ಮಹಿಳೆ-ಮನೆ-ಬದುಕು

ರಸಭರಿತ ತುಟಿ

ಸುಂದರವಾದ ತುಟಿ ಮುಖದಲ್ಲಿನ ಗ್ಲಾಮರಸ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸುಂದರ ತುಟಿ ನಗುತ್ತಿದ್ದರೆ...

ರಸಭರಿತ ತುಟಿ
Published On :

ಸುಂದರವಾದ ತುಟಿ ಮುಖದಲ್ಲಿನ ಗ್ಲಾಮರಸ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸುಂದರ ತುಟಿ ನಗುತ್ತಿದ್ದರೆ ನೋಡುವುದೇ ಚೆಂದ. ಈಗ ಬಿಸಿಲು ದಿನದಿನಕ್ಕೂ ಹೆಚ್ಚುತ್ತಲೇ ಹೋಗುತ್ತಿದೆ. ಬಿಸಿಲಿನ ಬೇಗೆಗೆ ತುಟಿಯ ಅಂದ ಮಾಸುವುದು ಗ್ಯಾರಂಟಿ. ಇನ್ನು ಟೀ, ಕಾಫಿ ಸೇವನೆ, ಧೂಮಪಾನ ಮಾಡಿದರಂತೂ ತುಟಿ ಕಪ್ಪಾಗಿ ಅಂದಗೆಡುವುದು ಖಂಡಿತ. ಹಾಗಾದರೆ ತುಟಿಯ ಅಂದವನ್ನು ಕಾಪಾಡಿಕೊಳ್ಳುವುದು ಹೇಗೆ? ಲಿಪ್ ಸ್ಕ್ರಬ್ ಬಳಸುವುದರಿಂದ, ಪೀಲ್ಸ್ ಮಾಡುವುದರಿಂದ ತುಟಿ ಅಂದ ಹೆಚ್ಚಿಸಬಹುದು. ಆದರೆ ಅವೆಲ್ಲ ದುಬಾರಿ! ಹೆಚ್ಚಿನ ಖರ್ಚಿಲ್ಲದೆ ತಾಜಾ ತುಟಿಗಳನ್ನು ಪಡೆಯುವ ಬಗೆ ಹೇಗೆ? ಇಲ್ಲಿದೆ ಓದಿ..
- ನಿಂಬೆರಸ ಹಾಗೂ ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ಹದವಾಗಿ ತುಟಿಯ ಮೇಲೆ ಸವರಬೇಕು. ಒಂದು ಗಂಟೆಯ ನಂತರ ಮೃದುವಾದ ಒದ್ದೆ ಬಟ್ಟೆಯಿಂದ ಒರೆಸಬೇಕು. ಹೀಗೆ ಮಾಡುವುದರಿಂದ ಸಿಟ್ರಸ್ ರಸವು ತುಟಿಯ ತ್ವಚೆಯನ್ನು ಶುದ್ಧಗೊಳಿಸುವುದರೊಂದಿಗೆ ತುಟಿಯ ಬಣ್ಣವನ್ನು ಹೆಚ್ಚಿಸುತ್ತದೆ. ಜೇನುತುಪ್ಪ ತುಟಿಗೆ ಗುಲಾಬಿ ಬಣ್ಣ ಹೆಚ್ಚಲು ಸಹಕರಿಸುತ್ತದೆ. ದಿನಕ್ಕೆ 4-5 ಬಾರಿ ಈ ಮಿಶ್ರಣವನ್ನು ಹಚ್ಚುವುದು ಒಳಿತು. ಒಮ್ಮೆ ಮಾಡಿಟ್ಟುಕೊಂಡರೆ ಒಂದು ವಾರ ಬಳಸಬಹುದು.
    ಪ್ರತಿದಿನ ರಾತ್ರಿ ಮಲಗುವ ಮುಂಚೆ ನೈಸರ್ಗಿಕ ಎಣ್ಣೆಯನ್ನು ಹತ್ತಿಯಿಂದ ಅದ್ದಿ ತುಟಿಗೆ ಲೇಪಿಸಿಕೊಳ್ಳುವ ಅಭ್ಯಾಸ ಒಳ್ಳೆಯದು. ಬಿಸಿಲಿನಿಂದ ಒಣಗಿದ ತುಟಿಗಳಿಗೆ ರಕ್ತಸಂಚಾರ ಹೆಚ್ಚಿಸಿ, ಬೆಳಗಾಗುವಷ್ಟರಲ್ಲಿ ರಸಭರಿತ ತುಟಿ ನಿಮ್ಮದಾಗಿರುತ್ತದೆ. ಇದಕ್ಕೆ ಬಾದಾಮಿ ತೈಲವನ್ನು ಬಳಸುವುದು ಸೂಕ್ತ.
    ದಿನವೊಂದಕ್ಕೆ ಕಡಿಮೆ ಎಂದರೂ 8-10 ಗ್ಲಾಸ್ ನೀರು ಸೇವನೆ ಅಗತ್ಯ. ನೀರಿನಂಶ ದೇಹದಲ್ಲಿ ಹೆಚ್ಚಿದಷ್ಟೂ ತುಟಿಗಳು ತೇವಭರಿತವಾಗಿರುತ್ತವೆ. ಬಿಡುವಿರುವಾಗೆಲ್ಲ ಬೀಟ್‌ರೂಟ್ ತುಂಡುಗಳನ್ನು ತುಟಿ ಮೇಲೆ ಮೃದುವಾಗಿ ಸವರುತ್ತಿದ್ದರೆ ತುಟಿಯ ಗುಲಾಬಿ ಬಣ್ಣ ಇಮ್ಮಡಿಗೊಳ್ಳುತ್ತದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.