ಪೆಡಲ್ ತುಳಿದರೆ ಮನೆಗೆ ಕರೆಂಟ್
ವಿದ್ಯುತ್ ಇಲ್ಲದೆ ಕತ್ತಲಲ್ಲಿ ನಲುಗಿರುವ ಗ್ರಾಮೀಣ ಭಾರತವನ್ನು ಬೆಳಗಿಸಲು ಭಾರತೀಯ ಮೂಲದ ಅಮೆರಿಕದ ವ್ಯಕ್ತಿ ಮನೋಜ್ ಭಾರ್ಗವ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಹೊಂದಿದ್ದಾರೆ...

ಹ್ಯೂಸ್ಟನ್: ವಿದ್ಯುತ್ ಇಲ್ಲದೆ ಕತ್ತಲಲ್ಲಿ ನಲುಗಿರುವ ಗ್ರಾಮೀಣ ಭಾರತವನ್ನು ಬೆಳಗಿಸಲು ಭಾರತೀಯ ಮೂಲದ ಅಮೆರಿಕದ ವ್ಯಕ್ತಿ ಮನೋಜ್ ಭಾರ್ಗವ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಹೊಂದಿದ್ದಾರೆ.
ಭಾರ್ಗವ ವಿದ್ಯುತ್ ಸಂಪರ್ಕ ಇಲ್ಲದ ಭಾರತದ ಹಳ್ಳಿಗಳಿಗೆ 10 ಸಾವಿರ ಸ್ಟೇಷನರಿ ಬೈಕ್‍ಗಳನ್ನು ಉಚಿತವಾಗಿ ವಿತರಿಸಲು ಮುಂದಾಗಿದ್ದಾರೆ. ಈ ಸ್ಟೇಷನರಿ ಬೈಕ್ ಸೈಕಲ್ ಮಾದರಿಯಲ್ಲಿದ್ದು ಬ್ಯಾಟರಿ ಜೋಡಿಸಿರುತ್ತೆ. ಒಂದು ಗಂಟೆ ಕಾಲ ತುಳಿದರೆ ಇಡೀ ದಿನಕ್ಕೆ ಬೇಕಾಗುವಷ್ಟು ವಿದ್ಯುತ್ ಉತ್ಪಾದನೆ ಯಾಗಲಿದೆ. ಬೈಕ್ ಇಲ್ಲದಿರುವ ಮನೆಗಳವರು ಬ್ಯಾಟರಿ ಮಾತ್ರ ಹೊಂದಬಹುದಾಗಿದ್ದು ಬೈಕ್‍ಗೆ ಬ್ಯಾಟರಿ ಜೋಡಿಸಿ ತುಳಿಯುವ ಮೂಲಕ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಮುಂದಿನ ವರ್ಷ ಈ ಬೈಕ್‍ಗಳನ್ನು ವಿತರಿಸಲಿದ್ದಾರೆ.
ಮೊದಲಿಗೆ ಉತ್ತರಾಖಂಡದ 20 ಸಣ್ಣ ಹಳ್ಳಿಗಳಿಗೆ ವಿತರಿಸಲಾಗುವುದು. ನಂತರ ಇತರ ಹಳ್ಳಿಗಳಿಗೆ ವಿತರಿಸಲಾಗುವುದು ಎಂದು ಭಾರ್ಗವ ಹೇಳಿದ್ದಾರೆ. ಈ ಯೋಜನೆಯಿಂದ ಕೋಟ್ಯಂತರ ಜನರಿಗೆ ಬೆಳಕು ಸಿಕ್ಕಿದಂತಾಗಲಿದೆ. ಬೈಕ್ ವಿತರಿಸುವವರಿಗೆ ಕಮೀಷನ್ ನೀಡುವ ಯೋಜನೆಯನ್ನೂ ಅವರು ಹೊಂದಿದ್ದಾರೆ. ಒಂದು ಹಳ್ಳಿಯವರು ಒಂದು ಬೈಕ್ ಖರೀದಿಸಿ ಬೇಕಾದವರು ಬ್ಯಾಟರಿಗಳನ್ನು ಖರೀದಿಸಬಹುದು. ವಿದ್ಯುತ್ ಅಗತ್ಯವಿರುವವರು ಬ್ಯಾಟರಿಯನ್ನು ಜೋಡಿಸಿ ಪೆಡಲಿಂಗ್ ಮಾಡುವ ಮೂಲಕ ಚಾರ್ಜ್ ಮಾಡಿಕೊಳ್ಳಬಹುದು. 1967ರಲ್ಲಿ ಕುಟುಂಬ ಸಮೇತ ಹೋಗಿ ಅಮೆರಿಕದ ಮಿಚಿಗನ್‍ನಲ್ಲಿ ನೆಲೆಸಿದ್ದಾರೆ. ಬೈಕ್‍ಗಳನ್ನು ವಿತರಿಸುವುದೇ ದೊಡ್ಡ ಸವಾಲಾಗಿದೆ ಎಂದಿದ್ದಾರೆ.
ಭಾರ್ಗವ 5 ಗಂಟೆಗಳ ಎನರ್ಜಿ ಪಾನೀಯ ಉತ್ಪಾದಿಸಿ ಪ್ರಸಿದ್ಧರಾಗಿದ್ದಾರೆ. ಮಿಚಿಗನ್‍ನ ಫಾರ್ಮಿಂಗ್ಟನ್ ಹಿಲ್ಸ್‍ನಲ್ಲಿರುವ ಭಾರ್ಗವ ಅವರ ಸ್ಟೇಜ್2 ಲ್ಯಾಬೋರೇಟರೀಸ್‍ನಲ್ಲಿ ನೂರಕ್ಕೂ ಹೆಚ್ಚು ಎಂಜಿನಿಯರ್‍ಗಳಿದ್ದು ಹಲವಾರು ಪ್ರಯೋಗಗಳನ್ನು ನಡೆಸಿದ್ದಾರೆ. ಸರಳ ತಂತ್ರಜ್ಞಾನ, ಸುಲಭ ಅಳವಡಿಕೆ ಮತ್ತು ಸಾಗಣೆ ಇರುವಂತಹ ಸಾಧನಗಳನ್ನು ತಯಾರಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


