ಗಂಡನ ಮರಣದ ನಂತರ ಹೆಂಡತಿ ಹೆಚ್ಚು ಆರೋಗ್ಯವಂತೆ: ಸಂಶೋಧನೆ
ಗಂಡನ ಮರಣಾನಂತರ ಹೆಂಡತಿ ಆರೋಗ್ಯ ವಂತಳಾಗಿರುತ್ತಾರೆ ಎಂದು ಹೊಸ ಸಂಶೋಧನೆಯ ಅಧ್ಯಯನವೊಂದು ತಿಳಿಸಿದೆ....

ಇಟಲಿ: ವಿವಾಹದಿಂದ ಪತಿ ಪತ್ನಿ ಇಬ್ಬರು ಆರೋಗ್ಯವಂತರಾಗಿರುತ್ತಾರೆ. ಹೃದಯ ಸ್ಥಂಬನ, ಕ್ಯಾನ್ಸರ್, ಮಾನಸಿಕ ಖಿನ್ನತೆಯಿಂದ ದೂರಾಗಿ ವಿವಾಹವಾದ ಜೋಡಿ ಆರೋಗ್ಯವಾಗಿರುತ್ತಾರೆ ಎಂಬುದು ಹಳೇಯ ಸಂಶೋಧನೆ.
ಆದರೆ ಹೊಸ ಸಂಶೋಧನೆಯೊಂದರ ಪ್ರಕಾರ ಗಂಡನ ಮರಣಾನಂತರ ಹೆಂಡತಿ ಆರೋಗ್ಯ ವಂತಳಾಗಿರುತ್ತಾರೆ ಎಂದು ಹೊಸ ಸಂಶೋಧನೆಯ ಅಧ್ಯಯನವೊಂದು ತಿಳಿಸಿದೆ.
ಇಟಲಿಯ ಪಡೋವಾ ವಿವಿ ನಡೆಸಿದ ಸಂಶೋಧನೆಯಲ್ಲಿ ವಿಧವೆ ಹೆಚ್ಚು ಆರೋಗ್ಯವಾಗಿರುತ್ತಾಳೆ ಎಂದು ತಿಳಿಸಿದೆ, ಗಂಡನ ಮರಣಾನಂತರ ಪತ್ನಿಗೆ, ಪತಿ ಬದುಕಿದ್ದಾಗ ಇರುವ ಮಾನಸಿಕ ಹೊರೆ ಆತನ ಸತ್ತ ನಂತರ ಕಡಿಮೆಯಾಗುತ್ತದೆ. ಹೀಗಾಗಿ ಆಕೆ ಆರೋಗ್ಯ ವಂತಳಾಗಿರುತ್ತಾಳೆ. ಇಟಲಿಯ 733 ಪುರುಷರು ಹಾಗೂ 1.154 ಮಂದಿ ಮಹಿಳೆಯರ ಮೇಲೆ ವಿವಿ ಅಧ್ಯಯನ ತಂಡ ಸಂಶೋಧನೆ ನಡೆಸಿತ್ತು.
ಆದರೆ ಪತ್ನಿ ಮರಣಾನಂತರ ಪತಿ ಮಾನಸಿಕ ಖಿನ್ನತೆಗೊಳಗಾಗಿ ಅನಾರೋಗ್ಯ ಪೀಡಿತನಾಗುತ್ತಾನೆ. ಏಕೆಂದರೇ ಗಂಡ ಹೆಚ್ಚಿನ ಪ್ರಮಾಣದಲ್ಲಿ ಹೆಂಡತಿ ಮೇಲೆ ಅವಲಂಬಿತನಾಗಿರುತ್ತಾನೆ. ಹೆಂಡತಿ ಬದುಕಿದ್ದಾಗ ಗಂಡ ಆಕೆಯಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾನೆ. ಆದರೆ ಹೆಂಡತಿಗೆ ಸಂಸಾರದ ಹೊರೆ ಹಾಗೂ ಒತ್ತಡದಿಂದ ಹೆಚ್ಚಿನ ನಿರಾಶೆಗೊಳಗಾಗುತ್ತಾಳೆ.
ಇನ್ನು ಮಹಿಳೆ ಪುರುಷನಿಗಿಂತ ಹೆಚ್ಚು ಕಾಲ ಬದುಕುತ್ತಾಳೆ, ತನ್ನ ಜೀವಿತ ಕಾಲದಲ್ಲಿ ಸಂಸಾರದ ಹೊರೆಯಿಂದಾಗಿ, ಜೊತೆಗೆ ಗಂನ ಆರೈಕೆ ಮಾಡುವುದರಿಂದ ಆಕೆಗೆ ಹೆಚ್ಚಿನ ಮಾನಸಿಕ ಹಾಗೂ ದೈಹಿಕ ಆಯಾಸ ಉಂಟಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


