ಮಹಿಳೆ-ಮನೆ-ಬದುಕು

ನೆಲ್ಲಿ ಕಾಂತಿ

ನೆಲ್ಲಿ ಕಾಂತಿ
Published On :

*    ಅಜೀರ್ಣ, ಹೊಟ್ಟೆನೋವಿನ ಬಾಧೆಗೆ ಒಣಗಿಸಿಟ್ಟ ನೆಲ್ಲಿಕಾಯಿಯ ಬೀಜವನ್ನು ಮಜ್ಜಿಗೆ ಜತೆ ಅರೆದು ಕುಡಿದರೆ ನೋವು ಉಪಶಮನವಾಗುತ್ತದೆ.
*    ಚರ್ಮದ ಕಾಂತಿಯುತ ಬೆಳವಣಿಗೆಗೆ ನೆಲ್ಲಿಕಾಯಿ ಪ್ರಯೋಜನಕಾರಿ. ಮುಖದ ಮೇಲಿನ ನೆರಿಗೆ, ಸುಕ್ಕುಗಟ್ಟುವಿಕೆ ಹೋಗಲಾಡಿಸಲು ನೆಲ್ಲಿಕಾಯಿಯ ರಸವನ್ನು ಹಚ್ಚಬೇಕು.
*    ತಲೆಯ ಹೊಟ್ಟು, ಬಿಳಿ ಕೂದಲು ನಿವಾರಣೆಗೆ ನೆಲ್ಲಿಕಾಯಿ ರಸವನ್ನು ತಲೆಗೆ ಹಚ್ಚುತ್ತಾ ಬಂದರೆ ಕಾಂತಿಯುತ ತಲೆಗೂದಲು ನಿಮ್ಮದಾಗುತ್ತದೆ. ತಲೆಗೂ ತಂಪು. ಕೂದಲೂ ಚೆನ್ನಾಗಿ ಬೆಳೆಯುತ್ತದೆ.
*    ಜೀರ್ಣಕ್ರಿಯೆಗೆ ನೆಲ್ಲಿಕಾಯಿ ಅತ್ಯುತ್ತಮ. ದೇಹದ ತೂಕ ಕಡಿಮೆ ಮಾಡುತ್ತದೆ. ರಕ್ತವನ್ನು ಶುದ್ಧಿ ಮಾಡುತ್ತದೆ.
*    ಮುಖದ ಮೇಲಿನ ಮೊಡವೆ ನಿವಾರಣೆಗೂ ಪ್ರಯೋಜನಕಾರಿ.
*    ನೆಲ್ಲಿಕಾಯಿ ರಸಕ್ಕೆ ಏಲಕ್ಕಿಪುಡಿ, ಸಕ್ಕರೆ ಹಾಕಿ ಜ್ಯೂಸ್ ತಯಾರಿಸಿ ಕುಡಿದರೆ ಸುಸ್ತು ಪರಿಹಾರವಾಗುತ್ತದೆ.
*    ನೆಲ್ಲಿಕಾಯಿಯನ್ನು ಉಪ್ಪಿನಕಾಯಿ ಆರೋಗ್ಯಕ್ಕೆ ಹಿತ.
*    ನೆಲ್ಲಿಕಾಯಿಯ ಎಲೆಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ ಅಜೀರ್ಣ, ಹೊಟ್ಟೆನೋವಿನ ಔಷಧಿಯಾಗಿ ಬಳಸಬಹುದು.
*    ನೆಲ್ಲಿಕಾಯಿಯನ್ನು ಕತ್ತರಿಸಿ ಸಕ್ಕರೆ ಪಾಕದಲ್ಲಿ ಮಿಶ್ರಣ ಮಾಡಿ ಬಿಸಿಲಿನಲ್ಲಿ ಒಣಗಿಸಿಕೊಂಡರೆ ತಿನ್ನಲು ರುಚಿಯಾಗಿರುತ್ತದೆ.ಟಿ


-ಸುಮನಾ ಉಪಾಧ್ಯಾಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.