ಮಹಿಳೆ-ಮನೆ-ಬದುಕು

ಸೌಂದರ್ಯಕ್ಕೆ ಸಕ್ಕರೆ ಸೂತ್ರ

ತ್ವಚೆ ಆರೋಗ್ಯವಾಗಿರಬೇಕು. ಆದರೆ, ಅಧಿಕ ಒತ್ತಡ ಹಾಗೂ ಸಮಯದ ಅಭಾವದಿಂದಾಗಿ ತ್ವಚೆ ಬಗ್ಗೆ ಹೆಚ್ಚಿನ ಆರೈಕೆ ಮಾಡಲು...

ಸೌಂದರ್ಯಕ್ಕೆ ಸಕ್ಕರೆ ಸೂತ್ರ
ಸಾಂದರ್ಭಿಕ ಚಿತ್ರ
Published On :
ತ್ವಚೆ ಆರೋಗ್ಯವಾಗಿರಬೇಕು. ಆದರೆ, ಅಧಿಕ ಒತ್ತಡ ಹಾಗೂ ಸಮಯದ ಅಭಾವದಿಂದಾಗಿ ತ್ವಚೆ ಬಗ್ಗೆ ಹೆಚ್ಚಿನ ಆರೈಕೆ ಮಾಡಲು ಆಗುವುದಿಲ್ಲ. ಇದರಿಂದ ಮುಖದಲ್ಲಿ ನೆರಿಗೆಗಳು ಉಂಟಾಗುತ್ತದೆ. ತ್ವಚೆ ಕಳೆಗುಂದಿ ಕಾಂತಿ ಹೀನವಾಗುತ್ತದೆ. ಸಕ್ಕರೆ ಬಳಸಿ ಇಂತಹ ಸಮಸ್ಯೆಗೆ ಗುಡ್ ಬೈ ಹೇಳಬಹುದು. 
ಸಕ್ಕರೆ ಬಾಯಿಗಷ್ಟೇ ಸಿಹಿ ಅಲ್ಲ ಸುಂದರವಾದ ತ್ವಚೆಯನ್ನು ನೀಡುತ್ತದೆ. ಸುಂದರ ತ್ವಚೆ ನೀಡಲು ಹೆಚ್ಚು ಸಮಯ ಕೂಡ ಬೇಕಾಗುವುದಿಲ್ಲ. ಸಕ್ಕರೆಯನ್ನಾ ಬೇರೆ ಮಿಶ್ರಣಗಳೊಂದಿಗೆ ಬೆರಸಿ ತ್ವಚೆಗೆ ಲೇಪಿಸುವುದರಿಂದ ಸಾಕಷ್ಟು ಪ್ರಯೋಜನಗಳು ದೊರೆಯುತ್ತದೆ. ಎಲ್ಲಾ ರೀತಿಯ ತ್ವಚೆಯವರು ಸಕ್ಕರೆಯನ್ನು ಬಳಸಬಹುದು. 
ತ್ವಚೆಗೆ ಕಾಂತಿ ನೀಡಲು ಸಕ್ಕರೆ ಸ್ಕ್ರಬ್ ಹೀಗಿರಲಿ
ಸಕ್ಕರೆ-ನಿಂಬೆ: ಸಕ್ಕರೆಗೆ ಸಮ ಪ್ರಮಾಣದಲ್ಲಿ ನಿಂಬೆರಸ ಬೆರಸಿ. ನಿಂಬೆರಸದಲ್ಲಿ ಸಕ್ಕರೆ ಕರಗಿದ ಬಳಿಕ ಮುಖಕ್ಕೆ ಹಚ್ಚಿದರೆ ಮೊಡವೆಗಳು ಕಡಿಮೆಯಾಗುತ್ತದೆ. 
ಸಕ್ಕರೆ-ಆಲೀವ್ ಎಣ್ಣೆ: ಒಣ ತ್ವಚೆಯವರಿಗೆ ಸಕ್ಕರೆ ಮತ್ತು ಆಲೀವ್ ಎಣ್ಣೆ ತುಂಬಾ ಸಹಕಾರಿ. ಸಕ್ಕರೆಗೆ ಸಮಪ್ರಮಾಣದಲ್ಲಿ ಆಲೀವ್ ಎಣ್ಣೆ ಮತ್ತು ಜೇನು ಮಿಶ್ರಣ ಮಾಡಿ, ಇದನ್ನು ಮುಖಕ್ಕೆ ಹಚ್ಚಿ ವೃತ್ತಾಕಾರವಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಒಣ ತ್ವಚೆಯ ಸಮಸ್ಯೆ ನಿವಾರಿಸಬಹುದು. 
ಸಕ್ಕರೆ-ರೋಸ್ ಮೇರಿ ಎಣ್ಣೆ-ಪುದೀನಾ: ಹೊರಗೆ ಹೋದರೂ ತ್ವಚೆ ತನ್ನ ತಾಜಾತನ ಉಳಿಸಿಕೊಳ್ಳುವುದಕ್ಕೆ ಹಾಗೂ ತ್ವಚೆ ಹೊಳೆಯುವಂತೆ ಮಾಡಲು ಸಕ್ಕರೆ, ರೋಸ್ ಮೆರಿ ಆಯಿಲ್ ಮತ್ತು ಪುದಿನ ರಸ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಸ್ಕ್ರಬ್ ನಂತೆ ಮುಖಕ್ಕೆ ಹಚ್ಚಿ. 10 ನಿಮಿಷದ ನಂತರ ಮುಖ ತೊಳೆದರೆ ತನ್ನ ತಾಜಾತನ ಉಳಿಸಿಕೊಳ್ಳುತ್ತದೆ. 
ಸಕ್ಕರೆ-ಕಾಫಿಪುಡಿ
ಎರಡು ಚಮಚ ಕಾಫಿ ಪುಡಿಗೆ ಒಂದು ಚಮಚ ಸಕ್ಕರೆ ಹಾಕಿ, ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿ. ಮುಖಕ್ಕೆ ಸ್ಕ್ರಬ್ ಮಾಡಿ. ಹೀಗೆ ಮಾಡುವುದರಿಂದ ತ್ವಚೆಯ ಅಂದ ಹೆಚ್ಚಾಗುತ್ತದೆ. ಕಾಫಿ ಹಾಗೂ ಸಕ್ಕರೆ ಮೀಶ್ರಣ ತ್ವಚೆಯ ಮೇಲಿರೋ ಹಠಮಾರಿ ಸತ್ತ ಜೀವಕೋಶಗಳನ್ನಾ ನಿವಾರಸುತ್ತದೆ.
ಸಕ್ಕರೆ- ಜೇನು-ಮೊಸರು
ಹೊರಗಡೆ ಓಡಾಡಿ ತ್ವಚೆ ಕಪ್ಪಾಗಿದ್ದರೆ ಅದಕ್ಕೆ ಈ ಮಿಶ್ರಣವನ್ನು ಬಳಸಿ. ಸಕ್ಕರೆ, ಜೇನು ಹಾಗೂ ಮೊಸರು ಮಿಕ್ಸ್ ಮಾಡಿದ ಸ್ಕ್ರಬ್ ಬಳಸಿದರೆ ತ್ವಚೆ ಕಪ್ಪಾಗುವಿಕೆಯನ್ನು ತಡೆಯಬಹುದು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.