ಕನ್ನಡ ಬಳಕೆ ಅಗತ್ಯ ಎಂಬ ನಿಯಮಗಳಂತೆಯೇ ಇದೀಗ ಬ್ರಿಟನ್ ನಲ್ಲಿಯೂ ಇಂಗ್ಲಿಷ್ ಭಾಷೆಯ ಬಗ್ಗೆ ಒಂದಷ್ಟು ಕಟ್ಟುನಿಟ್ಟು ಮಾಡಲಾಗಿದೆ...

ಲಂಡನ್: ಕರ್ನಾಟಕದಲ್ಲಿ ಕನ್ನಡ ಕಡ್ಡಾಯ. ಕಚೇರಿಗಳಲ್ಲಿ ಕನ್ನಡ ಬಳಕೆ ಅಗತ್ಯ ಎಂಬ ನಿಯಮಗಳಂತೆಯೇ ಇದೀಗ ಬ್ರಿಟನ್ ನಲ್ಲಿಯೂ ಇಂಗ್ಲಿಷ್ ಭಾಷೆಯ ಬಗ್ಗೆ ಒಂದಷ್ಟು ಕಟ್ಟುನಿಟ್ಟು ಮಾಡಲಾಗಿದೆ.
ಅಲ್ಲಿನ ಸರ್ಕಾರಿ ನೌಕರಿಗಳು ಹಾಗೂ ಪಬ್ಲಿಕ್ ಸೆಕ್ಟರ್ ಉದ್ಯೋಗಗಳು ಸಿಗಬೇಕಿದ್ದಲ್ಲಿ ಸುಲಲಿತ ಹಾಗೂ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವುದು ಕಡ್ಡಾಯ ಎಂದು ನಿಯಮ ಜಾರಿಗೊಳಿಸಲಾಗಿದೆ. ಇಂಗ್ಲಿಷ್ ಸರಾಗವಾಗಿ ಮಾತನಾಡಲು ಬಾರದಿರುವವರಿಗೆ ಕೆಲಸ ನೀಡಲಾಗುವುದಿಲ್ಲ ಎಂದು ಘೋಷಣೆ ಮಾಡಿದೆ. ಇದು ವಲಸಿಗರು ಹಾಗೂ ಅನಿವಾಸಿ
ಬ್ರಿಟಿಷರ ಮೇಲೆ ಪರಿಣಾಮ ಬೀರಲಿದೆ. ನ್ಯಾಷನಲ್ ಹೆಲ್ತ್ ಸೆಂಟರ್ ಮತ್ತು ಕೌನ್ಸಿಲ್ ನ ಉದ್ಯೋಗಿಗಳು ಜಿಸಿಎಸ್‍ಇ ಗ್ರೇಡಿ ಸಿ ಅಥವಾ ಅದಕ್ಕಿಂತ ಹೆಚ್ಚಿನ ಇಂಗ್ಲಿಷ್ ಪರಿಣತಿ
ಪಡೆದಿರಲೇಬೇಕು ಎಂದು ಸರ್ಕಾರ ತಿಳಿಸಿದ್ದು, ಪೊಲೀಸರು, ಸಮಾಜ ಸೇವಕರು, ಶಿಕ್ಷಕರು ಹಾಗೂ ಇನ್ನು ಕೆಲವು ಹುದ್ದೆಯಲ್ಲಿ ದುಡಿಯುವ ವರಿಗೆ ಸರಾಗ ಇಂಗ್ಲಿಷ್ ಕಡ್ಡಾಯ ಎಂದಿದೆ.
ಇದೇ ಮೊದಲ ಬಾರಿಗೆ ಇಂಥದೊಂದು ನಿಯಮವನ್ನು ಬ್ರಿಟನ್‍ನಲ್ಲಿ ಜಾರಿ ಮಾಡಲಾಗಿದೆ ಎನ್ನಲಾಗಿದ್ದು, ದೇಶದಲ್ಲಿ ಭಾಷೆಯ ಘನತೆ ಉಳಿಸಲು ಹಾಗೂ ಉದ್ಯೋಗದಲ್ಲಿ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಈ ಕ್ರಮ ಕೈಗೊಂಡಿರುವುದಾಗಿ ಬ್ರಿಟಿಷ್ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


