ಮಹಿಳೆ-ಮನೆ-ಬದುಕು

ನಿನ್ನೊಲವಿನೆಡೆ

ನಿನ್ನೊಲವಿನೆಡೆ
Published On :

ಅಚ್ಚಳಿಯದ ಬಿಚ್ಚು ಮನದ ಬೆಚ್ಚನೆಯ ಮಾತಿಗೆ ಅಡಿ ಇಡುವ ಮುನ್ನ್ನ...
ಕೊಚ್ಚಿ ಹೋದವು ಮನವು ಹುಚ್ಚು ಹೊಳೆಯೊಳಗೆ...
ಹರೆಯದ ವಯಸ್ಸಿನ ಭಾವನೆಗಳು ಅನೇಕ, ತುಮುಲಗಳು ಹಲವಾರು. ತಮ್ಮ ಜೀವನಕ್ಕೊಂದು ಅರ್ಥ ಹುಡುಕುವ ಸಾಂಗತ್ಯ ಬಯಸುವ ತವಕವಿದೆ. ಮೂಡುವ ಭಾವನೆಗೆ ಯಾವೊಂದು ರೀತಿಯಲ್ಲಾದರೂ ಪ್ರಕಟವಾಗುವ ಬಯಕೆ ಇದೆ. ಇದರ ನಡುವೆ, ಅದು ಪ್ರೀತಿಯೋ, ಪ್ರೇಮವೋ, ಸ್ನ್ನೇಹವೋ ಅರ್ಥವಾಗದೇ ಒದ್ದಾಡುವ ಸ್ಥಿತಿ...
ಕಿಟಕಿ ತೆರೆದಾಗ ಕೊಠಡಿಯೊಳಗೆ ಸುಯ್ಯನೆ ಗಾಳಿ ಬರುತ್ತದೆ, ಬಾನಂಚಲಿ ಚಂದ್ರ, ತಾರೆಗಳು ಮಿನುಗುವುದು ಕಾಣುತ್ತವೆ ನಿಜ. ಆದರೆ, ಪಿಳಪಿಳನೆ ಕಣ್ಣರಳಿಸಿ, ಬಾಯಲ್ಲಿ ಜೊಲ್ಲು ಬಸಿಯುತ್ತ, ಏದುಸಿರಿನೊಂದಿಗೆ ಲಗುಬಗೆಯಿಂದ ಕಿಟಕಿಯಿಂದ ಒಳಕ್ಕಡಿಯಿಡುವ ಇರುವೆಯನ್ನ್ನೊಮ್ಮೆ ಗಮನಿಸಿದ್ದೀರಾ? ಆ ಕ್ಷಣದಲ್ಲಿ ಇಡೀ ಜಗತ್ತೇ ಮೌನವಾಗಿದ್ದಂತೆ ಅನಿಸತೊಡಗುತ್ತದೆ. ಬರಿಯ ಸ್ತಬ್ಧ ಚಿತ್ರಗಳ ಮೆರವಣಿಗೆ, ಹಾಳೆಗಳ ಮೇಲೆಲ್ಲ ಬರಿಯ ಸಾಲು ಕವಿತೆಗಳು, ಆ ಸ್ತಬ್ಧತೆಯಲ್ಲಿ ನಾನೂ ಸ್ತಬ್ಧವಾಗತೊಡಗುತ್ತೇನೆ. ಕಣ್ಣಿಗೆ ಕಾಣದಿರುವ ಕತ್ತಲೆಯೊಳಗೆ ಇಳಿದು ಕಣ್ಣ ಮುಚ್ಚಿಕೊಳ್ಳುತ್ತೇನೆ. ಆಗ ಕಣ್ಣಿಗೆ ಕಾಣುವುದು ಸಿಹಿ ರಸ ತುಂಬಿದ ದ್ರಾಕ್ಷಿ ಹಣ್ಣಿನಂತಿರುವ ಒಲವು ಹಾಗೂ ಇರುವೆಯ ನಗುಮುಖ.
ವಾಸ್ತವತೆಯ ತೆಕ್ಕೆಯಲ್ಲಿ ನಲುಗುತ್ತ, ಮನದೊಳಗೆ ಭೋರ್ಗರೆವ ಅಲೆ ಎದ್ದರೂ ಸುಮ್ಮನಾಗುತ್ತೇನೆ. ಮೌನವಾದಾಗ ಮಾತ್ರ ಈ ಪ್ರಪಂಚ ಏನು ಎಂಬುದು ಅರ್ಥವಾಗುವುದಿಲ್ಲ. ಆ ಸಮಯದಲ್ಲಿ ಸುಮ್ಮನೆ ಕುಳಿತು ವಿಚಾರ ಮಾಡುತ್ತೇನೆ, ನನ್ನ್ನ ಜೀವನದ ಚಿತ್ರಣಗಳು ನನಗರಿವಿಲ್ಲದೆಯೇ ಹೃದಯದ ಪರದೆಯ ಮೇಲೆ ಬಂದು ನಿಲ್ಲುತ್ತವೆ. ಜೀವನದಲ್ಲಿ ಇನ್ನ್ನೂ ಏನೋ ಇದೆ ಎಂಬುದು ನನಗನಿಸತೊಡಗುತ್ತದೆ. ನೀನು ನನ್ನ್ನ ಜೀವನದಲ್ಲಿ ಪ್ರವೇಶಿಸದಿದ್ದರೆ ಎಂದು ವಿಚಾರ ಮಾಡಬೇಕೆಂದುಕೊಂಡರೂ ಅದು ನನ್ನಿಂದಾಗದೇ ಭಯವಾಗಿ ಎಲ್ಲ ಕೋಣೆಯ ಲೈಟ್‌ಗಳನ್ನ್ನು ಹೊತ್ತಿಸಿಕೊಳ್ಳುತ್ತೇನೆ. ಇಷ್ಟೇ ಮತ್ತೆ ನಿನ್ನ್ನೊಂದಿಗೆ ಮಾತಿಗೆ ನಿಲ್ಲುತ್ತೇನೆ. ಆಗ ನಿನ್ನ ಭಾವಚಿತ್ರ ನಕ್ಕಂತೆ ತೋರುತ್ತದೆ.
ಪ್ರಿತಿಯೋ, ಪ್ರೇಮವೋ, ಸ್ನೇಹವೋ ಏನೆಂದು ಅರ್ಥವಾಗದೇ ಭಾವನೆಯ ತೊಳಲಾಟದಲ್ಲಿದ್ದೇನೆ. ನಿನ್ನ ಸ್ಫೂರ್ತಿ ತುಂಬುವ ಮಾತುಗಳು ಜತೆ ಇರುತ್ತವೆ ಎಂಬುದು ನನಗೆ ಗೊತ್ತು. ಆದರೆ, ಕೆಲವೊಂದು ಅರ್ಥವಾದಂತೆ ಅರ್ಥವೇ ಆಗುತ್ತಿಲ್ಲ.
ನೀನಿಲ್ಲದ ಕ್ಷಣದಲ್ಲಿ ಏನೆಂದು ಬರೆಯಲಿ...? ನೀ ಬಂದು ಸ್ಫೂರ್ತಿಯಾದರೆ ಹೊಸ ಹುಟ್ಟು ನನಗೆ. ಸೂರ್ಯನ ತಂದುಕೊಡು ಎನ್ನಲಾರೆ, ಬೆಳದಿಂಗಳೇ ಬೇಕೆಂದು ಕೇಳಲಾರೆ. ಚಿಕ್ಕದೊಂದು ಹಣತೆ ದೀಪ ಹಚ್ಚಲಾರೆಯಾ..? ಕವನಕ್ಕೆ ಸ್ಫೂರ್ತಿಯಾಗಿ ನಿಲ್ಲಲಾರೆಯಾ...?
ಸದಾ ನನ್ನ್ನ ಕೈಯಲ್ಲಿ ಮೂಡುವ ಕವಿತೆಗಳು ನಿನ್ನ್ನ ಸ್ಫೂರ್ತಿಯ ಸಂಕೇತವಾಗಿದೆ. ಕಾರ್ಗತ್ತಲೆಯೊಳಗೆ ಹಣತೆ ದೀಪದ ಗೆಳೆಯ ನೀನು ಅಂದುಕೊಳ್ಳುತ್ತೇನೆ. ಆದರೆ ನೀನು ನನಗೇನಾಗಬೇಕು ಎನ್ನ್ನುವುದು ಅರ್ಥವಾಗುತ್ತಲೇ ಇಲ್ಲ. ಆದರೆ ಬದುಕೇ ಹಾಗೆ, ಮಿಂಚುಗಳು ಮೇಳೈಸುವಂತೆ ಇಡೀ ಬದುಕೇ ನಿನ್ನೆದುರು ಬಂದು ನಿಂತಾಗ, ನಾನು ಮೊದಲಿನಂತೆ ಮರಳುತ್ತೇನೆಯೇ ಎಂಬ ಅನುಮಾನ ನನ್ನನ್ನು ಕಾಡುತ್ತದೆ. ಆತ್ಮದೊಳಿರಲು ಆತ್ಮಜ್ಯೋತಿ ಪ್ರೀತಿ ಯಾರದು, ಸ್ನೇಹ ಯಾರದು... ಕವನ ಸ್ಫೂರ್ತಿ ಯಾರದೋ... ಹಣತೆ ಬತ್ತಿ ಯಾರದೋ... ಎನ್ನ್ನುವಂತೆ ಒಂದು ಮನಸ್ಸು ಜೀವನದಲ್ಲಿ ಏನೆಲ್ಲವೂ ಆಗಬಲ್ಲದು ಎಂಬುದಕ್ಕೆ ನೀನೇ ಜೀವಂತ ಅನಿಸಿಕೆ. ನಿನ್ನಂಥ ಆತ್ಮೀಯ ಗೆಳೆಯ ನನಗೆ ಇನ್ನಾರಿರಲೂ ಸಾಧ್ಯವಿಲ್ಲ.
ಇಂದಿನ ಒಂದು ಶಬ್ದಕ್ಕೂ ನೀನೇ ಸ್ಫೂರ್ತಿ ಎಂಬುದು ನನಗೂ ಗೊತ್ತು ನಿನಗೂ ಗೊತ್ತು. ಆದರೆ ಹೇಳಕೊಳ್ಳಬೇಕು ಎಂಬುದು ನಮಗೆ ಅರ್ಥ ಆಗಲೇ ಇಲ್ಲ. ಆದರೆ ಭಾವನೆಯ ಬೆನ್ನಹತ್ತಿ ತುತ್ತತುದಿಯಲ್ಲಿ ನೀನು ಮೇರು ಪರ್ವತವಾಗಿರುವುದನ್ನು ನಾನು ನಿನಗೆ ತೋರಿಸಬೇಕೆಂದರೆ ಅದು ಸಾಧ್ಯವೇ ಇಲ್ಲ. ಆದರೆ ನಾನು ಆ ಕ್ಷಣಕ್ಕಾಗಿ ಹಾತೊರೆಯುತ್ತೇನೆ. ನನ್ನನ್ನು ನಾನು ನೋಡಿಕೊಂಡರೂ ನನ್ನ್ನಲ್ಲಿ ನೀನು ಕಾಣುತ್ತಿದ್ದೀಯಾ. ಬದುಕಿನ ಪಯಣದ ದಾರಿಯ ತುಂಬ ಸಿಗಬಹುದು ನೂರಾರು ಕವಲುದಾರಿ, ಸಿಗಬಹುದು ಸಾವಿರಾರು ಮನೆ, ಮನ, ಆದರೆ ನಿನ್ನ್ನಂಥ ಆತ್ಮೀಯ ನನ್ನ್ನ ಜೀವನದ ಯಾವ ಗಳಿಗೆಯಲ್ಲೂ ಸಿಗಲಾರ, ಯಾಕೆಂದರೆ ಇನ್ನ್ನೊಮ್ಮೆ ಆ ಬದುಕು, ಆ ನೋಟ... ಆ ಸ್ನ್ನೇಹ... ಪ್ರೀತಿ ಸಂದೇಶ... ಇದಕ್ಕೆ ಏನೆಂದು ಹೆಸರಿಡಲಿ? ಮನದ ಮಾಯೆ...?
ಬರೆಯಬಹುದು ಬದುಕಿನುದ್ದಕ್ಕೂ ಆದರೆ ಬದುಕ ಬರೆಯಲಾಗದು.

=  ವಿನುತಾ ಹೆಗಡೆ
vntvnk@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.